ಬಂದ ದಾರಿಕೆ ಸುಂಕವಿಲ್ಲ: ಅಮಿತ್ ಶಾ ಭೇಟಿಯಾಗದೆ ವಾಪಸ್ಸಾದ ಉಮೇಶ್ ಕತ್ತಿ 

ಸಚಿವ ಸ್ಥಾನ ಕೈತಪ್ಪಿರುವ ಹಿನ್ನಲೆಯಲ್ಲಿ ಬೇಸರಗೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿದ್ದ ಮಾಜಿ ಸಚಿವ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕರ್ನಾಟಕ ಭವನದಿಂದ ತೆರಳಿದ್ದಾರೆ. 
ಉಮೇಶ್ ಕತ್ತಿ
ಉಮೇಶ್ ಕತ್ತಿ

ನವದೆಹಲಿ: ಸಚಿವ ಸ್ಥಾನ ಕೈತಪ್ಪಿರುವ ಹಿನ್ನಲೆಯಲ್ಲಿ ಬೇಸರಗೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿದ್ದ ಮಾಜಿ ಸಚಿವ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕರ್ನಾಟಕ ಭವನದಿಂದ ತೆರಳಿದ್ದಾರೆ. 

ಬುಧವಾರವಷ್ಟೇ ಉಮೇಶ್ ಕತ್ತಿ ಮತ್ತು ಸಹೋದರ ರಮೇಶ್ ಕತ್ತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮೂಲಗಳ ಪ್ರಕಾರ, ರಮೇಶಅ ಕತ್ತಿಗೆ ಲೋಕಸಭಾ ಟಿಕೆಟ್ ಕೈತಪ್ಪಿರುವುದರಿಂದ ರಾಜ್ಯ ಸಭಾ ಟಿಕೆಟ್ ಕೊಡಿಸಲು ನಡ್ಡಾ ಅವರನ್ನು ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. 

ಗುರುವಾರ ಬೆಳಗ್ಗೆ ಖುಷಿಯಲ್ಲಿಯೇ ಇದ್ದ ಕತ್ತಿಯವರನ್ನು ಮಾಧ್ಯಮಗಳ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಂಜೆ 4.30ಕ್ಕೆ ಶಾ ಬೇಟಿಗೆ ಸಮಯ ನಿಗದಿಯಾಗಿದೆ ಎಂದು ತಿಳಿಸಿದ್ದರು. ಆದರೆ, ಸಂಜೆ ಮತ್ತೆ ಪ್ರಶ್ನಿಸಿದಾಗ ಮಧ್ಯಾಹ್ನವೇ ಭೇಟಿಯಾಯ್ತು ಎಂದು ಉತ್ತರ ನೀಡಿ ರೂಮ್ ಚೆಕ್ ಔಟ್ ಮಾಡಿಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ. 

ಮೂಲಗಲ ಪ್ರಕಾರ ಅಮಿತ್ ಶಾ ಅವರು ಕತ್ತಿಯವರನ್ನು ಭೇಟಿ ಮಾಡಲು ನಿರಾಕರಿಸಿದ್ದು, ಈ ಮೂಲಕ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಗೊಳಿಸಲು ನಕಾರ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ. 

ಈ ನಡುವೆ ಎಂಎಲ್'ಸಿ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿಯನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗಟ್ಟಿನಿಂದ ಸ್ಪರ್ಧಿಸಬೇಕೆಂದು ಕತ್ತಿ ಬಯಸಿದ್ದಾರೆಂದು ಮೂಲಗಳು ತಿಳಿಸಿವೆ. 

ಕತ್ತಿಯವರಿಗೆ ಬೆಂಬಲ ನೀಡಿದ ಜನರು ಸವದಿಗೆ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಉಮೇಶ್ ಕತ್ತಿ ಆಪ್ತರು ಮಾಹಿತಿ ನೀಡಿದ್ದಾರೆ, ಈ ಬಗ್ಗೆ ಶುಕ್ರವಾರ ಬೆಳಗಾವಿಯಲ್ಲಿಯೇ ಮಾತನಾಡುವುದಾಗಿಯೂ ಕತ್ತಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com