ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಜೆಡಿಎಸ್ ನಿಂದ ಅಲ್ಪಸಂಖ್ಯಾತ ಅಭ್ಯರ್ಥಿ

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಶನಿವಾರ ನಡೆಯಲಿದೆ.  ಈ ಬಾರಿ ಮೇಯರ್ ಸ್ಥಾನ ಎಸ್ಸಿ ಸಾಮಾನ್ಯಗೆ ಮೀಸಲಿಡಲಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಶನಿವಾರ ನಡೆಯಲಿದೆ.  ಈ ಬಾರಿ ಮೇಯರ್ ಸ್ಥಾನ ಎಸ್ಸಿ ಸಾಮಾನ್ಯಗೆ ಮೀಸಲಿಡಲಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.  

ಈಗಾಗಲೇ ಜೆಡಿಎಸ್ ನಾಯಕರು ತಮ್ಮ ಪಕ್ಷದ ಕಾರ್ಪೋರೇಟರ್ ಗಳನ್ನು ನಗರದ ಹೊರವಲಯದ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ.

ಜೆಡಿಎಸ್​-ಕಾಂಗ್ರೆಸ್​​ ಮೈತ್ರಿಯಲ್ಲಿ ಮೇಯರ್​ ಆಯ್ಕೆಗೆ ನಿರ್ಧಾರ ಮಾಡಲಾಗಿದೆ. ಜೆಡಿಎಸ್​ ಮಹಿಳಾ ಅಭ್ಯರ್ಥಿ ತಸ್ನೀಮ್ ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ತಸ್ನೀಮ್  ವಾರ್ಡ್ ನಂ 26ರ ಸದಸ್ಯೆಯಾಗಿದ್ದಾರೆ. ಉಪಮೇಯರ್ ಆಗಿ ಕಾಂಗ್ರೆಸ್‌ನ ವಾರ್ಡ್ ನಂ 38ರ ಶ್ರೀಧರ್ ಸಿ. ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 21 ಸದಸ್ಯ ಬಲ ಹೊಂದಿದ್ದರೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹಾಗಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. 

ಇನ್ನೂ ಮೈಸೂರು ಮಹಾನಗರ ಪಾಲಿಕೆ  ಮೇಯರ್ ಚುನಾವಣೆಗೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ  ತಟಸ್ಥರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com