ಗ್ರಾಮ ಪಂಚಾಯತ್ ಚುನಾವಣೆ: ಕನಕಪುರದಲ್ಲಿ ಕಾಂಗ್ರೆಸ್ ಬೇರನ್ನು ಅಲುಗಿಸಲು ಬಿಜೆಪಿ ಸಜ್ಜು

ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅದರಲ್ಲಿಯೂ ಡಿಕೆ ಸೋದರರ ಭದ್ರಕೋಟೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಗ್ರಾಮ ಪಂಚಾಯತ್ ಚುನಾವಣೆ ವಿಚಾರದಲ್ಲಿ ಇದು ಹಾಗಿಲ್ಲ. ಪಂಚಾಯತ್ ಚುನಾವಣೆಗಳಲ್ಲಿನ ಸಮಯದಲ್ಲಿನ ಏರಿಳಿತವು ಕನಕಪುರ ಕೇಸರಿ ಪಕ್ಷದ ಪರವಾಗಿದೆ ಎಂದು ತೋರುತ್ತದೆ, ಬಿಜೆಪಿ ಇಲ್ಲಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿ
ಅಚಲ ದೊಡ್ಡಿ ಗ್ರಾಮದಲ್ಲಿನ ಒಂದು ಕುಟುಂಬ
ಅಚಲ ದೊಡ್ಡಿ ಗ್ರಾಮದಲ್ಲಿನ ಒಂದು ಕುಟುಂಬ

ಕನಕಪುರ: ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅದರಲ್ಲಿಯೂ ಡಿಕೆ ಸೋದರರ ಭದ್ರಕೋಟೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಗ್ರಾಮ ಪಂಚಾಯತ್ ಚುನಾವಣೆ ವಿಚಾರದಲ್ಲಿ ಇದು ಹಾಗಿಲ್ಲ. ಪಂಚಾಯತ್ ಚುನಾವಣೆಗಳಲ್ಲಿನ ಸಮಯದಲ್ಲಿನ ಏರಿಳಿತವು ಕನಕಪುರ ಕೇಸರಿ ಪಕ್ಷದ ಪರವಾಗಿದೆ ಎಂದು ತೋರುತ್ತದೆ, ಬಿಜೆಪಿ ಇಲ್ಲಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಒಂದು ಅಥವಾ ಎರಡು ಸ್ಥಾನಗಳನ್ನು ಗೆಲ್ಲುವ ಭರವಸೆಹೊಂದಿದೆ.

ಕನಕಪುರ ತಾಲೂಕಿನಲ್ಲಿ 43 ಗ್ರಾಮ ಪಂಚಾಯಿತಿಗಳಿದ್ದು, ಇದೆಲ್ಲಕ್ಕೂ ಡಿಸೆಂಬರ್ 22 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.  ಇಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೂ ಸಹ ಗ್ರಾಮದ ಒಂದು ಭಾಗದ ಜನರು ಅದರಲ್ಲೂ ವಿಶೇಷವಾಗಿ 30 ರಿಂದ 40 ವರ್ಷದೊಳಗಿನವರು ಬಿಜೆಪಿ ಪರವಾಗಿದ್ದಾರೆ ಎನ್ನಬಹುದು. ಅಲ್ಲದೆ ಕಾಂಗ್ರೆಸ್ ಅಥವಾ ಜೆಡಿಎಸ್ ಬೆಂಬಲವಿಲ್ಲದೆ ಸ್ವತಂತ್ರವಾಗಿ ನಿಂತ ಬಂಡಾಯ ಅಭ್ಯರ್ಥಿಗಳೂ ಸಹ ಬಿಜೆಪಿಯತ್ತ ಪರೋಕ್ಷಆಗಿ ವಾಲುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಚುನಾವಣೆ ಘೋಷಣೆಯಾಗುವ ಮುನ್ನವೇ ಕೇಸರಿ ಪಕ್ಷ ಈ ಪ್ರದೇಶದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಎತ್ತಿ ತೋರಿಸುವ ಕರಪತ್ರಗಳನ್ನು ವಿತರಿಸಿದೆ. ಕನಕಪುರ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಭಾಗವಾಗುವ ಮುನ್ನ ಸ್ವತಂತ್ರ ಸಂಸದೀಯ ಕ್ಷೇತ್ರವಾಗಿತ್ತು., ಇದರಲ್ಲಿ ಕನಕಪುರ ವಿಧಾನಸಭೆ ಸ್ಥಾನವೂ ಸೇರಿತ್ತು.

