ಸರ್ವಶಕ್ತ ಗೃಹ ಸಚಿವ ಅಮಿತ್ ಶಾ ಕಣ್ಮುಚ್ಚಿ ಕುಳಿತಿರುವುದೇ ದೆಹಲಿ ಗಲಭೆಗೆ ಕಾರಣ- ಸಿದ್ದರಾಮಯ್ಯ 

ಸರ್ವ ಶಕ್ತ ಗೃಹ ಸಚಿವ ಅಮಿತ್ ಶಾ ಕಣ್ಮುಚ್ಚಿ ಕೂತಿರುವುದೇ ಗಲಭೆಗೆ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Published: 25th February 2020 04:49 PM  |   Last Updated: 25th February 2020 04:50 PM   |  A+A-


Siddaramaiah_delhi_Voilence1

ಸಿದ್ದರಾಮಯ್ಯ

Posted By : Nagaraja AB
Source : Online Desk

ಬೆಂಗಳೂರು: ಸರ್ವ ಶಕ್ತ ಗೃಹ ಸಚಿವ ಅಮಿತ್ ಶಾ ಕಣ್ಮುಚ್ಚಿ ಕೂತಿರುವುದೇ ಗಲಭೆಗೆ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಏಳುಜೀವಗಳನ್ನು ಬಲಿ ತೆಗೆದುಕೊಂಡ ದೆಹಲಿ ಗಲಭೆ ಅತ್ಯಂತ ಖೇದಕರವಾದರೂ ಅನಿರೀಕ್ಷಿತವೇನಲ್ಲ. ಬಿಜೆಪಿಯ ಸಚಿವರು, ಶಾಸಕರು ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾಗಲೂ ಅಮಿತ್ ಶಾ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.

ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರಚೋದನೆ ನೀಡಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ತಕ್ಷಣ ಬಂಧಿಸಬೇಕು. ಗಲಭೆ ಗ್ರಸ್ತ ಪ್ರದೇಶಕ್ಕೆ ಅವಶ್ಯಕ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿ ಭೀತಿಗ್ರಸ್ತ ಜನರಲ್ಲಿ ವಿಶ್ವಾಸ ತುಂಬಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ


 

Stay up to date on all the latest ರಾಜಕೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp