ರಾಜ್ಯಸಭೆ ಚುನಾವಣೆ ಸಂಬಂಧ ಸಭೆ: ಇಬ್ಬರು ಶಾಸಕರು ಗೈರು, ಆತಂಕದಲ್ಲಿ ಜೆಡಿಎಸ್ ವರಿಷ್ಠರು! 

ರಾಜ್ಯ ಸಭೆಗೆ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಜೆಡಿಎಸ್ ಪ್ಲಾನ್ ಕೈ ಕೊಟ್ಟರೇ ಬಹಳ ಹಿನ್ನಡೆಯಾಗುತ್ತದೆ.  
ದೇವೇಗೌಡ ಮತ್ತು ಕುಮಾರಸ್ವಾಮಿ
ದೇವೇಗೌಡ ಮತ್ತು ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ಜೂನ್ ತಿಂಗಳಿನಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಮುಗಿಯಲಿದ್ದು, ಆ ಸ್ಥಾನಕ್ಕಾಗಿ ಮೂರೂ ಪಕ್ಷಗಳಿಂದ ಲಾಬಿ ತೀವ್ರಗೊಂಡಿದೆ. 

ರಾಜ್ಯ ಸಭೆಗೆ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಜೆಡಿಎಸ್ ಪ್ಲಾನ್ ಕೈ ಕೊಟ್ಟರೇ ಬಹಳ ಹಿನ್ನಡೆಯಾಗುತ್ತದೆ.  

ಶಾಸಕರಾದ ಜಿ.ಟಿ ದೇವೇಗೌಡ ಜೆಡಿಎಸ್ ಸಭೆಗೆ ಗೈರಾಗಿದ್ದು ಜೆಡಿಎಸ್ ವರಿಷ್ಠರಲ್ಲಿ ಆತಂಕ ಮೂಡಿಸಿದೆ.  ಜೆಡಿಎಸ್ ಪಕ್ಷದಲ್ಲಿ ಒಟ್ಟು 34 ಶಾಸಕರಿದ್ದು, ಇಬ್ಬರ ಗೈರು ಆತಂಕ ತರಿಸಿದೆ.

ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಲು 45ರಿಂದ 46 ಶಾಸಕರ ಅಗತ್ಯವಿದೆ,  ಹೀಗಾಗಿ ತನ್ನ 34 ಶಾಸಕರ ಜೊತೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಹಾಯ ತೆಗೆದುಕೊಳ್ಳಲು ನಿರ್ದರಿಸಿದೆ.

ಜೆಡಿಎಸ್‌ ಪಕ್ಷಕ್ಕೆ ಸಂಖ್ಯೆ ಕೊರತೆ ಇರುವುದರಿಂದ ಚುನಾವಣೆಯಿಂದ ದೂರ ಉಳಿಯುವ ನಿರ್ಧಾರ ಮಾಡಿತ್ತು. ಕಾಂಗ್ರೆಸ್ ಸಹ ಚುನಾವಣೆಯಿಂದ ದೂರ ಉಳಿದಿತ್ತು. ಆದರೆ ಎಂಎಲ್ ಸಿ ಚುನಾವಣೆ ವೇಳೆ ಬಿಜೆಪಿಯ ಒಕ್ಕಲಿಗ ನಾಯಕರಾದ ಆರ್ ಅಶೋಕ್ ಮತ್ತು ಸಿ.ಟಿ ರವಿ ಜೊತೆ ಸೇರಿ ಬಹಿರಂಗವಾಗಿ ಜಿಟಿ ದೇವೇಗೌಡ ಮತ್ತು ಗುಬ್ಬಿ ಶ್ರೀನಿವಾಸ್ ಕಾಣಿಸಿಕೊಂಡಿದ್ದರು.

ಅಧಿವೇಶನ ಸಂದರ್ಭದಲ್ಲಿ ನಡೆದ ಜೆಡಿಎಲ್ ಪಿ ಸಭೆಗೂ ಇಬ್ಬರು ಗೈರಾಗಿದ್ದರು. ಇದು ಪಕ್ಷಕ್ಕೆ ದೊಡ್ಡ ತಲೆ ನೋವಾಗಿದೆ. ಇಬ್ಬರ ನಡುವೆ ಒಡಕು ಉಂಟಾಗಿದೆ, ಅದು ಸಾರ್ವಜನಿಕವಾಗಿ ಬಹಿರಂಗವಾಗುವ  ಮೊದಲೇ  ಸರಿಯಾದ ನಿರ್ಧಾರ ಕೈಗೊಳ್ಳುವಂತೆ ಪಕ್ಷದ ನಾಯಕರು ತಿಳಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com