ಸಾಹುಕಾರ್ ಸಂತೃಪ್ತಿ: ಕೇಳಿದ್ದೊಂದು ಕೊಟ್ಟಿದ್ದೊಂದು ಸುಧಾಕರ್ ಅತೃಪ್ತಿ; ಲಕ್ಷ್ಮಣ ಸವದಿಗೆ ಹಿನ್ನಡೆ 

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟ ಸಹೋದ್ಯೋಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಗಳ ನಂತರ 10 ಮಂದಿ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ.
ರಮೇಶ್ ಜಾರಕಿಹೊಳಿ ಮತ್ತು ಕೆ.ಸುಧಾಕರ್
ರಮೇಶ್ ಜಾರಕಿಹೊಳಿ ಮತ್ತು ಕೆ.ಸುಧಾಕರ್

ಬೆಂಗಳೂರು:  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟ ಸಹೋದ್ಯೋಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಗಳ ನಂತರ 10 ಮಂದಿ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ.

ಸಿಎಂ  ಬಿ.ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ನಂತರ ಯಾವುದೇ ರೀತಿಯ ಅಸಮಾಧಾನ ಉಂಟಾಗಬಾರದು ಎಂಬುದನ್ನು ಗಮನದಲ್ಲಿರಿಸಿಕೊಂಡು ಬಹಳ ಎಚ್ಚರಿಕೆಯಿಂದ ಖಾತೆ ಹಂಚಿಕೆ ಮಾಡಿದ್ದಾರೆ,  ಜೊತೆಗೆ ಕೆಲವು ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ.

ಬಹುದೊಡ್ಡ ಖಾತೆಯದ ಜಲ ಸಂಪನ್ಮೂಲ ಇಲಾಖೆಯ ಹೊಣೆಯನ್ನು ರಮೇಶ್ ಜಾರಕಿಹೊಳಿಗೆ ನೀಡಿದ್ದಾರೆ, ಜೊತೆಗೆ ಡಿಸಿಎಂ ಲಕ್ಷ್ಮಣ ಸವದಿ ಬಳಿಯಿದ್ದ ಹೆಚ್ಚುವರಿ ಕೃಷಿ ಖಾತೆಯನ್ನು ವಾಪಸ್ ತೆಗೆದುಕೊಂಡುಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಿದ್ದಾರೆ. ಕೇಂದ್ರ ನಾಯಕರುಗಳ ಜೊತೆ ಹಲವು ಸುತ್ತಿನ ಮಾತುಕತೆ ಚರ್ಚೆ ನಡೆದ ಬಳಿಕ, ಈ ಹಿಂದೆ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಬಳಿಯಿದ್ದ ಜಲಸಂಪನ್ಮೂಲ ಖಾತೆಯನ್ನು ಪಟ್ಟು ಹಿಡಿದು ಜಾರಕಿಹೊಳಿ ಗಿಟ್ಟಿಸಿಕೊಂಡಿದ್ದಾರೆ.

ಬಿಜೆಪಿ ಸೇರುವುದಕ್ಕೆ ಮುಂಚೆಯೇ ಜಾರಕಿಹೊಳಿಗೆ ಪ್ರಬಲ ಖಾತೆಯ ಭರವಸೆ ನೀಡಲಾಗಿತ್ತು.  ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಎಂಎಸ್ ಐಎಲ್ ಅಧ್ಯಕ್ಷ ಸ್ಥಾನ ನೀಡಲಾಗಿದೆ.  ಇನ್ನೂ ಆರು ಸಚಿವ ಸ್ಥಾನಗಳನ್ನು ಬಾಕಿ ಉಳಿಸಿಕೊಂಡಿರುವ ಯಡಿಯೂರಪ್ಪ ಪಕ್ಷನಿಷ್ಠರಿಗೆ ನೀಡಲು ನಿರ್ಧರಿಸಿದ್ದಾರೆ, ರಾಜ್ಯ ಬಜೆಟ್ ಮುಗಿದ ನಂತರ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಿಲಾಗಿದೆ. 

ಇನ್ನು ಖಾತೆ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿರುವ  ಸಚಿವ ಶಿವರಾಮ್ ಹೆಬ್ಬಾರ್, ನಾನು ಶೇ. 200 ರಷ್ಟು ತೃಪ್ತನಾಗಿದ್ದೇನೆ, ನಾನು ಅಧಿಕಾರಿಗಳ ಜತೆ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದೇನೆ, ಈ ಮೊದಲು ಈ ಖಾತೆ ಸುರೇಶ್ ಕುಮಾರ್ ಅವರ ಬಳಿಯಿತ್ತು, ಅವರ ಅನುಭವದ ಸಲಹೆಗಳನ್ನು ಪಡೆಯುತ್ತೇನೆ ಎಂದು ಹೇಳಿದ್ದಾರೆ. 

ಕೇಳಿದ್ದು ಒಂದು, ಕೊಟ್ಟದ್ದು ಇನ್ನೊಂದು" ಎಂದು ಚಿಕ್ಕಬಳ್ಲಾಪುರ ಶಾಸಕ ಡಾ. ಸುಧಾಕರ್ ಬೇಸರ ವ್ಯಕ್ತಪಡಿಸಿದ್ದರೆ, ಅರಣ್ಯ ಖಾತೆ ಸಿಕ್ಕಿದ್ದಕ್ಕೆ ಕೌರವ ಬಿ.ಸಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು, ಮೂಲ ಬಿಜೆಪಿಯ ಶಾಸಕರ ಪೈಕಿ, ಹಲವರಿಗೆ ಹೆಚ್ಚುವರಿ ಖಾತೆ ಸಿಕ್ಕರೆ, ಕೆಲವರು ಇದ್ದ ಖಾತೆಯನ್ನೂ ಕಳೆದುಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ, ಲಕ್ಷ್ಮಣ ಸವದಿಗೆ ಹಿನ್ನಡೆಯಾಗಿದೆ.

ಸವದಿ ಬಳಿಯಿದ್ದ ಕೃಷಿಖಾತೆಯನ್ನು ತಮ್ಮ ಪರಮಾಪ್ತ ಬಸವರಾಜ ಬೊಮ್ಮಾಯಿಗೆ, ಬಿಎಸ್ವೈ ನೀಡಿದ್ದಾರೆ. ಗೃಹಖಾತೆಯ ಜೊತೆಗೆ, ಹೆಚ್ಚುವರಿಯಾಗಿ ಬೊಮ್ಮಾಯಿಗೆ ಕೃಷಿ ಖಾತೆ ಬಂದಂತಾತಿದೆ. ಆದರೆ, ಬೊಮ್ಮಾಯಿ, ಜಲಸಂಪನ್ಮೂಲ ಖಾತೆಯ ಮೇಲೆ ಕಟ್ಟಿದ್ದರು. ಆದರೆ, ಅದು ಜಾರಕಿಹೊಳಿ ಪಾಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com