ಅಪಘಾತ ಪ್ರಕರಣ: ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳುವಷ್ಟು ಸೌಜನ್ಯ ಇಲ್ಲ- ಡಿ.ಕೆ.ಸುರೇಶ್ 

ಸಚಿವ ಆರ್.ಅಶೋಕ್ ಪುತ್ರನದು ಎನ್ನಲಾದ ಕಾರು ಅಪಘಾತ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿರುವ  ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನವನ್ನೂ ಹೇಳುವಷ್ಟು ಸೌಜನ್ಯವಾಗಲಿ, ಮಾನವೀಯತೆಯಾಗಲೀ ಬಿಜೆಪಿಯವರಿಗೆ  ಇಲ್ಲ ಎಂದು ಟೀಕಿಸಿದರು.

Published: 15th February 2020 01:40 PM  |   Last Updated: 15th February 2020 02:03 PM   |  A+A-


DKSuresh1

ಡಿಕೆ ಸುರೇಶ್

Posted By : Nagaraja AB
Source : UNI

ಬೆಂಗಳೂರು: ಸಚಿವ ಆರ್.ಅಶೋಕ್ ಪುತ್ರನದು ಎನ್ನಲಾದ ಕಾರು ಅಪಘಾತ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿರುವ  ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನವನ್ನೂ ಹೇಳುವಷ್ಟು ಸೌಜನ್ಯವಾಗಲಿ, ಮಾನವೀಯತೆಯಾಗಲೀ ಬಿಜೆಪಿಯವರಿಗೆ  ಇಲ್ಲ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ  ಅವರು, ಕಾಂಗ್ರೆಸ್ ನವರು ಏನೇ ಮಾಡಿದರೂ ಅಪಚಾರವಾಗುತ್ತದೆ. ನಲಪಾಡ್ ಘಟನೆ ಬಗ್ಗೆ ಮಾತ್ರವೇ ಚರ್ಚೆಯಾಗುತ್ತಿದೆ.ಇದರಿಂದ ನಮ್ಮ ಶಾಸಕ ಹ್ಯಾರೀಸ್ ಬಹಳ ನೋವು ಅನುಭವಿಸಿದ್ದಾರೆ. ಬಿಜೆಪಿ ಸಚಿವರ ಪುತ್ರರ  ಅಪಘಾತದಿಂದ ಇಬ್ಬರು ಮೃತ ಪಟ್ಟಿದ್ದಾರೆ. ಅಪಘಾತ ಮಾಡಿದ ಕಾರು ಬಿಜೆಪಿ ನಾಯಕರದ್ದೇ ಎನ್ನುತ್ತಿದ್ದಾರೆ.ಆದರೆ, ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಲು ಬಿಜೆಪಿ ನಾಯಕರು ಹೋಗಲಿಲ್ಲ ಎಂದರು

ಮಾಧ್ಯಮದವರು ನಲಪಾಡ್ ಪ್ರಕರಣವನ್ನು ಮಾತ್ರ ತೋರಿಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಗೆ ಗೌರವ ಕೊಡಬೇಕಾಗಿರುವ ಮಾಧ್ಯಮಗಳೇ ಸುದ್ದಿ ಬಿತ್ತರಿಸುವಲ್ಲಿ ತಾರತಮ್ಯವೆಸಗಿದೆ ಎಂದರು.

ಬೀದರ್ ಶಾಹೀನ್ ಶಾಲೆ ದೇಶದ್ರೋಹ ಪ್ರಕರಣ ನೋಡಿದರೆ ಬಿಜೆಪಿಯಿಂದ ದೌರ್ಜನ್ಯ ಸಾಕಷ್ಟು ನಡೆಯುತ್ತಿದೆ‌. ಪೊಲೀಸರನ್ನು ಬಳಸಿಕೊಂಡು ಭಯದ ವಾತಾವರಣ ಸೃಷ್ಟಿಮಾಡುತ್ತಿದ್ದಾರೆ. ಬಿಜೆಪಿ ನಡೆ ವಿರೋಧಿಸಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ. ಕೆ. ಸುರೇಶ್ ತಿಳಿಸಿದರು.

Stay up to date on all the latest ರಾಜಕೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp