ಎಸ್ ಡಿಪಿಐ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದೇಕೆ?ಚಕ್ರವರ್ತಿ ಸೂಲಿಬೆಲೆ ಪ್ರಶ್ನೆ 

ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಯಾವ ಆಧಾರದ ಮೇಲೆ  ಸಿದ್ದರಾಮಯ್ಯ ಸರ್ಕಾರ ಹಿಂಪಡೆದಿತ್ತು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ  ಸೂಲಿಬೆಲೆ ಕಟುವಾಗಿ ಪ್ರಶ್ನಿಸಿದ್ದಾರೆ

Published: 17th January 2020 08:14 PM  |   Last Updated: 17th January 2020 08:14 PM   |  A+A-


SulibeleSiddaramaiah1

ಚಕ್ರವರ್ತಿ ಸೂಲಿಬೆಲೆ, ಸಿದ್ದರಾಮಯ್ಯ

Posted By : Nagaraja AB
Source : UNI

ಬೆಂಗಳೂರು: ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಯಾವ ಆಧಾರದ ಮೇಲೆ  ಸಿದ್ದರಾಮಯ್ಯ ಸರ್ಕಾರ ಹಿಂಪಡೆದಿತ್ತು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ  ಸೂಲಿಬೆಲೆ ಕಟುವಾಗಿ ಪ್ರಶ್ನಿಸಿದ್ದಾರೆ

ಯುಎನ್ಐ ಕನ್ನಡ ಸುದ್ದಿಸಂಸ್ಥೆ ಜೊತೆ, ಡಿ.22ರಂದು  ಬೆಂಗಳೂರಿನ ಟೌನ್ ಹಾಲ್ ಸಮೀಪ ಸಿಎಎ ಪರ ಸಭೆಯಲ್ಲಿ  ತಮ್ಮ ಹತ್ಯೆಗೆ ಸಂಚುರೂಪಿಸಿ  ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್‌ನನ್ನು ಕೊಲ್ಲಲೆತ್ನಿಸಿದ್ದ ಎಸ್‌ಡಿಪಿಐ‌‌ನ  ಕಾರ್ಯಕರ್ತರ ಬಂಧನ ವಿಚಾರವಾಗಿ ಸೂಲಿಬೆಲೆ ಪ್ರತಿಕ್ರಿಯಿಸಿದರು

ಡಿ.22ರಂದು  ನಡೆದ ಸಿಎಎ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದಾಗ ನನ್ನ ಎದೆಯ ಮೇಲೆ ಕಲ್ಲೊಂದು  ಬಿದ್ದಿತ್ತು. ಆದರೆ ಕಾರ್ಯಕ್ರಮಕ್ಕೆ ಧಕ್ಕೆಯಾಗಬಾರದು ಎಂದು ತಾವು ಅದನ್ನು ದೊಡ್ಡದು  ಮಾಡಲಿಲ್ಲ. ಆದರೆ ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಲ್ಲಿ ದೂರಿದ್ದಾಗ  ತನಿಖೆ ಕೈಗೊಳ್ಳುವುದಾಗಿ ಹೇಳಿದ್ದರು.

 ತನಿಖೆ ಯಶಸ್ವಿಯಾಗಿ ಎಸ್‌ಡಿಪಿಐ ಕಾರ್ಯಕರ್ತರ  ಬಂಧನವಾಗಿದ್ದು, ಸ್ಫೋಟಕ ಸಂಗತಿಗಳನ್ನು ಹೇಳಿದ್ದಾರೆ. ನನ್ನ ಮತ್ತು ಸಂಸದ ತೇಜಸ್ವಿ  ಸೂರ್ಯರನ್ನು ಗುರಿಯಾಗಿಸಿಕೊಂಡಿದ್ದರು. ಕೂದಲೆಳೆಯಿಂದ ಪಾರಾಗಿದ್ದೀರ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ ಎಂದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp