ಮುಗಿಯದ ದ್ವೇಷ, ತೀರದ ಸಿಟ್ಟು: ಡಿಕೆಶಿ ಕೊಠಡಿಗೆ ಸಾಹುಕಾರ್ ಪಟ್ಟು!

ಸರ್ಕಾರ ಬೀಳಿಸಿದರೂ ಡಿಕೆ ಶಿವಕುಮಾರ್​ ಮೇಲಿನ ಅವರ ಕೋಪ ಮಾತ್ರ ತಣ್ಣಾಗಾಗುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಡಿಕೆ ಶಿವಕುಮಾರ್​ ಅನುಭವಿಸಿದ ಖಾತೆ ಮತ್ತು ಕೊಠಡಿಗಳಿಗೆ ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. 
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು:  ಸರ್ಕಾರ ಬೀಳಿಸಿದರೂ ಡಿಕೆ ಶಿವಕುಮಾರ್​ ಮೇಲಿನ ಅವರ ಕೋಪ ಮಾತ್ರ ತಣ್ಣಾಗಾಗುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಡಿಕೆ ಶಿವಕುಮಾರ್​ ಅನುಭವಿಸಿದ ಖಾತೆ ಮತ್ತು ಕೊಠಡಿಗಳಿಗೆ ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. 

ಡಿ.ಕೆ.ಶಿವಕುಮಾರ್‌ ಹಿಂದೆ ಸಚಿವರಾಗಿದ್ದಾಗ ಕಾರ್ಯನಿರ್ವಹಿಸಿದ್ದ ಮೂರನೇ ಮಹಡಿಯ 336 ಸಂಖ್ಯೆಯ ಕೊಠಡಿಯೇ ಬೇಕು ಎಂದು ಪಟ್ಟು ಹಿಡಿದಿದ್ದ ರಮೇಶ್‌ ಜಾರಕಿಹೊಳಿಗೆ ಆ ಕೊಠಡಿ ಸಿಕ್ಕಿಲ್ಲ.

ಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡದಿದ್ದರೂ ಪರವಾಗಿಲ್ಲ, ಪ್ರಬಲ ಖಾತೆಯನ್ನು ನೀಡಬೇಕು ಎಂಬುದು ರಮೇಶ್​ ಜಾರಕಿಹೊಳಿ ವಿಧಿಸಿದ ಷರತ್ತು ಆಗಿತ್ತು. ಅದರಲ್ಲಿಯೂ ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಡಿಕೆ ಶಿವಕುಮಾರ್​ ಕಾರ್ಯನಿರ್ವಹಿಸಿದ್ದ ಇಂಧನ ಖಾತೆಯೇ ಬೇಕು ಎಂಬುದು ಅವರ ಪ್ರಮುಖ ಬೇಡಿಕೆ. ಇವರ ಈ ಖಾತೆ ಬೇಡಿಕೆ ಬಹುತೇಕ ಈಡೇರುವ ಸಾಧ್ಯತೆ ಇದೆ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಜೊತೆಯಲ್ಲಿಯೇ ವಿಧಾನಸೌಧಕ್ಕೆ ತೆರಳಿರುವ ನೂತನ ಸಚಿವರು, ಸಿಎಂ ಜೊತೆ ಸಭೆ ನಡೆಸಿದರು. ಈ ವೇಳೆ ತಮಗೆ ಯಾವ ಖಾತೆ ನೀಡಬೇಕು ಹಾಗೂ ಯಾವ ಕೊಠಡಿ ಬೇಕು ಎಂಬ ಬಗ್ಗೆ ಪಟ್ಟಿ ಸಲ್ಲಿಸಿದರು.

ಈ ವೇಳೆ ಗೋಕಾಕ್​ ಶಾಸಕ, ವಿಧಾನಸೌಧದ 336-337ನೇ ಕೊಠಡಿ ನೀಡುವಂತೆ ಮನವಿ ಮಾಡಿದ್ದು, ಕೊಠಡಿ ವೀಕ್ಷಣೆ ಮಾಡಿದ್ದಾರೆ. ಕಾರಣ. ಈ ಹಿಂದೆ ಡಿಕೆ ಶಿವಕುಮಾರ್​ ಇದ್ದದ್ದು ಇದೇ ಕೊಠಡಿಯಲ್ಲಿ.

ಬೆಳಗಾವಿಯ ಪಿಎನ್​ಬಿ ಬ್ಯಾಂಕ್​ ಚುನಾವಣೆ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಬೆಂಬಲವಾಗಿ ನಿಂತಿದ್ದ ಡಿಕೆ ಶಿವಕುಮಾರ್​ ನಡೆಗೆ ರಮೇಶ್​ ಜಾರಕಿಹೊಳಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಕನಕಪುರ ಗೌಡರ ಹಸ್ತಕ್ಷೇಪ ಇಲ್ಲಿಗೆ ಬೇಡ ಎಂದು ಎಚ್ಚರಿಕೆ ನೀಡಿದ್ದರು.

ಈ ಘಟನೆ ಬಳಿಕ ಇವರ ನಡುವಿನ ಮುನಿಸು ಬಹಿರಂಗಗೊಂಡಿತು. ಅಲ್ಲದೇ ಸರ್ಕಾರ ಪತನಗೊಳ್ಳಲು ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com