28 ಗ್ರಾಮಗಳಿಗೆ ಇದು ಕೊನೆಯ ಪಂಚಾಯಿತಿ ಚುನಾವಣೆ: ಕಾರಣ ಎತ್ತಿನಹೊಳೆ ಯೋಜನೆ!

ರಾಜ್ಯದ 28 ಗ್ರಾಮ ಪಂಚಾಯತಿಗಳು ಎಂದಿಗೂ ಇನ್ನು ಮುಂದೆ ಚುನಾವಣೆ ಎದುರಿಸುವುದಿಲ್ಲ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 28 ಗ್ರಾಮಗಳು ಮುಂದಿನ 5 ವರ್ಷಗಳಲ್ಲಿ ಕಣ್ಮರೆಯಾಗಲಿವೆ.
ನೆಲಮಂಗಲ ಮತ ಕೇಂದ್ರಕ್ಕೆ ಆಗಮಿಸುತ್ತಿರುವ ಮತಗಟ್ಟೆ ಸಿಬ್ಬಂದಿ
ನೆಲಮಂಗಲ ಮತ ಕೇಂದ್ರಕ್ಕೆ ಆಗಮಿಸುತ್ತಿರುವ ಮತಗಟ್ಟೆ ಸಿಬ್ಬಂದಿ

ತುಮಕೂರು: ರಾಜ್ಯದ 28 ಗ್ರಾಮ ಪಂಚಾಯತಿಗಳು ಎಂದಿಗೂ ಇನ್ನು ಮುಂದೆ ಚುನಾವಣೆ ಎದುರಿಸುವುದಿಲ್ಲ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 28 ಗ್ರಾಮಗಳು ಮುಂದಿನ 5 ವರ್ಷಗಳಲ್ಲಿ ಕಣ್ಮರೆಯಾಗಲಿವೆ, ಕಾರಣ ಎತ್ತಿನಹೊಳೆ ನೀರಾವರಿ ಯೋಜನೆಗೆ ಬೈರಗೊಂಡ್ಲು ಅಣೆಕಟ್ಟಿಗೆ ಈ ಗ್ರಾಮಗಳನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ.

ಹೀಗಾಗಿ ಈ ಗ್ರಾಮಗಳ ಗ್ರಾಮಸ್ಥರು ಈ ಬಾರಿ ಬಹಳ ಉತ್ಸಾಹದಿಂದ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಆದರೆ ಎತ್ತಿನಹೊಳೆ ಯೋಜನೆಗೆ ಸರ್ಕಾರದಿಂದ ನೀಡುತ್ತಿರುವ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂಬುದು ಗ್ರಾಮಸ್ಥರ ಅಸಮಾಧಾನವಾಗಿದೆ. ಹೀಗಾಗಿ ಇದು ಇಂದಿನ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರತಿ ಎಕರೆಗೆ 14 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅದು ನಮ್ಮ ಜಮೀನಿಗೆ ಸಾಕಾಗುವುದಿಲ್ಲ. ಹೀಗಾಗಿ ನಾವು ಸುಂಕದಹಳ್ಳಿಯ ಎಸ್ ಎಚ್ ರವಿಕುಮಾರ್ ಮತ್ತು ಕುಲುವೆಹಳ್ಳಿಯ ಎಂ ಶಿವರಾಜ್ ಅಂಥ ಸುಶಿಕ್ಷಿತರನ್ನು ಚಿನ್ನಹಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಣಕ್ಕಿಳಿಸಿದ್ದೇವೆ. ಅವರು ಚುನಾಯಿತರಾಗಿ ಬಂದರೆ ಉತ್ತಮ ಪರಿಹಾರಕ್ಕೆ ಅವರು ಹೋರಾಟ ಮಾಡಬಹುದು ಎಂದು ಶಿಕ್ಷಕ ಸಿದ್ದಗಂಗಯ್ಯ ಹೇಳುತ್ತಾರೆ.

ಕಣ್ಮರೆಯಾಗುತ್ತಿರುವ ಗ್ರಾಮಗಳಲ್ಲಿ ಸುಂಕದಹಳ್ಳಿ ಪ್ರಮುಖವಾಗಿದೆ. ಈ ಗ್ರಾಮಕ್ಕೆ 300 ವರ್ಷಕ್ಕೂ ಅಧಿಕ ಇತಿಹಾಸವಿದೆ. ಮನ್ನೆಯಿಂದ ಕೇವಲ 8 ಕಿಲೋ ಮೀಟರ್ ದೂರವಿದೆ. ಇದು ಗಂಗರ ರಾಜಧಾನಿಯಾಗಿತ್ತು. ಗ್ರಾಮ ಎತ್ತಿನಹೊಳೆ ಯೋಜನೆಗೆ ಬಿಟ್ಟುಕೊಡುವ ಪ್ರಮೇಯ ಬರಲಿಕ್ಕಿಲ್ಲ ಎನ್ನುತ್ತಾರೆ ಗ್ರಾಮಸ್ಥ ನಾಗೇಂದ್ರಪ್ಪ.

ಎತ್ತಿನಹೊಳೆ ಯೋಜನೆಯನ್ನು ನಿರ್ಮಿಸುವ ಬದಲು ಸರ್ಕಾರ ಜಿಲ್ಲೆಯಲ್ಲಿ 38 ಟ್ಯಾಂಕುಗಳನ್ನು ಭರ್ತಿ ಮಾಡಬೇಕು. ನಮ್ಮ ಗ್ರಾಮ ನೀರಿನ ಯೋಜನೆಗೆ ಕೊಚ್ಚಿ ಹೋಗುವುದು ನೋಡಲು ಕಷ್ಟವಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com