ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಗಿಂತ ಮಿಗಿಲಾದವರೇ?: ಬಿ.ಸಿ.ಪಾಟೀಲ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಜಯಗಳಿಸಿ ಸಚಿವರಾದವರ ಮೇಲೆ ಮತ್ತೆ ಮತ್ತೆ ತಮ್ಮ ಟೀಕೆ ಮಾಡುತ್ತಿರುವುದನ್ನು ಖಂಡಿಸಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಇವರೇನು ಸುಪ್ರೀಂ ಕೋರ್ಟ್ ಗಿಂತ ಮಿಗಿಲಾದವರೇ ಎಂದು ಪ್ರಶ್ನಿಸಿದ್ದಾರೆ. 
ಬಿ ಸಿ ಪಾಟೀಲ್
ಬಿ ಸಿ ಪಾಟೀಲ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಜಯಗಳಿಸಿ ಸಚಿವರಾದವರ ಮೇಲೆ ಮತ್ತೆ ಮತ್ತೆ ತಮ್ಮ ಟೀಕೆ ಮಾಡುತ್ತಿರುವುದನ್ನು ಖಂಡಿಸಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಇವರೇನು ಸುಪ್ರೀಂ ಕೋರ್ಟ್ ಗಿಂತ ಮಿಗಿಲಾದವರೇ ಎಂದು ಪ್ರಶ್ನಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಕೂಡ ಹಿಂದೆ ಜೆಡಿ ಎಸ್‍ನಿಂದ ಕಾಂಗ್ರೆಸಿಗೆ ಹೋದವರು. ಆಗ ಉಪ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಮತಗಳಿಂದ ಕೂದಲೆಳೆ ಅಂತರದಲ್ಲಿ ಜಯಗಳಿಸಿದವರು. ಅವರಿಂದ ನಾವು ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. 

ನಾವೇನೂ ಕ್ರಾಸ್ ಓಟಿಂಗ್ ಮಾಡಿ ಕಾನೂನು ಉಲ್ಲಂಘಿಸಿಲ್ಲ. ರಾಜಿನಾಮೆ ನೀಡಿದ್ದೇವೆ. ಸುಪ್ರೀಮ್ ಕೋರ್ಟ್ ನೀಡಿದ ಆದೇಶ ಬಂದ ನಂತರ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಜನಾದೇಶ ಪಡೆದಿದ್ದೇವೆ. ಹೀಗಿರುವಾಗ ಸಿದ್ದರಾಮಯ್ಯ ಅವರು ನಮ್ಮನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ.‌ ಪದೇ ಪದೇ ತಾನು‌ ಕಾನೂನು ವಿದ್ಯಾರ್ಥಿ ಎಂದು ಹೇಳುವ ಅವರು ಕಾನೂನಿನ ಪ್ರಾಥಮಿಕ ಅಂಶಗಳನ್ನು ಮೊದಲು ಅರಿಯಲಿ. ಅವರು ಸುಪ್ರೀಂ ಕೋರ್ಟ್ ಗಿಂತ ದೊಡ್ಡವರಲ್ಲ ಎಂದು ಕುಟುಕಿದರು.

ನಾನಾಗಿಯೇ ಬಯಸಿ ಕೃಷಿ ಇಲಾಖೆ ಪಡೆದಿದ್ಸೇನೆ. ರೈತರ ಮಗನಾಗಿ ಅವರ ಕಷ್ಟಗಳು ಗೊತ್ತಿವೆ. ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು. 

ತಾವು ಹಸಿರು ಶಾಲು ಹೊದ್ದಿರುವ ಬಗ್ಗೆ ಪ್ರಸ್ತಾಪಿಸಿದ ಅವರು ಇದು ಕೃಷಿ ಸಚಿವನಾಗಿ ನನ್ನ ಸಮವಸ್ತ್ರ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com