ತುಮಕೂರು: ಸತತ ಎರಡನೇ ಬಾರಿ ಗೆಲುವಿನ ವಿಶ್ವಾಸದಲ್ಲಿ ತೃತೀಯಲಿಂಗಿ ಅಭ್ಯರ್ಥಿ

37 ವರ್ಷದ ಫಾಜ್ಲೂನ್ ಗುಬ್ಬಿ ತಾಲೂಕಿನ ಕುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಚಾಕೇನಹಳ್ಳಿಯಿಂದ ಸ್ಪರ್ಧಿಸಿದ್ದು ಡಿಸೆಂಬರ್ 22ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಸತತ ಎರಡನೇ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲಲು ತೃತೀಯ ಲಿಂಗಿ ಮತ್ತವರ ಕುಟುಂಬ ಪರಿಶ್ರಮ ಪಡುತ್ತಿದೆ.

37 ವರ್ಷದ ಫಾಜ್ಲೂನ್ ಗುಬ್ಬಿ ತಾಲೂಕಿನ ಕುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಚಾಕೇನಹಳ್ಳಿಯಿಂದ ಸ್ಪರ್ಧಿಸಿದ್ದು ಡಿಸೆಂಬರ್ 22ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕಳೆದ ಬಾರಿ 247 ಮತ ಪಡೆದಿದ್ದ ಪಾಜ್ಲೂನ್ 47 ಮತಗಳ ಅಂತರದಿಂದ ತನ್ನ ಇಬ್ಬರು ವಿರೋಧಿಗಳ ವಿರುದ್ಧ ಗೆಲುವು ಸಾಧಿಸಿದ್ದರು.  ಈ ಬಾರಿ ನೇರ ಹಣಾಹಣಿ ಏರ್ಪಟ್ಟಿದೆ.

ತಾನು ಎರಡು ದಶಕಗಳಿಂದ ತನ್ನ ಹಳ್ಳಿಯ ಜನರಿಗೆ ಸೇವೆ ಸಲ್ಲಿಸಿದ್ದೇನೆ ಮತ್ತು ಕಳೆದ ಐದು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದ್ದೇನೆ ಎಂದು ಫಜ್ಲೂನ್ ಹೇಳಿಕೊಂಡಿದ್ದಾರೆ, "ನಿವಾಸಿಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಮತ್ತು ಆದ್ದರಿಂದ ಎರಡನೇ ಬಾರಿಗೆ ನನ್ನ ಗೆಲುವು ಖಚಿತವಾಗಿದೆ" ಎಂದು ಅವರು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.ನಮ್ಮ ಪೋಷಕರನ್ನು ಹಾಗೂ ನನ್ನನ್ನು ಹಳ್ಳಿಯ ಜನತೆ ಯಾವತ್ತೂ ತಾರತಮ್ಯದಿಂದ ನೋಡಿಲ್ಲ ಎಂದು ಫಾಜ್ಲೂನ್ ತಿಳಿಸಿದ್ದಾರೆ.

ಫಾಜ್ಲೂನ್ ಜೊತೆ ಆಕೆಯ ತೃತೀಯ ಲಿಂಗಿ ಸಹೋದರ ಸೇರಿದಂತೆ ಒಟ್ಟು 14 ಮಂದಿ ಕುಟುಂಬದ ಸದಸ್ಯರು ಆಕೆಗೆ ಬೆಂಬಲವಾಗಿ ನಿಂತಿದ್ದಾರೆ.  ತುಮಕೂರಿನ ತರಕಾರಿ ಮಾರುಕಟ್ಟೆಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದೇನೆ, ನನ್ನ ಸಹೋದರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಹೀಗಾಗಿ ನನ್ನೆಲ್ಲಾ ಸಮಯವನ್ನು ಆಕೆಯ ಚುನಾವಣಾ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದೇನೆ ಎಂದು ಆಕೆಯ ಸಹೋದರ ಮೊಯಿನುದ್ದೀನ್ ಹೇಳಿದ್ದಾರೆ.

ತೃತೀಯ ಲಿಂಗಿ ಸಮುದಾಯವು ಭಿಕ್ಷೆ ಬೇಡುವ ಬದಲು ಉದ್ಯೋಗ ಮಾಡಿಕೊಂಡು ಜೀವನ ಸಾಗಿಸಿದರೇ ಅವರ ಆತ್ಮಗೌರವ ಮತ್ತು ಸ್ವಾಭಿಮಾನ ಹೆಚ್ಚಾಗುತ್ತದೆ ಎಂದು ಫಾಜ್ಲೂನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com