ಡಾ. ರಾಜ್ ಬಿಟ್ಟರೆ ಅಣ್ಣ ಎಂದಿದ್ದು ಕುಮಾರಸ್ವಾಮಿಗೆ ಮಾತ್ರ, ಎಚ್ ಡಿಕೆಗೆ ಯಾಕೆ ವೈರಾಗ್ಯ?

ಇಡೀ ರಾಜ್ಯದ ಜನತೆ ಪ್ರೀತಿಯಿಂದ ಅಣ್ಣ ಎಂದು ಕರೆದ ನಾಯಕರು ಎಂದರೆ ಒಬ್ಬರು ಡಾ. ರಾಜ್​​ ಕುಮಾರ್,​ ಮತ್ತೊಬ್ಬರು ಜೆಡಿಎಸ್​ ನಾಯಕ ಎಚ್​. ಡಿ ಕುಮಾರಸ್ವಾಮಿ ಇವರಿಬ್ಬರನ್ನೇ. ರಾಜ್ಯದ ಜನರು ಅಷ್ಟು ಪ್ರೀತಿಯನ್ನು ನೀಡಿರುವಾಗ ಕುಮಾರಸ್ವಾಮಿಯವರು ವೈರಾಗ್ಯದ ಮಾತನಾಡುವುದು ಉಚಿತವಲ್ಲ
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಮೈಸೂರು: ಇಡೀ ರಾಜ್ಯದ ಜನತೆ ಪ್ರೀತಿಯಿಂದ ಅಣ್ಣ ಎಂದು ಕರೆದ ನಾಯಕರು ಎಂದರೆ ಒಬ್ಬರು ಡಾ. ರಾಜ್​​ ಕುಮಾರ್,​ ಮತ್ತೊಬ್ಬರು ಜೆಡಿಎಸ್​ ನಾಯಕ ಎಚ್​. ಡಿ ಕುಮಾರಸ್ವಾಮಿ ಇವರಿಬ್ಬರನ್ನೇ. ರಾಜ್ಯದ ಜನರು ಅಷ್ಟು ಪ್ರೀತಿಯನ್ನು ನೀಡಿರುವಾಗ ಕುಮಾರಸ್ವಾಮಿಯವರು ವೈರಾಗ್ಯದ ಮಾತನಾಡುವುದು ಉಚಿತವಲ್ಲ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

ಕುಮಾರಸ್ವಾಮಿ  ಅವರ ರಾಜಕೀಯ ನಿವೃತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ,  ಕುಮಾರಸ್ವಾಮಿಯವರನ್ನು ಇಡೀ ರಾಜ್ಯವೇ ಕುಮಾರಣ್ಣ ಎಂದಿದೆ. ಡಾ.ರಾಜ್ ಬಿಟ್ಟರೆ ಅಣ್ಣ ಎಂದಿದ್ದು ಕುಮಾರಸ್ವಾಮಿಗೆ ಮಾತ್ರ. ಕುಮಾರಸ್ವಾಮಿಗೆ ಯಾಕೆ ವೈರಾಗ್ಯ? ಎಂದು ಪ್ರಶ್ನಿಸಿದರು.

ಎಚ್ಡಿಕೆ ಇನ್ನೊಮ್ಮೆ ಸಿಎಂ ಆಗಬಹುದು. ಮತ್ತೆ ಫೀನಿಕ್ಸ್​ನಂತೆ ಎದ್ದುಬರಬಹುದು. ಪಾಪ ರೇವಣ್ಣ ಕೂಡ ಡಿಸಿಎಂ ಆಗಲಿ. ಮೊದಲ ಬಾರಿ ಶಾಸಕರಾದಾಗಲೇ ಕುಮಾರಸ್ವಾಮಿ  ಸಿಎಂ ಆದರು. 

ಆದರೆ, ಪಾಪ ನಮ್ಮ ರೇವಣ್ಣ ಮಾತ್ರ ಡಿಸಿಎಂ ಆಗೋ ಆಸೆ ಈಡೇರಿಲ್ಲ. ರೇವಣ್ಣ ಡಿಸಿಎಂ ಆಗಲಿ ಅನ್ನೋದು ನನ್ನ ಆಸೆ. ಹಾಗಾಗಿ ಕುಮಾರಸ್ವಾಮಿ ಅವರಿಗೆ ವೈರಾಗ್ಯ, ರಾಜಕೀಯ ನಿವೃತ್ತಿಯ ಮಾತು ಬೇಡ ಎಂದು ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com