ಬೀದರ್ ಶಾಲೆ ಪ್ರಕರಣ: ನಿಮ್ಮ ಮೌನ ನೋಡಿ ಆಘಾತಗೊಂಡಿದ್ದೇನೆ-ಮುಖ್ಯಮಂತ್ರಿಗೆ ಪತ್ರ ಬರೆದ ಮಾರ್ಗರೇಟ್ ಆಳ್ವಾ

ಬೀದರ್‌  ಶಾಲೆಯಲ್ಲಿ ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂಬಂತೆ  ಬಿಂಬಿಸಿ ಪೊಲೀಸರು ಅವರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಆಕ್ರೋಶ  ವ್ಯಕ್ತಪಡಿಸಿರುವ ಮಾಜಿ ರಾಜ್ಯಪಾಲೆ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್‌ ಆಳ್ವಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ
ಮಾರ್ಗರೇಟ್ ಆಳ್ವಾ
ಮಾರ್ಗರೇಟ್ ಆಳ್ವಾ

ಬೆಂಗಳೂರು: ಬೀದರ್‌  ಶಾಲೆಯಲ್ಲಿ ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂಬಂತೆ  ಬಿಂಬಿಸಿ ಪೊಲೀಸರು ಅವರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಆಕ್ರೋಶ  ವ್ಯಕ್ತಪಡಿಸಿರುವ ಮಾಜಿ ರಾಜ್ಯಪಾಲೆ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್‌ ಆಳ್ವಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ

ಬೀದರ್‌ನ  ಶಾಲೆಯಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ನಿಮ್ಮ ಮೌನ ನೋಡಿ ನಾನು ಆಘಾತಗೊಂಡಿದ್ದೇನೆ.  ಇದು ಪ್ರಜಾಪ್ರಭುತ್ವ ದೇಶವಾ ಅಥವಾ ಪೊಲೀಸ್ ರಾಜ್ಯವಾ? ಶಾಲಾ ಸಿಬ್ಬಂದಿ, ಪೋಷಕರು ಮತ್ತು  ಮಕ್ಕಳ ಕಿರುಕುಳ ಯಾರ ಸೂಚನೆಯ ಮೇರೆಗೆ ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ

ಈ  ಬೆಳವಣಿಗೆಗಳ ಬಗ್ಗೆ ನಿಮಗೆ ತಿಳಿದಿದೆಯೇ ಅಥವಾ ಉದ್ದೇಶ ಪೂರ್ವಕವಾಗಿ ಅಸಡ್ಡೆ  ಹೊಂದಿದ್ದೀರಾ? ಕೇಂದ್ರ ಸರ್ಕಾರವು ಅಂಗೀಕರಿಸಿದ ದೇಶಕ್ಕೆ ಮಾರಕವಾದ ಸಿಎಎ ಕಾನೂನನ್ನು  ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಕರೆಯುವ ರೀತಿಯಲ್ಲಿ ಪೊಲೀಸರು  ನಡೆದುಕೊಳ್ಳುತ್ತಿದ್ದಾರೆ. ಈ ನಾಟಕ ನಿಮಗೆ ಕಾಣುತ್ತಿಲ್ಲವೇ ಎಂದು ಪತ್ರದಲ್ಲಿ  ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com