2009-2019 ದಶಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏಳು-ಬೀಳು: ಒಂದು ನೋಟ

ರಾಜಕೀಯವಾಗಿ, ಕರ್ನಾಟಕವು ಕಳೆದ 10 ವರ್ಷಗಳಲ್ಲಿ ಅನೇಕ ಗಮನಾರ್ಹ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದರೂ,  ಈ  ದಶಕ ಲಿಂಗಾಯತ ಸಮುದಾಯದ  ಪ್ರಬಲ ವ್ಯಕ್ತಿ ಬಿ ಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗುವ ಅವಕಾಶ ತಂದು ಕೊಟ್ಟಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜಕೀಯವಾಗಿ, ಕರ್ನಾಟಕವು ಕಳೆದ 10 ವರ್ಷಗಳಲ್ಲಿ ಅನೇಕ ಗಮನಾರ್ಹ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದರೂ,  ಈ  ದಶಕ ಲಿಂಗಾಯತ ಸಮುದಾಯದ  ಪ್ರಬಲ ವ್ಯಕ್ತಿ ಬಿ ಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗುವ ಅವಕಾಶ ತಂದು ಕೊಟ್ಟಿದೆ.

2010 ರಿಂದ 2019 ರ ವರೆಗೆ ಅಂದರೆ ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯಿಸಲಾಗಿತ್ತು.  ಅದಾದ ನಂತರ ಅವರು ಪಕ್ಷ ತೊರೆದರು ಮತ್ತೆ 2013 ರ ಚುನಾವಣೆ ವೇಳೆಗೆ ಬಿಜೆಪಿ ಸೇರಿದರು.

ರಾಜಕೀಯ ಪಂಡಿತರು ಏನಾದರು ಅವರ ಬಗ್ಗೆ ಬರೆಯಬೇಕು ಎಂದು ನಿರ್ಧರಿಸಿದರೇ, ಯಡಿಯೂರಪ್ಪ ಕೇವಲ ಫೀನಿಕ್ಸ್ ನಂತೆ ಎದ್ದು ಬಂದಿದ್ದು ಮಾತ್ರವಲ್ಲ, ಫಕ್ಷವನ್ನು ಅವರು ಮತ್ತೆ ಕಟ್ಟಿ ಅದನ್ನು ಬೆಳೆಸಿದ್ದು ಹಾಗೂ ಮತ್ತೆ ಸಿಎಂ ಆಗಿದ್ದು, ಇದೆಲ್ಲಾ ನಡೆದದ್ದು ಈ 10 ವರ್ಷಗಳ ಅವಧಿಯಲ್ಲಿಯೇ ಎಂಬುದು ವಿಶೇಷ.

30 ವರ್ಷದ ನಂತರ ಸಿಎಂ ಒಬ್ಬರು 5  ವರ್ಷಗಳ ಕಾಲ ಸಂಪೂರ್ಣವಾಗಿ ರಾಜ್ಯದ ಆಡಳಿತ ನಡೆಸಿದ ಕೀರ್ತೀ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ,  ಇದಕ್ಕೂ ಮೊದಲು ದೇವರಾಜ ಅರಸು ಮಾತ್ರ 5 ವರ್ಷ ಪೂರ್ಣ ಪ್ರಮಾಣದ ಆಡಳಿತ ನೀಡಿದ್ದರು.

ಎಸ್ ಎಂ ಕೃಷ್ಣ ಅವರಿಗೂ 5 ವರ್ಷ ಕಾಲ ಸಿಎಂ ಆಗಿರಲು ಅವಕಾಶವಿತ್ತು, ಆದರೆ  ಅವರು ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದರು, ಅದಾದ ನಂತರ ಅದಕ್ಕಾಗಿ ಅವರು ಪಶ್ಚಾತ್ತಾಪ ಪಟ್ಟಿದ್ದರು.

 2013 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುತದದೊಂದಿಗೆ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಯ್ಯ ಸಿಎಂ ಆಗಿದ್ದರು. 2018 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಗದ ಕಾರಣ ಜೆಡಿಎಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.  ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು.

ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳ ಸೋಲನುಭವಿಸಿದರು. ನಿಖಿಲ್ ಮಂಡ್ಯ ದಲ್ಲಿ ಸೋತರು, 18 ತಿಂಗಳು ಕಾಲ ಆಡಳಿತ ನಡೆಸಿದ ನಂತರ ಕುಮಾರ ಸ್ವಾಮಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com