ಯಡಿಯೂರಪ್ಪಗೆ ತೊಂದರೆ ಕೊಡಬೇಡ್ರಿ; ಕಾಂಗ್ರೆಸ್ಸಿನಿಂದ ಇನ್ನೂ 10 ಶಾಸಕರನ್ನ ತಗೋರೀ: ಆರ್.ಬಿ.ತಿಮ್ಮಾಪುರ

ಬಿಜೆಪಿಗೆ ಅಗತ್ಯವಿರುವುದಾದರೆ ಕಾಂಗ್ರೆಸ್‌ನಿಂದ ಇನ್ನು ಹತ್ತು ಜನ ಶಾಸಕರನ್ನು ಖರೀದಿಸಲ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾತ್ರ ಬಿಜೆಪಿ ವರಿಷ್ಠರು ತೊಂದರೆಕೊಡಬಾರದು ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.
ಆರ್.ಬಿ ತಿಮ್ಮಾಪುರ
ಆರ್.ಬಿ ತಿಮ್ಮಾಪುರ

ಧಾರವಾಡ:  ಬಿಜೆಪಿಗೆ ಅಗತ್ಯವಿರುವುದಾದರೆ ಕಾಂಗ್ರೆಸ್‌ನಿಂದ ಇನ್ನು ಹತ್ತು ಜನ ಶಾಸಕರನ್ನು ಖರೀದಿಸಲ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾತ್ರ ಬಿಜೆಪಿ ವರಿಷ್ಠರು ತೊಂದರೆಕೊಡಬಾರದು ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಬೇಡವಾದರೆ ಕಿತ್ತು ಹಾಕಲಿ, ಆದರೆ ಅವರನ್ನು ಆಟವಾಡಿಸುವುದು ಬೇಡ. ಯಡಿಯೂರಪ್ಪ ಬೇಡವಾದರೆ ಈಗಲೇ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಹಾಕಲಿ, ನಮ್ಮ ಕಾಂಗ್ರೆಸ್‌ನ ಇನ್ನು ಹತ್ತು ಜನ ಶಾಸಕರನ್ನು ಬೇಕಾದರೆ ತೆಗೆದುಕೊಳ್ಳಲಿ, ನಮ್ಮವರ ರಾಜೀನಾಮೆ ಕೊಡಿಸುವುದಾದರೆ ಕೊಡಿಸಲಿ. ದೇಶದ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದರು.

ಯಡಿಯೂರಪ್ಪ ಅವರಿಗೆ ಅವಮರ್ಯಾದೆ ಮಾಡುತ್ತಿದ್ದು, ಇದು ರಾಜ್ಯದ ಜನತೆಗೆ ಅವಮಾನ ಮಾಡಿದಂತೆ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿ ಅನಿತ್ ಶಾ, ನರೇಂದ್ರ ಮೋದಿ ಮುಂದೆ ತಗ್ಗಿ ಬಗ್ಗಿ ನಡೆಯುವುದು ಸರಿಯಲ್ಲ ಎಂದರು

ಕುಮಾರಸ್ವಾಮಿ ಕಿಂಗ್ ಆಗೋಕೆ ಸಾಧ್ಯವಿಲ್ಲ

ಇನ್ನು ಜೆಡಿಎಸ್ ನ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಂದಿಗೂ ಕಿಂಗ್ ಆಗೋಕೆ ಸಾಧ್ಯವಿಲ್ಲ ಎಂದ ತಿಮ್ಮಾಪುರ ಅವರೇನಿದ್ದರೂ ಕಿಂಗ್ ಮೇಕರ್ ಆಗಬೇಕು. ಕಿಂಗ್ ಆಗೋಲ್ಲ ಎಂದಿದ್ದಾರೆ.

ಬಿಜೆಪಿ ಅತೃಪ್ತರೇ ಸವದೀನ ಸೋಲಿಸ್ತಾರೆ

ಡಿಸಿಎಂ ಲಕ್ಷ್ಮಣ ಸವದಿ ಬಗೆಗೆ ಬಿಜೆಪಿಯಲ್ಲಿರುವವರಿಂದಲೇ ಸಸಮಾಧಾನವಿದೆ. ಸವದಿ ಪರಿಷ್‌ಗೆ ಆಯ್ಕೆಯಾಗುವ ಬಗ್ಗೆ ಬಿಜೆಪಿಯ ಕೆಲ ನಾಯಕರಲ್ಲಿ ಅತೃಪ್ತಿ ಇದೆ.ದಕ್ಕಾಗಿಯೇ ಎಂಎಲ್‌ಸಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ ಎಂದು ಮಾಜಿ ಸಚಿವ ತಿಮ್ಮಾಪುರ ಹೇಳಿದ್ದಾರೆ.

ಪವರ್ ಪಾಲಿಟಿಕ್ಸ್ ನಲ್ಲಿ ಸವದಿಗೆ ಸೋಲಾದರೆ ಅಚ್ಚರಿ ಇಲ್ಲವೆಂದ ಅವರು ಸರ್ಕಾರ ತಮ್ಮ ವಿರುದ್ಧವೇ ನಡೀತಿದೆ ಎಂದು ಬಿಜೆಪಿಯ ಕೆಲವರಿಗೆ ಅನಿಸಿದೆ. ಹಾಗಾಗಿ ಪರಿಷತ್ ಚುನಾವಣೆಗೆ ಅಭ್ಯರ್ಥಿ ಹಾಕುವಂತೆ ಹೇಳಲಾಗಿದೆ  ಎಂದು ಪರಿಷತ್ ಚುನಾವಣೆ ಬಗೆಗೆ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com