ಸಂಪುಟ ವಿಸ್ತರಣೆ: ಹಲವು ಜಿಲ್ಲೆಗಳಿಗೆ ಇಲ್ಲವಾದ ಪ್ರತಿನಿಧಿ- ಯತ್ನಾಳ್ ತೀವ್ರ ಅಸಮಾಧಾನ

ಖಾತೆ ಹೆಂಚಿಕೆ ಬೆನ್ನಲ್ಲೇ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. 
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬೆಳಗಾವಿ: ಖಾತೆ ಹೆಂಚಿಕೆ ಬೆನ್ನಲ್ಲೇ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. 

ಸಚಿವ ಸ್ಥಾನ ವಂಚಿತ 15-17 ಶಾಸಕರು ತಮ್ಮ ಸಂಪರ್ಕದಲ್ಲಿದ್ದು, ಪ್ರಸ್ತುತ ಬೆಂಗಳೂರಿನಲ್ಲಿಯೇ ಸಭೆ ಸೇರಲಿದ್ದೇವೆಂದು ಹೇಳಿದ್ದಾರೆ. ಜೊತೆಗೆ ಶೀಘ್ರ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದಾರೆ. 

ಸಚಿವ ಸ್ಥಾನ ವಂಚಿತ ಶಾಸಕರ ಮನಸ್ಸಿನಲ್ಲಿ ಇದೀಗ ನೋವಿದೆ. ಅನೇಕ ಶಾಸಕರು ಈ ಬಗ್ಗೆ ನನ್ನ ಜೊತೆಗೆ ಮಾಡನಾದಿದ್ದಾರೆ. 15-17 ಮಂದಿ ನನ್ನ ಜೊತೆ ಅಸಮಾಧಾನ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿಯೇ ನಾವೆಲ್ಲ ಬೆಂಗಳೂರಿನಲ್ಲಿ ಸೇರಲಿದ್ದೇವೆ. ಮುಂದಿನ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಲಿದ್ದೇವೆ. ಎಲ್ಲರೂ ಸರ್ಕಾರ, ಪಕ್ಷ ಹಾಗೂ ಮುಖ್ಯಮಂತ್ರಿ ಹಿತದೃಷ್ಟಿಯಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು. 

ಸೋತವರನ್ನು ಸಚಿವರನ್ನಾಗಿ ಮಾಡಿದರೆ, ಗೆದ್ದು ಬಂದ ಶಾಸಕರಿಗೆ ಕಸಿವಿಸಿ ಆಗಲಿದೆ. ಹೀಗಾಗಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಚಿವ ಸ್ಥಾನದ ವಿಚಾರದಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬೇಕು. ಸ್ಪೀಕರ್ ಆದಿಯಾಗಿ ಎಲ್ಲಾ ರೀತಿಯ ಅಧಿಕಾರ ಅನುಭವಿಸಿದವರು ಪಕ್ಷಕ್ಕಾಗಿ ತ್ಯಾಗ ಮಾಡಬೇಕು. ಸಂಪುಟ ಪುನಾರಚಣೆ ಆಗಬೇಕು. ಸಚಿವರ ಮೌಲ್ಯಮಾಪನ ಕೆಲಸವೂ ನಡೆಯಬೇಕು ಎಂದು ಒತ್ತಾಯಿಸಿದ ಅವರು, ಈಗ ನಡೆದಿರುವ ಸಚಿವ ಸಂಪುಟ ವಿಸ್ತರಣೆ, ಬೆಂಗಳೂರು, ಬೆಳಗಾವಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾದಂತಾಗಿದೆ ಎಂದು ಅಸಮಾಧಾನವನ್ನೂ ಹೊರಹಾಕಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com