2002 ರ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮತ್ತು 1983 ರ ವಿಧಾನಸಭೆ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ರಾಜಕೀಯ ಭವಿಷ್ಯವನ್ನು ಪುನರುಜ್ಜೀವನಗೊಳಿಸಿದ್ದ ಕನಕಪುರ ಅದರದೇ ಆದ ರಾಜಕೀಯ ಪರಂಪರೆಯನ್ನು ಹೊಂದಿದೆ. "ಕನಕಪುರದಲ್ಲಿ ನಾವು ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತವನ್ನು ಮಾತ್ರ ನೋಡಿದ್ದೇವೆ. ನೇರ ಹೋರಾಟ ಯಾವಾಗಲೂ ಎರಡು ಪಕ್ಷಗಳ ನಡುವೆ ನಡೆಯುತ್ತಿದೆ. ಆದರೆ ಈ ಬಾರಿ ಬಿಜೆಪಿ ತನ್ನ ಖಾತೆ ತೆರೆಯಲಿದೆ ಎಂದು ತೋರುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಅಥವಾ ಇಡೀ ಪಂಚಾಯತ್ ಅನ್ನು ಗೆಲ್ಲುವುದಿಲ್ಲವಾದರೂ ಪ್ರತಿ ಪಂಚಾಯತ್‌ನಲ್ಲಿ ಎರಡು ಮೂರು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಖಚಿತವಾಗಿ ಹೇಳಬಹುದು ”ಎಂದು ಕಲ್ಲಹಳ್ಳಿ ಗ್ರಾಮ ಪಂಚಾಯತ್‌ನ ನಾಗೇಗೌಡ ಹೇಳಿದರು. 

ತುಂಗಾನಿ ಗ್ರಾಮ ಪಂಚಾಯಿತಿಯಲ್ಲಿ ತಳಮಟ್ಟದ ಕಾರ್ಯಕರ್ತರ ಪ್ರಯತ್ನವನ್ನು ಪಕ್ಷವು ಗುರುತಿಸದ ಕಾರಣ ಜೆಡಿಎಸ್ ನೆಲಕಚ್ಚಿದೆ ಎಂದುಜೆಡಿಎಸ್ ಬೆಂಬಲಿಗ ವೆಂಕಟೇಶ ಹೇಳಿದರು. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ನಾವು ಪಂಚಾಯಿತಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ  ಗ್ರಾಮಕ್ಕೆ ಸುಲಭವಾಗಿ ಹಣ ಹರಿದು ಬರುತ್ತದೆ.  ಆಗ ಕನಿಷ್ಠ ನಾವು ಕೆಲವು ಅಭಿವೃದ್ಧಿಗಳನ್ನು ಕಾಣಬಹುದು" ಎಂದು ಅವರು ವಾದಿಸಿದರು.

ಕಗ್ಗಲ್ಲಿ, ಚಿಕ್ಕಮುಡುವಾಡಿ ಬೂದಿಗುಪ್ಪೆ, ಚೀಲೂರು ಮತ್ತು ಇತರ ಪಂಚಾಯಿತಿಗಳ ಮತದಾರರು ಕೂಡ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರು. “ಕಳೆದ ಎರಡು ವರ್ಷಗಳಲ್ಲಿ, ಐದು ಎಕರೆಗಿಂತ ಕಡಿಮೆ ಇರುವ ಸಣ್ಣ ರೈತರು ಎರಡು ತಿಂಗಳಿಗೊಮ್ಮೆ 2,000 ರೂ. ಪಡೆದಿದ್ದಾರೆ. ನಾವು ಮೋದಿ ಸರ್ಕಾರದಿಂದ ಸ್ವಲ್ಪ ಹಣವನ್ನು ಪಡೆಯುತ್ತಿದ್ದೇವೆ. ಕಾಂಗ್ರೆಸ್ ಅಥವಾ ಜೆಡಿಎಸ್ ಅಧಿಕಾರದಲ್ಲಿದ್ದಾಗ ನಮಗೆ ಅಂತಹ ಯಾವುದೇ ಸೌಲಭ್ಯ ಇರಲಿಲ್ಲ ”ಎಂದು ಕಗ್ಗಲ್ಲಿಯ ಶಿವರುದ್ರಗೌಡ  ಹೇಳಿದ್ದಾರೆ.

