ಸಚಿವ ಸ್ಥಾನದಲ್ಲೂ ಬೆಳಗಾವಿ ದಾಖಲೆ: ಇದೇ ಮೊದಲ ಬಾರಿ ಜಿಲ್ಲೆಗೆ ಬರೋಬ್ಬರೀ 4 ಮಂತ್ರಿಗಳು!

ರಾಜ್ಯದ 2ನೇ ಅನಧಿಕೃತ ರಾಜಧಾನಿ ಎಂದು ಹೆಸರು ಪಡೆದಿರುವ ಬೆಳಗಾವಿ  ಬಿಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅತಿ ಹೆಚ್ಚಿನ ಸಂಖ್ಯೆ ಸಚಿವರನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗೆ ಕಾರಣವಾಗಿದೆ.
ಸುವರ್ಣ ಸೌಧ
ಸುವರ್ಣ ಸೌಧ

ಬೆಂಗಳೂರು: ರಾಜ್ಯದ 2ನೇ ಅನಧಿಕೃತ ರಾಜಧಾನಿ ಎಂದು ಹೆಸರು ಪಡೆದಿರುವ ಬೆಳಗಾವಿ  ಬಿಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅತಿ ಹೆಚ್ಚಿನ ಸಂಖ್ಯೆ ಸಚಿವರನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗೆ ಕಾರಣವಾಗಿದೆ.

ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ಹೊಸದಾಗಿ ಸಂಪುಟ ಸೇರಿದ್ದಾರೆ, ಶಶಿಕಲಾ ಜೊಲ್ಲೆ ಮತ್ತು ಲಕ್ಷ್ಮಣ ಸವದಿ  ಈಗಾಗಲೆ ಸಂಪುಟ  ಸೇರಿದ್ದಾರೆ.

ಇದೇ ಮೊದಲ ಬಾರಿಗೆ ಒಂದೇ ಜಿಲ್ಲೆಗೆ ನಾಲ್ವರು ಸಚಿವರು ನೇಮಕವಾಗಿದ್ದಾರೆ,  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಬೆಳಗಾವಿ ಶಾಸಕರ ಪಾತ್ರ ಅಧಿಕವಾಗಿತ್ತು.  ಬೆಳಗಾವಿ ಇಡೀ ರಾಜ್ಯದಲ್ಲೇ ಅತಿ ದೊಡ್ಡ ಜಿಲ್ಲೆ,18 ವಿಧಾನಸಭೆ ಕ್ಷೇತ್ರಗಳಿರುವ ಬೆಳಗಾವಿಯಿಂದ 14 ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ, ಈ ಬಾರಿ ಬೆಳಗಾವಿ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಚಿವ ಸ್ಥಾನ ನೀಡಲು ಹಲವು ಪ್ರಮುಖ ಅಂಶಗಳು  ಕಾರಣವಾಗಿವೆ.

ಶಾಸಕ ಉಮೇಶ್ ಕತ್ತಿ ಕೂಡ ಸಚಿವ ಸ್ಥಾನ ಬಯಸಿದ್ದರೂ, ಆದರೆ ಹಲವು ಕಾರಣಗಳಿಂದಾಗಿ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ.

1972 ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾದಾಗಿನಿಂದಲೂ  ಬೆಳಗಾವಿ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯ ರಾಜಕೀಯಕ್ಕೆ ಹಲವು ಧೀಮಂತ ನಾಯಕರನ್ನು ಕೊಟ್ಟ ಕೀರ್ತಿ ಬೆಳಗಾವಿಗೆ ಸಲ್ಲುತ್ತದೆ. ದಿವಂಗತ ಬಿ.ಶಂಕರಾನಂದ ಕಾಂಗ್ರೆಸ್ ನಿಂದ 7 ಬಾರಿ ಲೋಕಸಭೆಗೆ  ಆಯ್ಕೆಯಾಗಿದ್ದರು, ಉಮೇಶ್ ಕತ್ತಿ 8 ಬಾರಿ ವಿಧಾನಸಭೆಗೆ ಹಾಗೂ ದಿವಂಗತ ವಿಎಸ್ ಕೌಜಲಗಿ ಅರಬಾವಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವನ್ನು 7 ಬಾರಿ ಪ್ರತಿನಿಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com