ಪ್ರತಿಷ್ಠೆಯ ಕಣವಾಗಿರುವ ಸಂಕೋನಟ್ಟಿ ಗ್ರಾಮ ಪಂಚಾಯಿತಿ: ಅಧಿಕಾರಕ್ಕಾಗಿ ಸವದಿ-ಕುಮಟಳ್ಳಿ ಬೆಂಬಲಿಗರ ನಡುವೆ ಹಣಾಹಣಿ

ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಕೋನಟ್ಟಿ ಗ್ರಾಮ ಪಂಚಾಯಿತಿ ಪ್ರತಿಷ್ಠೆಯ ಕಣವಾಗಿದೆ. ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಬೆಂಬಲಿಗರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ.
ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ
ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ

ಬೆಳಗಾವಿ: ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಕೋನಟ್ಟಿ ಗ್ರಾಮ ಪಂಚಾಯಿತಿ ಪ್ರತಿಷ್ಠೆಯ ಕಣವಾಗಿದೆ. ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಬೆಂಬಲಿಗರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ.

56 ಸದಸ್ಯರನ್ನು ಹೊಂದಿರುವ ಈ ಪಂಚಾಯಿತಿಯಲ್ಲಿ ಬಹುಮತ ಸಾಧಿಸಲು ಬಿಜೆಪಿ ಎರಡೂ ಬಣಗಳು ಹೋರಾಡುತ್ತಿವೆ.

ಅಥಣಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 149 ಅಭ್ಯರ್ಥಿಗಳು ಕಣದಲ್ಲಿದ್ದು ಡಿಸೆಂಬರ್ 27 ಕ್ಕೆ ಚುನಾವಣೆ ನಿಗದಿಯಾಗಿದೆ. ಸಂಕೋನಟ್ಟಿಯಲ್ಲದೆ  ಅಥಣಿ ಮತ್ತು ಹೊಸಟ್ಟಿ, ವಡ್ರಟ್ಟಿ,   ಬಡ ಕಂಬಿತೋಟ ಮತ್ತು ಕೆಸಲಲಾಟೋಟ ಗ್ರಾಮಗಳು ಸೇರಿವೆ.

ಸರ್ಕಾರವು  ಬಜೆಟ್ ನಲ್ಲಿ ದೊಡ್ಡ ಮಟ್ಟದ ಅನುದಾನ ನಿಗದಿ ಪಡಿಸಿರುವುದು ಅಭ್ಯರ್ಥಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಮತದಾರರನ್ನು ಸೆಳೆಯಲು ಈಗಾಗಲೇ ಅಭ್ಯರ್ಥಿಗಳು ಪಾರ್ಟಿ  ಮತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಪ್ರತಿದಿನ ರಹಸ್ಯವಾಗಿ ರುಚಿಕರವಾದ ಊಟ ಮತ್ತು ಮಧ್ಯ ಮತ್ತು ಹಣ ನೀಡಲಾಗುತ್ತಿದೆ. ಅಥಣಿ ಉಪನಗರಗಳ ಹಲವಾರು ಗ್ರಾಮಸ್ಥರು, ರಾಜಕೀಯ ನಾಯಕರು ತಮ್ಮ ಗುಂಪುಗಳನ್ನು ಗೆಲ್ಲಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

27,000 ಜನಸಂಖ್ಯೆಯನ್ನು ಹೊಂದಿರುವ  ವಿಶಾಲವಾದ  ಗ್ರಾಮಪಂಚಾಯಿತಿ ಇದಾಗಿರುವುದರಿಂದ, ಸರ್ಕಾರವು ಪ್ರತಿವರ್ಷವೂ ಹಣವನ್ನು ಹೇರಳವಾಗಿ ಬಿಡುಗಡೆ ಮಾಡುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ನಾಲ್ಕು ಗುಂಪುಗಳಾಗಿ ವಿಭಜನೆಯಾಗಿದ್ದು, ಸವದಿ ಮತ್ತು ಕುಮಟಳ್ಳಿ ಗುಂಪು ಅಧಿಕಾರ ಹಿಡಿಯಲು ಹೆಣಗಾಡುತ್ತಿವೆ. ಕಳೆದ ಮೂರು ಅವಧಿಯಲ್ಲಿ ಸವದಿ ಗುಂಪು ಮೇಲುಗೈ ಸಾಧಿಸುತ್ತು, ಇದಕ್ಕೂ ಮುನ್ನ ಕುಮಟಳ್ಳಿ ಗುಂಪು ಸತತ ಮೂರು ಬಾರಿ ಅಧಿಕಾರ ಹಿಡಿದಿತ್ತು.

ಸಂಕೋನಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡುತ್ತಿದ್ದು, ಇತರ ಪ್ರದೇಶಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಮತದಾರರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಮತ ಹಾಕುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com