ಕುಮಟಳ್ಳಿಗೆ ಅನ್ಯಾಯ ಆಗಿದೆ ಎಂದರೆ ಪದತ್ಯಾಗ: ಮತ್ತೆ ಜಾರಕಿಹೊಳಿಯಿಂದ ರಾಜೀನಾಮೆ ಮಾತು

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷ ತೊರೆದು ಇದೀಗ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಇದೀಗ ಮತ್ತೊಮ್ಮೆ ರಾಜೀನಾಮೆ ನೀಡುವ ಮಾತುಗಳನ್ನಾಡಿದ್ದಾರೆ. 
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷ ತೊರೆದು ಇದೀಗ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಇದೀಗ ಮತ್ತೊಮ್ಮೆ ರಾಜೀನಾಮೆ ನೀಡುವ ಮಾತುಗಳನ್ನಾಡಿದ್ದಾರೆ. 

ತಮಗೆ ಅನ್ಯಾಯ ಆಗಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಲಿ ಹೇಳಿದ್ದೇ ಆದರೆ, ರಾಜೀನಾಮೆ ನೀಡಲು ಸಿದ್ಧ ಎಂದು ರಮೇಶ್ ಹೇಳಿದ್ದಾರೆ. 

ಬೆಳಗಾವಿ ರಾಜಕಾರಣದಲ್ಲಿ ತನ್ನದೇ ಆದ ಪಟ್ಟುಗಳಿಗೆ ಹೆಸರುವಾಸಿಯಾಗಿರುವ ರಮೇಶ್ ಅವರ ಈ ವರಸೆ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಾರಕಿಹೊಳಿಯವರು, ಸಚಿವ ಸ್ಥಾನ ವಂಚಿತರಾಗಿರುವ ಕುಮಟಳ್ಳಿಗೆ ನನ್ನಿಂದ ಏನಾದರೂ ಅನ್ಯಾಯವಾದಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದೇನೆಯೇ ಹೊರತು ಸರ್ಕಾರಕ್ಕೆ ಯಾವುದೇ ರೀತಿಯ ಬೆದರಿಕೆಯೊಡ್ಡಿಲ್ಲವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com