ರಾಮನಗರ-ಕನಕಪುರ ಸಂಪರ್ಕಿಸುವ ರಸ್ತೆಯಲ್ಲಿರುವ ಅಚಲು ದೊಡ್ಡಿ38 ಗುಡಿಸಲುಗಳಲ್ಲಿ ಸುಮಾರು 120 ಮತದಾರರನ್ನು ಹೊಂದಿದೆ. “ನಾವು ಕಳೆದ ಐದರಿಂದ ಆರು ದಶಕಗಳಿಂದ ಇದೇ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಶೌಚಾಲಯಗಳಿಲ್ಲದ ಕಾರಣ, ನಾವು ಬಹಿರ್ದೆಶೆಗಾಗಿ ಬಯಲನ್ನೇ ಆಶ್ರಯಿಸಿದ್ದೇವೆ,. ಈ ರಸ್ತೆಯ ಮೂಲಕ ಹಾದುಹೋಗುವ ವಿಐಪಿಗಳ ಗಮನವನ್ನು ಸೆಳೆಯಲು ನಾವು ಸಾಕಷ್ಟು ಯತ್ನಿಸಿದ್ದೇವೆ. ದೇವೇಗೌಡ, ಅವರ ಮಗ ಎಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್ ಎಲ್ಲರೂ ಈ ರಸ್ತೆಯನ್ನು ನಿಯಮಿತವಾಗಿ ಬಳಸುತ್ತಾರೆ. ಅವರು ಇಲ್ಲಿಗೆ ಆಗಮಿಸಿ ನಮ್ಮ ಕಷ್ಟವಗಳನ್ನು ಆಲಿಸುತ್ತಾರೆ. ಆದರೆ ಇದುವರೆಗೆ ಯಾರೂ ಏನನ್ನೂ ಮಾಡಿಲ್ಲ. ”ಎಂದು ನಿವಾಸಿಯೊಬ್ಬರು ಹೇಳಿದರು. "ಈಗ, ನಾವು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗಾಗಿ ನೋಡುತ್ತೇವೆ. ಅವರು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಸ್ವಲ್ಪ ಪರಿಹಾರವನ್ನು ನೀಡುವ ನಿರೀಕ್ಷೆ ಇದೆ. ," ಎಂದು ಅವರು ಹೇಳಿದರು. ಮೊದಲ ಬಾರಿಗೆ 2019 ರಲ್ಲಿ ಬಿಜೆಪಿ ಕನಕಪುರ ಪುರಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆದ್ದು ಹೊಸ ಶಕೆಗೆ ನಾಂದಿ ಹಾಡಿತ್ತು.

ಜಿಲ್ಲಾ ಪಂಚಾಯತ್ ಸೀಟು ಹಾರಾಜು: 10 ಜನರು ಗಡೀಪಾರು

ತುಮಕೂರು: ಗ್ರಾಮ ಪಂಚಾಯಿತಿ ಸೀಟುಗಳನ್ನು ಹರಾಜು ಮಾಡಿದ 11 ಘಟನೆಗಳಿಗೆ ಸಂಬಂಧಿಸಿದಂತೆ ತುಮಕುರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹರಾಜಿನಲ್ಲಿ ಭಾಗವಹಿಸಿದ 10 ಜನರನ್ನು ಗಡೀಪಾರು ಮಾಡಬೇಕೆಂದು ಅವರು ಈಗ ಹೇಳಿದ್ದಾರೆ. "ಸಂಬಂಧಪಟ್ಟ ಸಹಾಯಕ ಆಯುಕ್ತರು ಈ ನಿಟ್ಟಿನಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿ ಕೃಷ್ಣ ಹೇಳಿದರು.

"ಆರೋಪಿಗಳು ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಸಹ ಉಲ್ಲಂಘಿಸಿದ್ದಾರೆ" ಎಂದು ಅವರು ಹೇಳಿದರು. ಕೆಲವು ಆರೋಪಿಗಳಾದ ನಾಗರಾಜು, ಜಯರಾಮಯ್ಯ, ರಂಗನಾಥ್, ಮತ್ತು ಮಂಜುನಾಥ್ ಅವರುಗಳು ಕಳೆದ ವಾರ ಕಿತ್ತನಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸೀಟನ್ನು ಹರಾಜು ಹಾಕುವ ಕಾರ್ಯಕ್ರಮ ಆಯೋಜಿಸಿದ್ದರು.  ಈ ಘಟನೆಯ ವಿಡಿಯೋ ವೈರಲ್ ಆಗಿದೆ ಎಂದು ಕುಣಿಗಲ್ ಡಿವೈಎಸ್ಪಿ ಜಗದೀಶ್ ಹೇಳಿದ್ದಾರೆ. ಬಹುತೇಕ ಎಲ್ಲಾ ಪ್ರಕರಣಗಳಲ್ಲಿ, ಆರೋಪಿಗಳು ಗ್ರಾಮದ ದೇವಾಲಯ ಗಳನ್ನು ನವೀಕರಿಸುವ ನೆಪದಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದರು ಮತ್ತು ಹೆಚ್ಚಿನ ಮೊತ್ತವನ್ನು ಬಿಡ್ ಮಾಡುವವರು ಸರ್ವಾನುಮತದಿಂದ ಚುನಾಯಿತರಾಗುವಂತೆ ನೋಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com