ಜೂನ್ ನಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳ ತೆರವು: ಮೂರೂ ಪಕ್ಷಗಳಲ್ಲಿ ತೀವ್ರಗೊಂಡ ಲಾಬಿ 

ಮುಂಬರುವ ಜೂನ್ ನಲ್ಲಿ ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಮುಗಿಯಲಿದ್ದು, ಆ ಸ್ಥಾನಕ್ಕಾಗಿ ಮೂರೂ ಪಕ್ಷಗಳಿಂದ ಲಾಬಿ ತೀವ್ರವಾಗಿದೆ. 
ಜೂನ್ ನಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳ ತೆರವು: ಮೂರೂ ಪಕ್ಷಗಳಲ್ಲಿ ತೀವ್ರಗೊಂಡ ಲಾಬಿ 

ಬೆಂಗಳೂರು: ಮುಂಬರುವ ಜೂನ್ ನಲ್ಲಿ ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಮುಗಿಯಲಿದ್ದು, ಆ ಸ್ಥಾನಕ್ಕಾಗಿ ಮೂರೂ ಪಕ್ಷಗಳಿಂದ ಲಾಬಿ ತೀವ್ರವಾಗಿದೆ. 


ಈಗಿರುವ ಸದಸ್ಯರುಗಳಾದ ಪ್ರಭಾಕರ್ ಕೋರೆ, ಕುಪೇಂದ್ರ ರೆಡ್ಡಿ, ಡಾ ರಾಜೀವ್ ಗೌಡ ಮತ್ತು ಬಿ ಕೆ ಹರಿಪ್ರಸಾದ್ ಅವರ ಅಧಿಕಾರಾವಧಿ 6 ವರ್ಷಗಳ ಬಳಿಕ ಜೂನ್ ಗೆ ಮುಕ್ತಾಯವಾಗಲಿದೆ. ಹರಿಪ್ರಸಾದ್ ಮತ್ತು ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ನಿಂದ ಮೇಲ್ಮನೆಗೆ ಕಳುಹಿಸಿದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 


ನಂತರ ಮೂರನೇ ಅಭ್ಯರ್ಥಿ ಕೆ ಸಿ ರಾಮಮೂರ್ತಿಯವರನ್ನು ಕಳುಹಿಸಿತ್ತು. ನಂತರ ಅವರು ಕೆಲ ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾದರು. ಇಂದು ಕಾಂಗ್ರೆಸ್ ನಲ್ಲಿ ರಾಜ್ಯಸಭಾ ಸದಸ್ಯರ ಸಂಖ್ಯೆ 68 ಸ್ಥಾನಕ್ಕಿಳಿದಿದ್ದು ಜೂನ್ ನಲ್ಲಿ ಮೂರು ಸೀಟುಗಳ ಬದಲಿಗೆ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.


ಮಾಜಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಕಳುಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ಕೂಡ ಅದಿನ್ನೂ ದೃಢವಾಗಿಲ್ಲ. ಬಿ ಕೆ ಹರಿಪ್ರಸಾದ್ ಅವರು ಮತ್ತೊಮ್ಮೆ ನೇಮಕಗೊಳ್ಳುವ ಸಾಧ್ಯತೆ ಕಡಿಮೆ. ಕಾಂಗ್ರೆಸ್ ನಲ್ಲಿ ಮತ್ತಾರೂ ಹಿಂದುಳಿದ ಅಭ್ಯರ್ಥಿಗಳಿಲ್ಲ, ಹೀಗಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನೇ ಆಯ್ಕೆಮಾಡಿ ರಾಜ್ಯಸಭೆಗೆ ಕಳುಹಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಪರಿಶಿಷ್ಟ ಪಂಗಡದಿಂದ ಬಂದಿರುವ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರನ್ನು ಸಹ ಕಳುಹಿಸಬಹುದು ಎಂದು ಕೂಡ ಹೇಳಲಾಗುತ್ತಿದೆ.


ಇನ್ನು ಜೆಡಿಎಸ್ ನಿಂದ ಹೆಚ್ ಡಿ ದೇವೇಗೌಡರು ತಮ್ಮ ಪಕ್ಷದಿಂದ ನಾಯಕನನ್ನು ಆರಿಸಿ ಕಳುಹಿಸುವ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಎರಡೂ ಪಕ್ಷಗಳು ಇದನ್ನು ಖಚಿತಪಡಿಸಿಲ್ಲ. ರಾಜ್ಯ ವಿಧಾನಸಭೆಯಲ್ಲಿ 34 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ನಿಂದ ಜೂನ್ ನಲ್ಲಿ ಕುಪೇಂದ್ರ ರೆಡ್ಡಿಯವರನ್ನು ವಿಧಾನಪರಿಷತ್ ಸದಸ್ಯ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.


ಇನ್ನು ತಮ್ಮ ಅಭ್ಯರ್ಥಿ ಪರವಾಗಿ ಮತ ಹಾಕುವಂತೆ ಬಿಜೆಪಿ ಜೆಡಿಎಸ್ ಸದಸ್ಯರ ಮನವೊಲಿಸಬಹುದು ಎಂದು ಹೇಳಲಾಗುತ್ತಿದೆ. ಪ್ರಭಾಕರ್ ಕೋರೆಯವರನ್ನು ರಾಜ್ಯಸಭಾ ಸದಸ್ಯರಾಗಿ ಬಿಜೆಪಿ ಮುಂದುವರಿಸಲೂಬಹುದು. ಬಿಜೆಪಿ ವಕ್ತಾರ ಗೋ ಮಧುಸೂದನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬಹುದು ಎಂದು ಕೂಡ ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com