ನಗರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಭೇಟಿ: ರಾಜಕೀಯದಿಂದ ದೂರ ಉಳಿದ ಅಮಿತ್ ಶಾ

ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯದಿಂದ ದೂರ ಉಳಿದಿದ್ದರು. 
ನಗರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಭೇಟಿ: ರಾಜಕೀಯದಿಂದ ದೂರ ಉಳಿದ ಅಮಿತ್ ಶಾ
ನಗರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಭೇಟಿ: ರಾಜಕೀಯದಿಂದ ದೂರ ಉಳಿದ ಅಮಿತ್ ಶಾ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯದಿಂದ ದೂರ ಉಳಿದಿದ್ದರು. 

ಪೌರತ್ವ ಕಾಯ್ದೆ ಬಗ್ಗೆ ಪಕ್ಷದ ವತಿಯಿಂದ ರಾಷ್ಟ್ರಾದ್ಯಂತ ಜನಜಾಗೃತಿ ಹಮ್ಮಿಕೊಳ್ಳುವ ಬಗ್ಗೆ ಸಂಕಲ್ಪ ಮಾಡಿದ ಬಳಿಕ ರಾಜ್ಯದಲ್ಲಿ ನಡೆದ ಮೊದಲ ದೊಡ್ಡಮಟ್ಟದ ಸಮಾವೇಶದಲ್ಲಿ ನೆರೆದ ಸಾವಿರಾರು ಜನರ ಮುಂದೆ ಸಿಎಎ ಬಗ್ಗೆ ವಿರೋಧ ಪಕ್ಷಗಳು ಎತ್ತಿದ್ದ ಪ್ರಶ್ನೆಗಳಿಗೆಲ್ಲ ಬಿಜೆಪಿ ಅಧ್ಯಕ್ಷ ಅಮಿತ್ ಸಾ ತಮ್ಮ ಪ್ರಖರ ಭಾಷಣದ ಮೂಲಕ ಉತ್ತರ ನೀಡಿದರು. 

ಶನಿವಾರ ಸಂಜೆ ನಗರದ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾಂರಭವನ್ನು ಉದ್ಘಾಟಿಸಿ ಅಮಿತ್ ಶಾ ಅವರು ಮಾತನಾಡಿದರು. ಈ ವೇಳೆ ರಾಜಕೀಯ ಭಾಷಣದಿಂದ ದೂರ ಉಳಿದಿರುವುದು ಕಂಡು ಬಂದಿತ್ತು. 

ಕೇವಲ ಪೌರತ್ವ ಕಾಯ್ದೆ ಕುರಿತ ವಿವಾದದ ಬಗ್ಗೆ ಮಾತನಾಡಿದ ಅಮಿತ್ ಶಾ, ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡದೆ ಮೌನ ತಾಳಿಸಿದ್ದರು. 

ಹಿಂದೂ ಧರ್ಮ ಅಪಾಯದಲ್ಲಿದ್ದಾಗ ಆದಿ ಶಂಕರಾಚಾರ್ಯರು ರಕ್ಷಣೆ  ಮಾಡಿ ಪುನರುಜ್ಜೀವನಗೊಳಿಸಿದ್ದರು. ಇಂದಿಗೂ ಅವರ ಬೋದನೆಗಳು ಪ್ರಸ್ತುತದಲ್ಲಿವೆ. ಕೇವಲ ಒಂದು ಜೀವನದಲ್ಲಿಯೇ ಶಂಕರಾಚಾರ್ಯರು ಸಾಕಷ್ಟು ಕಾರ್ಯವನ್ನು ಮಾಡಿದ್ದರು. ಅತ್ಯಂತ ಶೀಘ್ರಗತಿಯಲ್ಲಿ ಇಹಲೋಕ ತ್ಯಜಿಸಿದ್ದರು. ಆದರೆ, 7 ಬಾರಿ ಕಾಲ್ನಡಿಗೆ ಮೂಲಕ ಇಡೀ ದೇಶವನ್ನು ಸುತ್ತಿದ್ದರು. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದೇಶದ ನಾಲ್ಕು ಕಡೆ ಶಾರದಾ ಪೀಠವನ್ನು ಸ್ಥಾಪಿಸಿದರು. ಅಂದು ಹಿಂದೂ ಧರ್ಮ ಅಪಾಯಕ್ಕೆ ಸಿಲುಕಿಕೊಂಡಿತ್ತು. ಕೇವಲ ಒಬ್ಬ ವ್ಯಕ್ತಿಯಿಂದಾಗಿ ಇಂದು ಹಿಂದು ಧರ್ಮ ಬಲವಾಗಿ ಬೆಳೆದಿದೆ ಎಂದು ತಿಳಿಸಿದ್ದಾರೆ. 

ವಿವೇಕದೀಪಿನಿ ಕಲಿತವರು ತಪ್ಪು ಹಾದಿ ತುಳಿಯಲು ಸಾಧ್ಯವೇ ಇಲ್ಲ. ಅದು ನಮ್ಮ ಸಂಸ್ಕೃತಿಯ ಸೌಂದರ್ಯವಾಗಿದೆ. ಕೇಂದ್ರ ಸರ್ಕಾರದ ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವೇಕಾದೀಪಿನಿಯನ್ನು 24 ಭಾಷೆಗಳಲ್ಲಿ ಅನುವಾದ ಮಾಡುವ ಕೆಲಸ ಮಾಡುತ್ತಿದೆ. ಮತ್ತಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಅನುವಾದ ಕಾರ್ಯಗಳು ನಡೆಯುತ್ತಿವೆ. ಹಲವು ವರ್ಷಗಳ ಬಳಿಕ ಇಡೀ ವಿಶ್ವ ಇದೀಗ ಭಾರತದತ್ತ ನೋಡುತ್ತಿದೆ. ಇದು ಹೆಮ್ಮೆ ಪಡುವಂತಹ ವಿಚಾರ ಎಂದ ಅಮಿತ್ ಶಾ, ಪ್ರಧಾನಿ ಮೋದಿಯವರನ್ನು ಕೊಂಡಾಡಿದ್ದಾರೆ. 

ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಬಿಜೆಪಿ ಈಗಾಗಲೇ ಶಾಲೆಗಳಲ್ಲಿ ವಿವೇಕಾದೀಪಿನಿ ಬೋದನೆ ಮಾಡಲು ಅನುಮತಿ ನೀಡಿದೆ. 2019ರ ಜೂನ್ ತಿಂಗಳಿಂದಲೇ ಹಲವು ಶಾಲೆಗಳಲ್ಲಿ ಇದರ ಬೋದನೆ ಕೂಡ ಆರಂಭವಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com