ಪಾಕ್'ನಲ್ಲಿ ಮೋದಿ ಬಿರಿಯಾನಿ ತಿಂದರು ಹೇಳಿಕೆಗೆ ಬಿಜೆಪಿಗರ ಆಕ್ರೋಶ: ಖಾದರ್ ವಿಷಾದ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದಿದ್ದರು ಎಂದು ಮಾಜಿ ಸಚಿವ ಯುಟಿ ಖಾದರ್ ಅವರು ಬುಧವಾರ ನೀಡಿದ್ದ ಹೇಳಿಕೆ ಸದನದಲ್ಲಿ ಭಾರೀ ಕೋಲಾಹಲ, ಗದ್ದಲ, ಅವಾಚ್ಯ ಪದ ಹಾಗೂ ಏಕವಚನ ಪ್ರಯೋಗಕ್ಕೂ ಕಾರಣವಾಗಿ ಅಂತಿಮವಾಗಿ ಖಾದರ್ ಅವರು ಬಿರಿಯಾನಿ ತಿಂದರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಘಟನೆ ನಡೆಯಿತು. 
ಖಾದರ್
ಖಾದರ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದಿದ್ದರು ಎಂದು ಮಾಜಿ ಸಚಿವ ಯುಟಿ ಖಾದರ್ ಅವರು ಬುಧವಾರ ನೀಡಿದ್ದ ಹೇಳಿಕೆ ಸದನದಲ್ಲಿ ಭಾರೀ ಕೋಲಾಹಲ, ಗದ್ದಲ, ಅವಾಚ್ಯ ಪದ ಹಾಗೂ ಏಕವಚನ ಪ್ರಯೋಗಕ್ಕೂ ಕಾರಣವಾಗಿ ಅಂತಿಮವಾಗಿ ಖಾದರ್ ಅವರು ಬಿರಿಯಾನಿ ತಿಂದರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಘಟನೆ ನಡೆಯಿತು. 

ಕಾನೂನು ಸುವ್ಯವಸ್ಥೆ ಬಗೆಗಿನ ಚರ್ಚೆ ವೇಳೆ ಬಿಜೆಪಿಯ ಸುನಿಲ್ ಕುಮಾರ್ ಅವರು ಮಂಗಳೂರಿನ ಘಟನೆಗೆ ಖಾದರ್ ಕಾರಣ ಎಂಬ ಆರೋಪಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಖಾದರ್ ಅವರು, ಒಂದು ಹಂತದಲ್ಲಿ ನಮಗೆ ಪಾಕಿಸ್ತಾನದಲ್ಲಿ ಯಾರೂ ನೆಂಟರಿಲ್ಲ. ನೆಂಟರಿರುವುದು ನಿಮಗೆ. ಅದಕ್ಕೆ ಮೋದಿಯವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದರು ಎಂದು ಹೇಳಿದರು. 

ಈ ಹೇಳಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಬಿಜೆಪಿ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ದೇಶದ ಪ್ರಧಾನಿ ಬಗ್ಗೆ ಮರ್ಯಾದೆಯಿಂದ ಮಾತನಾಡಿ, ಕ್ಷಮೆ ಕೇಳಿ ಎಂದು ಆಗ್ರಹಿಸಿದರು. 

ಈ ವೇಳೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ, ಅಯೋಗ್ಯನ ಬಾಯಲ್ಲಿ ಆಯೋಗ್ಯ ಮಾತುಗಳೇ ಬರುವುದು ಎಂದರೆ, ಶಾಸಕ ರೇಣುಕಾಚಾರ್ಯ ಮಾತನಾಡಿ ಯುಟಿ ಖಾದರ್ ದೇಶದ್ರೋಹಿ ಎಂದು ಜರಿದರು. ಆಗ ಕಾಂಗ್ರೆಸ್ ಕಡೆಯಿಂದ ನೀನ್ಯಾರೋ ಸರ್ಟಿಫಿಕೇಟ್ ಕೊಡೋಕೆ ಎಂದು ಸದಸ್ಯರೊಬ್ಬರು ಏಕವಚನದಲ್ಲಿಯೇ ಪ್ರಶ್ನಿಸಿದರು. 

ವಾದ ವಾಗ್ವಾದಗಳ ಬಳಿಕ ಮಧ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸದನದ ಗೌರವ ಕಾಪಾಡುವಂತೆ ಸದಸ್ಯರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಖಾದರ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com