ಆರೋಪಗಳಿದ್ದ ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾದರೂ ಏಕೆ: ಆನಂದ್ ಸಿಂಗ್

ತಮ್ಮ  ಮೇಲಿನ ಆರೋಪಗಳು ಇಂದು ನಿನ್ನೆಯದಲ್ಲ. ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದಾಗಲೂ  ಇದ್ದವು. ಆರೋಪಗಳನ್ನು ಹೊತ್ತ ಕಾಂಗ್ರೆಸ್ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತಾದರೂ ಏಕೆ ? ಎಂದು ಅರಣ್ಯ  ಸಚಿವ ಆನಂದ್ ಸಿಂಗ್ ಕಾಂಗ್ರೆಸಿಗೆ ತಿರುಗೇಟು ನೀಡಿದ್ದಾರೆ

Published: 17th February 2020 07:35 PM  |   Last Updated: 17th February 2020 07:39 PM   |  A+A-


AnandSingh1

ಆನಂದ್ ಸಿಂಗ್

Posted By : nagaraja
Source : UNI

ಬೆಂಗಳೂರು: ತಮ್ಮ  ಮೇಲಿನ ಆರೋಪಗಳು ಇಂದು ನಿನ್ನೆಯದಲ್ಲ. ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದಾಗಲೂ  ಇದ್ದವು. ಆರೋಪಗಳನ್ನು ಹೊತ್ತ ಕಾಂಗ್ರೆಸ್ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತಾದರೂ ಏಕೆ ? ಎಂದು ಅರಣ್ಯ  ಸಚಿವ ಆನಂದ್ ಸಿಂಗ್ ಕಾಂಗ್ರೆಸಿಗೆ ತಿರುಗೇಟು ನೀಡಿದ್ದಾರೆ

ಸುದ್ದಿಗಾರರೊಂದಿಗೆ  ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮ್ಮ ಮೇಲೆ ಆರೋಪಗಳಿವೆ ಎಂದು ಈಗ ವಿರೋಧಿಸುತ್ತಿರುವ  ಕಾಂಗ್ರೆಸ್ ನಾಯಕರು ಹಿಂದೆ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ  ಎನ್ನಬೇಕಿತ್ತು ಎಂದು ಕುಟುಕಿದರು.

ತಮ್ಮ ಮೇಲಿರುವ ಆರೋಪಗಳು ಸಾಬೀತಾಗಿಲ್ಲ. ಅನೇಕ ಪ್ರಕರಣಗಳು ಖುಲಾಸೆ ಆಗಿವೆ ಎಂದು ಆನಂದ್ ಸಿಂಗ್ ಸಮಜಾಯಿಷಿ ನೀಡಿದರು.

ಕೃಷಿ  ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ನಾನು ಸವಾಲನ್ನು ಎದುರಿಸಿ ಗೆಲುವು  ಸಾಧಿಸಿದ್ದೇನೆ. ಕಾಂಗ್ರೆಸ್ ನಾಯಕರು ನನ್ನನ್ನು ಅನರ್ಹರನ್ನಾಗಿ ಮಾಡಿದ್ದರು.ಈಗ ಚುನಾವಣೆ  ಎದುರಿಸಿ ಜನಾಭಿಪ್ರಾಯ ಪಡೆದು ಅರ್ಹನಾಗಿ ಸಚಿವನಾಗಿ ವಿಧಾನಸಭೆ  ಪ್ರವೇಶಿಸುತ್ತಿದ್ದೇನೆ.ಸವಾಲು ಗೆದ್ದ  ಖುಷಿಯಾಗುತ್ತಿದೆ. ಪ್ರತಿಪಕ್ಷದವರನ್ನು ಎದುರಿಸಲು ಸನ್ನದ್ಧವಾಗಿದ್ದೇವೆ. ಅದಕ್ಕೆ ಯಾವ ತಯಾರಿಯೂ ಅಗತ್ಯವಿಲ್ಲ ಎಂದರು.


Stay up to date on all the latest ರಾಜಕೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp