ಮತ್ತಷ್ಟು ವಿಳಂಬವಾಯ್ತು ಕೆಪಿಸಿಸಿ  ನೇಮಕ : ರಾಜ್ಯ ನಾಯಕರಿಗೆ ಕಾಯುವುದೊಂದೇ ಕಾಯಕ!

 ಕೇಂದ್ರ ನಾಯಕತ್ವ ಇನ್ನೂ ಅಂತಿಮ ಆಯ್ಕೆ ಮಾಡದ ಕಾರಣ ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹುದ್ದೆ ನೇಮಕಕ್ಕೆ ಮತ್ತಷ್ಟು ವಿಳಂಬವಾಗಲಿದೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಕೇಂದ್ರ ನಾಯಕತ್ವ ಇನ್ನೂ ಅಂತಿಮ ಆಯ್ಕೆ ಮಾಡದ ಕಾರಣ ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹುದ್ದೆ ನೇಮಕಕ್ಕೆ ಮತ್ತಷ್ಟು ವಿಳಂಬವಾಗಲಿದೆ.

ಡಿಸೆಂಬರ್ 9 ರಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಮತ್ತು ವಿಧಾನ ಪಕ್ಷದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ನೇಮಕವಾಗಿಲ್ಲ

ಈ ವಾರ ಕಾಂಗ್ರೆಸ್ ಹೈ ಕಮಾಂಡ್ ಅಧ್ಯಕ್ಷ ಸ್ಥಾನಕ್ಕೆ ಯಾರನ್ನಾದರೂ ನೇಮಿಸಿ ಆದೇಶ ಹೊರಡಿಸುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಲಾಗಿತ್ತು.  ಆದರೆ ಕೇಂದ್ರ ನಾಯಕರು ಇನ್ನೂ ನಿರ್ಧಾರಕ್ಕೆ ಬಾರದ ಕಾರಣ ಮತ್ತೆ ಕಾಯುವ ಪರಿಸ್ಥಿತಿ ಎದುರಾಗಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ರಾಜ್ಯ ನಾಯಕರ ಪ್ರತಿಕ್ರಿಯೆ ಪಡೆಯಲು ಡಿಸೆಂಬರ್‌ನಲ್ಲಿ ಮಧುಸೂದನ್ ಮಿಸ್ತ್ರಿ ಮತ್ತು ಭಕ್ತ ಚರಣ್ ದಾಸ್ ಅವರನ್ನು ಕಳುಹಿಸಿತು. ಆದರೆ ಇದುವರೆಗೂ ಅಭ್ಯರ್ಥಿಯನ್ನು ಪೈನಲ್ ಮಾಡಿಲ್ಲ. ಮಾರ್ಚ್ 2 ರಂದು ಬಜೆಟ್ ಸೆಷನ್ ಇದ್ದು ಅಷ್ಟರೊಳಗೆ  ನೇಮಕ ಮಾಡಬಹುದೆಂದು ಎಂದು ಹೇಳಲಾಗಿತ್ತು. 

ಕಳೆದ ಡಿಸೆಂಬರ್​ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋತಿತ್ತು. ಪಕ್ಷ ಕೇವಲ ಒಂದು ಸ್ಥಾನ ಗಳಿಸಿದ ಬೆನ್ನಲ್ಲೇ ಸೋಲಿನ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com