ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬೂತ್ ಮಟ್ಟದಿಂದ ಪೂರ್ವಸಿದ್ಧತೆ: ಕಟೀಲ್

ಗ್ರಾಮ ಪಂಚಾಯತ್ ಚುನಾವಣೆ ಇನ್ನೂ ಮುಗಿದಿಲ್ಲ, ಬಿಜೆಪಿ ರಾಜ್ಯಾದ್ಯಂತ ಬಿಜೆಪಿ ತನ್ನ ಹೆಜ್ಜೆ ಮೂಡಿಸಲು ಮುಂದಾಗಿದೆ. ಹೀಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ಇನ್ನೂ ಮುಗಿದಿಲ್ಲ, ಬಿಜೆಪಿ ರಾಜ್ಯಾದ್ಯಂತ ಬಿಜೆಪಿ ತನ್ನ ಹೆಜ್ಜೆ ಮೂಡಿಸಲು ಮುಂದಾಗಿದೆ. ಹೀಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದೆ.

ಏಪ್ರಿಲ್ ನಲ್ಲಿ  ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಾಗಿ ಬಿಜೆಪಿ ತಳಮಟ್ಟದಿಂದ ತಯಾರಿ ನಡೆಸುತ್ತಿದ್ದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಗೆಲ್ಲಲು ಸಹಾಯವಾಗಲಿದೆ.

ಬಿಜೆಪಿ ಕಾರ್ಯಕಾರಿಣಿ ಸಭೆ ಜನವರಿ ಮೊದಲ ವಾರದಲ್ಲಿ ನಡೆಯಲಿದ್ದು, ಗ್ರಾಮ ಪಂಚಾಯತಿ ಚುನಾವಣೆಗೆ ನಡೆಸಿದ ತಂತ್ರಗಾರಿಕೆಯನ್ನೇ ಇಲ್ಲಿಯೂ ಬಳಸಲು ನಿರ್ಧರಿಸಲಾಗಿದೆ.

ಈಗಾಗಲೇ ಕೆಲವು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅನಧಿಕೃತ ಕ್ಯಾಂಪೇನ್ ಆರಂಭಿಸಿದ್ದಾರೆ. ಗ್ರಾಮದ ಪ್ರತಿ ಮನೆಗಳಿಗೂ ತೆರಳಿ ಪ್ರಚಾರ ಮಾಡುತ್ತಿದ್ದಾರೆ, ಈ ಯೋಜನೆಯಿಂದಾಗಿ ಪಕ್ಷ ತಳಮಟ್ಟದಿಂದ ಬಲವಾಗಲಿದ್ದು ದೊಡ್ಡ ಚುನಾವಣೆ ಗೆಲ್ಲಲು ಸಹಾಯವಾಗಲಿದೆ.

ಒಂದು ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರಿಗೆ ಪಕ್ಷವನ್ನು ವಿಜಯದತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ನೀಡಿದ್ದರಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಬಳಸಿದ ತಂತ್ರಗಳು ಫಲ ನೀಡುತ್ತವೆ.

ಗ್ರಾಮೀಣ ಜನತೆಯನ್ನು ಪಕ್ಷಕ್ಕೆ ಎಳೆಯಲು, ನಾವು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸುತ್ತೇವೆ ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನತೆಗೆ ನೀಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಗೆ ಕೆಲಸ ಮಾಡಿದ ಹಿರಿಯ ನಾಯಕರ ಅದೇ ಆರು ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಲಿವೆ ಎಂದು ತಿಳಿದುಬಂದಿದೆ. ಸಂಘಟನಾ ಕಾರ್ಯಕರ್ತರು  ಮುಂಬರುವ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಜವಾಬ್ದಾರಿ ಹೊತ್ತಿದ್ದವರೇ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಜವಾಬ್ದಾರಿ ಹೊರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com