ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಆಗ್ರಹ ಪ್ರಾಮಾಣಿಕವಾದದ್ದು, ಪರಿಸ್ಥಿತಿ ಉಲ್ಭಣಿಸಲು ಸಿಎಂ ಬಿಡುವುದಿಲ್ಲ: ಸಚಿವ ಶ್ರೀರಾಮುಲು

ಪಂಚಮಸಾಲಿ ಸಮಾಜದ ಹರ ಜಾತ್ರೆಯ ಸಮಾರಂಭದಲ್ಲಿ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ, ಮುರುಗೇಸ ನಿರಾಣಿ ಹಾಗೂ ತಮ್ಮ ಸಮುದಾಯದ ಮೂವರು ಶಾಸಕರಿಗೆ ಮಂತ್ರಿಗಿರಿ ನೀಡಬೇಕೆಂದು ಆಗ್ರಹಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದು ಸಾರ್ವಜನಿಕ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ...
ಶ್ರೀರಾಮುಲು
ಶ್ರೀರಾಮುಲು

ಬೆಂಗಳೂರು: ಪಂಚಮಸಾಲಿ ಸಮಾಜದ ಹರ ಜಾತ್ರೆಯ ಸಮಾರಂಭದಲ್ಲಿ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ, ಮುರುಗೇಸ ನಿರಾಣಿ ಹಾಗೂ ತಮ್ಮ ಸಮುದಾಯದ ಮೂವರು ಶಾಸಕರಿಗೆ ಮಂತ್ರಿಗಿರಿ ನೀಡಬೇಕೆಂದು ಆಗ್ರಹಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದು ಸಾರ್ವಜನಿಕ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಸರ್ಕಾರ ವಾಲ್ಮಿಕಿ ಸಮುದಾಯದ ಶೇ.7.5 ಮೀಸಲಾತಿ ಆಗ್ರಹದ ಕುರಿತು ಚಿಂತನೆ ನಡೆಸುತ್ತಿದೆ. 

ವಿವಾದಗಳ ಕುರಿತಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಆಗ್ರಹ ಪ್ರಾಮಾಣಿಕವಾಗಿದ್ದು, ಮೀಸಲಾತಿ ನೀಡದೇ ಹೋದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಷ್ಟರ ಮಟ್ಟಿಗೆ ಪರಿಸ್ಥಿತಿ ಉಲ್ಭಣಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದರು. 

ಸಮುದಾಯಕ್ಕೆ ಶೇ.7.5 ಮೀಸಲಾತಿ ಬೇಡಿಕೆ ಪರಿಗಣಿಸಿದೇ ಹೋದಲ್ಲಿ ಸಮುದಾಯದ ಮುಖಂಡರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆಂದು ಪ್ರಸನ್ನಾನಂದ ಪುರಿ ಸ್ವಾಮೀಜಿಗಲು ಹೇಳಿದ್ದಾರೆ. ಇದು ನ್ಯಾಯಸಮ್ಮತವೇ ಅಥವಾ ಬೆದರಿಕೆಯೇ? 
ಶ್ರೀಗಳ ಹೇಳಿಕೆ ಬೆದರಿಕೆಯಲ್ಲ. ಸಮುದಾಯದ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತದೆ ಎಂಬುದರ ವಿಶ್ವಾಸ ನನಗಿದೆ. ಪರಿಸ್ಥಿತಿ ಉಲ್ಬಣಗೊಳ್ಳಲು ಮುಖ್ಯಮಂತ್ರಿಗಳು ಬಿಡುವುದೂ ಇಲ್ಲ ಎಂದು ಹೇಳಿದ್ದಾರೆ. 


