ವೇದಿಕೆಯಲ್ಲೇ ಸಿಎಂಗೆ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟ ಸ್ವಾಮೀಜಿ, ಆವೇಶದಲ್ಲಿ ಬಿಎಸ್ವೈ ನಾನೇ ರಾಜಿನಾಮೆ ಕೊಡ್ಲಾ ಅಂದಿದ್ದೇಕೆ?

ವೇದಿಕೆಯಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಮ್ಮ ಸಮುದಾಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ನಮ್ಮ ಸಮುದಾಯ ಕೆಂಗಣ್ಣಿಗೆ ಗುರಿಯಾಗುತ್ತೀರಾ ಎಂದು ಹೇಳಿದ ಸ್ವಾಮೀಜಿ ವಿರುದ್ಧ ಕೆರಳಿದ ಬಿಎಸ್ವೈ ಏನು ನಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಸ್ವಾಮೀಜಿ-ಬಿಎಸ್ ಯಡಿಯೂರಪ್ಪ
ಸ್ವಾಮೀಜಿ-ಬಿಎಸ್ ಯಡಿಯೂರಪ್ಪ

ಹರಿಹರ(ದಾವಣಗೆರೆ): ವೇದಿಕೆಯಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಮ್ಮ ಸಮುದಾಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ನಮ್ಮ ಸಮುದಾಯ ಕೆಂಗಣ್ಣಿಗೆ ಗುರಿಯಾಗುತ್ತೀರಾ ಎಂದು ಹೇಳಿದ ಸ್ವಾಮೀಜಿ ವಿರುದ್ಧ ಕೆರಳಿದ ಬಿಎಸ್ವೈ ಏನು ನಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಮೊದಲ ಬಾರಿಗೆ ಹರ ಜಾತ್ರೆ ನಡೆಯುತ್ತಿದ್ದು ಈ ವೇಳೆ ವೇದಿಕೆ ಮೇಲೆ ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರು ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದರೆ ಪಂಚಮಸಾಲಿ ಸಮುದಾಯ ನಿಮ್ಮ ಕೈ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದರು. ಇದರಿಂದ ಕೋಪಗೊಂಡ ಯಡಿಯೂರಪ್ಪ ಕುರ್ಚಿಯಿಂದ ಮೇಲೆದ್ದು ನೀವು ಹೀಗೆಲ್ಲಾ ಮಾತನಾಡಬಾರದು. ನೀವು ಸಲಹೆ ನೀಡಬೇಕೇ ಹೊರತು, ಬೆದರಿಕೆ ಹಾಕಬಾರದು ಎಂದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಿಕಿ ನಡೆಯಿತು.

ಸ್ವಾಮೀಜಿಗಳು ಬೆದರಿಕೆ ಹಾಕಬಾರದು, ಸಲಹೆಯನ್ನು ಮಾತ್ರ ನೀಡಬೇಕು. ನನ್ನ ಪರಿಸ್ಥಿತಿ ನೀವು ಅರ್ಥ ಮಾಡಿಕೊಳ್ಳಬೇಕು. 17 ಜನರ ಶಾಸಕರು ರಾಜಿನಾಮೆ ನೀಡಿದ್ದರಿಂದ ಇಂದು ನಾನು ಮುಖ್ಯಮಂತ್ರಿಯಾಗಿದ್ದೇನೆ. ಅವರಿಗೂ ನಾನು ಸಚಿವ ಸ್ಥಾನ ನೀಡಬೇಕು ಎಂದು ಹೇಳಿ ಸುಮ್ಮನಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com