ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ರಾಜ್ಯಸಭೆಗೆ...? ಮಲ್ಲಿಕಾರ್ಜುನ ಖರ್ಗೆ ಸ್ಥಿತಿಯೇನು!

ತಾವು ರಾಜ್ಯಸಭೆಗೆ ತೆರಳಬೇಕೋ?. ಬೇಡವೋ? ಎಂಬುದು ಪಕ್ಷದ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹೆಚ್ ಡಿ ದೇವೇಗೌಡ-ಮಲ್ಲಿಕಾರ್ಜುನ್ ಖರ್ಗೆ
ಹೆಚ್ ಡಿ ದೇವೇಗೌಡ-ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು: ತಾವು ರಾಜ್ಯಸಭೆಗೆ ತೆರಳಬೇಕೋ?. ಬೇಡವೋ? ಎಂಬುದು ಪಕ್ಷದ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜ್ಯಸಭಾ ಸದಸ್ಯರನ್ನಾಗಿಸಲು ಕಾಂಗ್ರೆಸ್ ಪಕ್ಷ ಯೋಚಿಸುತ್ತಿದೆ ಎಂದು ಹಬ್ಬಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್  ಹೈಕಮಾಂಡ್ ಕೈಗೊಳ್ಳುವ ನಿರ್ಧಾರದ ಮೇಲೆ ಇದು ಅವಲಂಭಿಸಿದೆ. ನಾನು ಎಂದೂ ಯಾವುದೇ ಸ್ಥಾನಮಾನ  ಕೇಳಿಲ್ಲ. ನಾನೆಂದಿಗೂ ಪಕ್ಷದ ನಿಷ್ಠಾವಂತ ಸಿಪಾಯಿ ಎಂದು ಖರ್ಗೆ ಮಂಗಳವಾರ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ  ಪೌರತ್ವ ನೋಂದಣಿ ಮೂಲಕ ದೇಶದಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. 

ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಕುರಿತಂತೆ ಪ್ರತಿಕ್ರಿಯಿಸಿದ ಖರ್ಗೆ, ಎಬಿವಿಪಿ ಕಾರ್ಯಕರ್ತರು ಭಯೋತ್ಪಾದನೆಯಲ್ಲಿ ನಿರತರಾಗಿದ್ದಾರೆ. ಅವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ, ಪೊಲೀಸರು  ಹಿಂಸೆಯನ್ನು ಬೆಂಬಲಿಸುತ್ತಿದ್ದಾರೆ  ಎಂದರ್ಥ ಎಂದರು. 

ಈ ನಡುವೆ  ಜೆಡಿಎಸ್, ಮಾಜಿ ಪ್ರಧಾನಿ  ಪಕ್ಷದ ಪರಮೋಚ್ಛ ನಾಯಕ ಹೆಚ್.ಡಿ. ದೇವೇಗೌಡರನ್ನು ರಾಜ್ಯ ಸಭೆಗೆ  ಕಳುಹಿಸುವ ಸಾಧ್ಯತೆಯಿದೆ. 

ಕಾಂಗ್ರೆಸ್ಸಿನ ಬಿಕೆ ಹರಿಪ್ರಸಾದ್, ರಾಜೀವ್ ಗೌಡ, ಬಿಜೆಪಿಯ ಪ್ರಭಾಕರ ಕೋರೆ  ಹಾಗೂ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರ ರಾಜ್ಯಸಭಾ ಅವಧಿ ಜೂನ್ ಮುಗಿಯಲಿದೆ. ಈ ಎಲ್ಲ ನಾಲ್ವರನ್ನು ರಾಜ್ಯ ವಿಧಾನಸಭೆಯಿಂದ 2014ರ ಜೂನ್ ನಲ್ಲಿ ಅವಿರೋಧವಾಗಿ ಚುನಾಯಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com