ವಚನಾನಂದ ಶ್ರೀ ಹೇಳಿಕೆ ಕುರಿತು ಚರ್ಚೆ ಬೇಡ: ವಿವಾದಕ್ಕೆ ಅಂತ್ಯ ಹಾಡಿದ ಸಿಎಂ ಯಡಿಯೂರಪ್ಪ

ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಚರ್ಚೆ ಅನಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

Published: 17th January 2020 11:52 AM  |   Last Updated: 17th January 2020 11:52 AM   |  A+A-


Yediyurappa

ಬಿ.ಎಸ್.ಯಡಿಯೂರಪ್ಪ

Posted By : Manjula VN
Source : The New Indian Express

ಬೆಂಗಳೂರು: ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಚರ್ಚೆ ಅನಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. 

ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು, ಸರ್ಕಾರದ ಮೇಲೆ ವಿವಿಧ ಸಮಾಜಗಳ ಒತ್ತಡ ನಿರಂತರವಾಗಿ ಇರುತ್ತದೆ. ವಚನಾನಂದ ಸ್ವಾಮೀಜಿಗಳ ಹೇಳಿಕೆ ಸಹಜ ಪ್ರಕ್ರಿಯೆ ಎಂದು ಅವರು ತಿಳಿಸಿದ್ದಾರೆ. 

ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ನನ್ನ ಜವಾಬ್ದಾರಿ. ಎಲ್ಲಾ ಸ್ವಾಮೀಜಿಗಳು, ಸಾಧುಗಳು, ಸಂತರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ ಮತ್ತು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನನ್ನ ಮೇಲೆ ಇದ್ದ ಸಲುಗೆ ಮತ್ತು ಪ್ರೀತಿಯಿಂದ ಇಂತಹ ಪ್ರಕ್ರಿಯಗಳು ಬರುವುದು ಸಹಜ. ಎಲ್ಲರೂ ನಮ್ಮವರೇ. ಬೈದವರೆನ್ನ ಬಂಧುಗಳು ಎಂಬ ಬಸವಣ್ಣನವರ ಉಕ್ತಿಯಲ್ಲಿ ನಂಬಿಕೆ ಇಟ್ಟವನು ನಾನು. 

ಅಂದು ನಾನು ಆಡಿದ ಮಾತುಗಳಿಂದ ಯಾರಿಗೂದರೂ ಬೇಸರವಾಗಿದ್ದರೆ ಕ್ಷಮೆ ಇರಲಿ. ನಾಡಿನ ಶರಣರು, ಸಂತರು, ಸ್ವಾಮೀಜಿಗಳು ಹಾಗೂ ಮಾರ್ಗದರ್ಶಕರ ಆಶೀರ್ವಾದ ಸದಾ ನನ್ನ ಮೇಲೆ ಇರುತ್ತದೆ ಎಂಬುದಾಗಿ ಭಾವಿಸಿದ್ದೇನೆಂದು ಯಡಿಯೂರಪ್ಪ ಅವರು ತಿಳಿಸಿದ್ದಾರೆ. 

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp