ಕೆಪಿಸಿಸಿಗೆ ಕಾರ್ಯಾಧ್ಯಕ್ಷರ ನೇಮಕ ಮಾಡುವಂತೆ ಹೈಕಮಾಂಡ್ ಮುಂದೆ ಮನವಿ: ಎಂ.ಬಿ.ಪಾಟೀಲ್
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇಂದು ಅಥವಾ ನಾಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನಾಯಕನನ್ನ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದರು.
Published: 18th January 2020 08:33 AM | Last Updated: 18th January 2020 08:33 AM | A+A A-

ಎಂ.ಬಿ ಪಾಟೀಲ್
ಬೆಂಗಳೂರು: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇಂದು ಅಥವಾ ನಾಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನಾಯಕನನ್ನ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದರು.
ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷ ಯಾವ ತೀರ್ಮಾನ ತೆಗೆದು ಕೊಳ್ಳುತ್ತದೆ ಅದನ್ನ ನಾವು ಪಾಲಿಸಬೇಕಾಗುತ್ತದೆ.
ವೈಯಕ್ತಿಕ ನನ್ನ ಅಭಿಪ್ರಾಯ ಬಹಳ ಇದೆ. ಆದರೆ, ಪಕ್ಷ ಅವರದೇ ಒಂದು ತೀರ್ಮಾನ ಇರುತ್ತದೆ.ಎಲ್ಲದಕ್ಕೂ ಕಾದು ನೋಡೋಣ. ಮುಂಚೆಯೇ ಏನೂ ಹೇಳಲು ಆಗುವುದಿಲ್ಲ ಎಂದರು.
ನನ್ನನ್ನು ಅಧ್ಯಕ್ಷ ಮಾಡಬೇಕೆಂದು ನಾನ್ಯಾರಿಗೂ ಭೇಟಿ ಮಾಡಿ ಮನವಿ ಮಾಡಿಲ್ಲ. ಆದರೆ ಯಾರು ಸೂಕ್ತ ಎನ್ನುವ ಪಟ್ಟಿಯಲ್ಲಿ ನನ್ನ ಹೆಸರೂ ಸೂಚಿಸಿದ್ದಾರೆ. ಅದನ್ನೆಲ್ಲ ಹೈಕಮಾಂಡ್ ಇಂದು ಅಥವಾ ನಾಳೆ ಅಂತಿಮಗೊಳಿಸಬಹುದು ಎಂದರು.
ಕಾರ್ಯಾಧ್ಯಕ್ಷ ನೇಮಕದ ಬೇಡಿಕೆಯ ಬಗ್ಗೆ ಸಮರ್ಥನೆ ಮಾಡಿಕೊಂಡ ಅವರು, ಕಾರ್ಯಾಧ್ಯಕ್ಷ ನೇಮಕ ಮಾಡುವುದರಿಂದ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ಅಧ್ಯಕ್ಷರೊಬ್ಬರೇ ಎಲ್ಲ ಕಡೆಯೂ ಓಡಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಕಾರ್ಯಾಧ್ಯಕ್ಷ ನೇಮಕ ಮಾಡುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.