ಆನಂದ್ ಸಿಂಗ್
ಆನಂದ್ ಸಿಂಗ್

17 ಜನರ ತ್ಯಾಗದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ: ನೂತನ ಸಚಿವ ಆನಂದ್ ಸಿಂಗ್ 

17 ಜನ ತ್ಯಾಗದಿಂದ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ನೂತನ ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ. 

ಹೊಸಪೇಟೆ: 17 ಜನ ತ್ಯಾಗದಿಂದ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ನೂತನ ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ. 

ಆನಂದ್ ಸಿಂಗ್ ಅವರ ಆರಾದ್ಯ ದೈವ ಬಟ್ಟರಹಳ್ಳಿ ಆಂಜನೇಯಸ್ವಾಮಿ ಆಗಿದ್ದಾರೆ. ಇದರಂತೆ ನಿನ್ನೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ವಿಜಯನಗರ ಕಾಲದ ಬಟ್ಟರಹಳ್ಳಿ ಆಂಜನೇಯ ದೇವಸ್ಥಾನದಲ್ಲಿ ಪತ್ನಿ ಲಕ್ಷ್ಮೀ ಸಿಂಗ್ ಜೊತೆಗೆ ಹೋಮ ಹವನದಲ್ಲಿ ಬಾಗಿಯಾಗಿದ್ದು, ಗೋಪುರ, ರಥ, ಕಳಶ, ನವಗ್ರಹ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದರು.  

ಆನಂದ್ ಸಿಂಗ್ ಅವರು ಹೋಮ ನಡೆಸಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಹೋಮ ಹವನ ನಡೆಸುತ್ತಿದ್ದಾರೆಂಬ ಮಾತುಕತುಗಳು ಕೇಳಿ ಬಂದಿದ್ದವು. 

ಇದರಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಆನಂದ್ ಸಿಂಗ್ ಅವರು, ಹೋಮ ಹವನ ಮಾಡಿಸಿ ಅಧಿಕಾರ ಪಡೆಯುವಂತ ವ್ಯಕ್ತಿ ಅಲ್ಲ ನಾನು, ಜನಗಳಿಗೆ ಬೇಕಾದ ಅಭಿವೃದ್ದಿ ಕಾರ್ಯ ಮಾಡಿ ಅಧಿಕಾರ ಪಡೆಯುತ್ತೇನೆಂದು ಹೇಳಿದ್ದಾರೆ. 

ಬಳಿಕ ಸಚಿವ ಸಂಪುಟದ ಕುರಿತಂತೆ ಮಾತನಾಡಿದ ಅವರು, ತುಂಬಾ ದಿನಗಳ ಹಿಂದೆಯೇ ಸಚಿವಸ ಸಂಪುಟ ರಚನೆ ಆಗಬೇಕಿತ್ತು, ನಿನ್ನೆ ಸಿ.ಎಂ.ಯಡಿಯೂರಪ್ಪ ಅವರು ಸಂಪುಟ ರಚನೆಮಾಡಿದ್ದಾರೆ ಎಲ್ಲರಿಗೂ ಸಂತೋಷ ತಂದಿದೆ, ಇನ್ನು ಮಹೇಶ್ ಕುಮಟಳ್ಳಿ ಅವರಿಗೂ ಕೂಡ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ಇದೆ, 17 ಜನರ ತ್ಯಾಗ ದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ, 

ಯಾವುದೊ ಒಂದು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟು ನಾನು ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಿಲ್ಲ, ನನ್ನ ಬೇಡಿಕೆಯೇ ಬೇರೆ ಇದೆ, ಒಳ್ಳೆಯ ಖಾತೆ ಬೇಕೆನ್ನುವುದು ಪ್ರತಿಯೊಬ್ಬರ ಆಸೆ ಅದರಂತೆ ನನಗೂ ಕೂಡ ಇದೆ, ನಾವು ಬಹಿರಂಗವಾಗಿ ಹೇಳಿಕೆ ನೀಡಿ ಮುಖ್ಯಂಮತ್ರಿಗಳಿಗೆ ಮುಜುಗರಮಾಡುವುದಿಲ್ಲ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಲು ಆಕಾಂಕ್ಷಿ ಅಲ್ಲ, ಹಿರಿಯರು ಆದ ಶ್ರೀ ರಾಮುಲು ಅವರು ಇದ್ದಾರೆ ಅವರಿಗೆ ಉಸ್ತುವಾರಿ ಕೊಡಬೇಕು ಎನ್ನುವುದು ನನ್ನ ಆಗ್ರಹ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಸಚಿವ ಸ್ಥಾನ ಸಿಕ್ಕರೂ ಸಂಭ್ರಮಿಸದ ಬೆಂಬಲಿಗರು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪ್ರಮುಖ ಬೇಡಿಕೆ ವಿಜಯನಗರ ಜಿಲ್ಲೆ ಆಗಬೇಕೆನ್ನುವುದು ಹಾಗಾಗಿ ನನ್ನ ಬೆಂಬಲಿಗರು ಸಂಭ್ರಮಾಚರಣೆಮಾಡಿಲ್ಲ, ಜಿಲ್ಲೆ ಘೋಷಣೆ ಆದಷ್ಟು ಬೇಗ ಆಗುತ್ತೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com