ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಿಲ್ಲಾ ರಾಜಕೀಯ ಧ್ರುವೀಕರಣಕ್ಕೆ ಸಜ್ಜಾಗುತ್ತಿದೆ ಕುಂದಾನಗರಿ?

ಕಳೆದ ಬಾರಿಯ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಂದಾಗಿ ರಾಜ್ಯ ರಾಜಕಾರಣವೇ ಬದಲಾಗಿ ಹೋಯಿತು. ಈಗ ಮತ್ತೆ ಜಿಲ್ಲೆಯ ಡಿಸಿಸಿ ಬ್ಯಾಂಕ್​ ಚುನಾವಣೆ ಎದುರಾಗಿದ್ದು, ಮತ್ತೊಮ್ಮೆ ಸ್ವಪಕ್ಷೀಯರ ನಾಯಕರ ಜಿದ್ದಾಜಿದ್ದಿ ವೇದಿಕೆಯಾಗುತ್ತಿದೆ.
ರಮೇಶ್ ಜಾರಕಿಹೊಳಿ,ಲಕ್ಷ್ಮಣ ಸವದಿ, ಉಮೇಶ್ ಕತ್ತಿ
ರಮೇಶ್ ಜಾರಕಿಹೊಳಿ,ಲಕ್ಷ್ಮಣ ಸವದಿ, ಉಮೇಶ್ ಕತ್ತಿ

ಬೆಳಗಾವಿ: ಕಳೆದ ಬಾರಿಯ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಂದಾಗಿ ರಾಜ್ಯ ರಾಜಕಾರಣವೇ ಬದಲಾಗಿ ಹೋಯಿತು. ಈಗ ಮತ್ತೆ ಜಿಲ್ಲೆಯ ಡಿಸಿಸಿ ಬ್ಯಾಂಕ್​ ಚುನಾವಣೆ ಎದುರಾಗಿದ್ದು, ಮತ್ತೊಮ್ಮೆ ಸ್ವಪಕ್ಷೀಯರ ನಾಯಕರ ಜಿದ್ದಾಜಿದ್ದಿ ವೇದಿಕೆಯಾಗುತ್ತಿದೆ.

ಎಪ್ರಿಲ್​​ನಲ್ಲಿ ಬೆಳಗಾವಿಯ ಡಿಸಿಸಿ ಬ್ಯಾಂಕ್​ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯ ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿಗೆ ಸಜ್ಜಾಗಿದ್ದಾರೆ. ರಮೇಶ್​ ಜಾರಕಿಹೊಳಿ-ಉಮೇಶ್​ ಕತ್ತಿ- ಲಕ್ಷ್ಮಣ ಸವದಿ ಮೂವರು ಅಧಿಕಾರ ಪಡೆಯಲು ಹವಣಿಸುತ್ತಿದ್ದಾರೆ. 

ಜಿಲ್ಲೆಯ ಮೂವರು ನಾಯಕರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಬ್ಯಾಂಕ್​ನ ಅಧ್ಯಕ್ಷ ಸ್ಥಾನದ  ಗದ್ದುಗೆ ಹಿಡಿಯಲು ನಾಯಕರು ತೀವ್ರ ಪೈಪೋಟಿ ನಡೆಸಿದ್ದಾರೆ. ವಿಶೇಷವೆಂದರೇ ಮೂವರು ಒಂದೇ ಪಕ್ಷದ ನಾಕರಾಗಿದ್ದಾರೆ.

ಸದ್ಯ ಡಿಸಿಸಿ ಬ್ಯಾಂಕ್​ ಅಧ್ಯಕ್ಷರಾಗಿ ಉಮೇಶ್​ ಕತ್ತಿ ಸಹೋದರ ಮಾಜಿ ಸಂಸದ ರಮೇಶ್​ ಕತ್ತಿ ಇದ್ದು, ಇವರೇ ತಮ್ಮ ಆಡಳಿತ ಮುಂದುವರೆಸಲಿ ಎಂಬುದು ಉಮೇಶ್​ ಕತ್ತಿ ಅಭಿಪ್ರಾಯ.  

ತಮ್ಮ ರಾಜಕೀಯದಲ್ಲಿ ಪ್ರತಿಹೆಜ್ಜೆಯಲ್ಲಿ ಜೊತೆಯಾಗಿದ್ದು, ಸಚಿವ ಸ್ಥಾನದಿಂದ ವಂಚಿರಾಗಿರುವ ಮಹೇಶ್​ ಕುಮಠಳ್ಳಿಗೆ ಈ ಸ್ಥಾನ ಕೊಡಿಸಲು ನೂತನ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅಲ್ಲದೇ, ಈ ಕುರಿತು ಸಿಎಂ ಮೇಲೆ ಕೂಡ ಒತ್ತಡ ಹಾಕಿದ್ದಾರೆ.  

ಇನ್ನು ನಡುವೆ ಈ ಚುನಾವಣೆ ಡಿಸಿಎಂ ಲಕ್ಷ್ಮಣ ಸವದಿಗೂ ಕೂಡ ಪ್ರತಿಷ್ಠೆ ಕಣವಾಗಿದ್ದು, ಅಧಿಕಾರ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದ್ದಾರೆ.

ಈ ನಡುವೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸಹ ಡಿಸಿಸಿ ಬ್ಯಾಂಕ್ ಪ್ರವೇಶಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com