ಮೀಸಲಾಕಿ ಆಗ್ರಹವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? 
ಸಮುದಾಯದ ಜನರ ಹಿತಾಸಕ್ತಿಗಾಗಿ ಅಗ್ರಹ ಪ್ರಾಮಾಣಿಕವಾದದ್ದು. ಸಮುದಾಯಕ್ಕೆ ಸರ್ಕಾರ ಶೇ.7.5ರಷ್ಟು ಮೀಸಲಾತಿ ನೀಡಲೇಬೇಕು. ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾವು ಇಂತಹ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ. 


ಸಚಿವರಾದ ಬಳಿಕ ಸಾಕಷ್ಟು ಕಾರ್ಯಗಳಲ್ಲಿ ಸಕ್ರಿಯರಾಗಿದ್ದಿರಿ. ಇದೀಗ ಆಸಕ್ತಿ ಕುಂದಿರುವಂತಿದೆ?
ಸರ್ಕಾರಿ ಆಸ್ಪತ್ರೆಗಳನ್ನು ವಾಸ್ತವ್ಯವಾಗಿ ಬಳಕೆ ಮಾಡುತ್ತಿದ್ದೇನೆ. ಇದೀಗ ರಾಜ್ಯ ಬಜೆಟ್ ಕುರಿತ ಕೆಲಸಗಳಿದ್ದು, ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಬಜೆಟ್ ಪೂರ್ಣಗೊಂಡ ಬಳಿಕ ಸರ್ಕಾರ ಆಸ್ಪತ್ರೆಗಳಿಗೆ ಭೇಟಿ ನೀಡುವ ನನ್ನ ಕಾರ್ಯ ಮತ್ತೆ ಮುಂದುವರೆಯಲಿದೆ. 


ಈ ಬಾರಿಯ ಬಜೆಟ್ ನಲ್ಲಿ ನಿಮ್ಮ ಇಲಾಖೆಯ ನಿರೀಕ್ಷೆಗಳೇನು?
ವೈದ್ಯರಿಕೆ ಉತ್ತಮ ವ್ಯವಸ್ಥೆಗಳು, ಹೆಚ್ಚೆಚ್ಚು ತಜ್ಞರು, ಶುಶ್ರೂಕರ ನೇಮಕದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿಯ ಹೊಸ ಯೋಜನೆಯನ್ನೂ ಜಾರಿಗೆ ತರಲಾಗುತ್ತಿದೆ. ಮಹಿಳೆಯರು ಮಕ್ಕಳಿಗೆ ಪಿಂಕ್ ಬಸ್ ಮತ್ತೊಂದು ನಿರೀಕ್ಷೆಯಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ಬಹಿರಂಗಪಡಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸಲು ಬದ್ಧರಾಗಿದ್ದೇವೆ. 


ಉಪಮುಖ್ಯಮಂತ್ರಿ ರೇಸ್ ನಲ್ಲಿ ನೀವಿದ್ದೀರಾ?
ಇದು ನನ್ನ ಇಚ್ಛೆಯಲ್ಲ. ಆದರೆ, ನಮ್ಮ ಸಮುದಾಯದ ಜನರು ಇಚ್ಛಿಸಿದ್ದಾರೆ. ನನ್ನನ್ನು ಉಪ ಮುಖ್ಯಮಂತ್ರಿಯಾಗಿ ಮಾಡುವಂತೆ ಸಾಕಷ್ಟು ಆಗ್ರಹಗಳು ಕೇಳಿ ಬರುತ್ತಿದೆ. ಸ್ವಾಮೀಜಿಗಳೂ ಕೂಡ ಆಗ್ರಹಿಸಿದ್ದಾರೆ. 


ಇದರರ್ಥ ನೀವು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆಯೇ ಇಟ್ಟಿಲ್ಲವೇ? 
ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಆರ್ಹ ವ್ಯಕ್ತಿಯಾಗಿದ್ದೇನೆ. ಉಪಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹಾಗೂ ಅದಕ್ಕೆ ನಾನು ಬದ್ಧನಾಗಿದ್ದೇನೆ. ಹೀಗಾಗಿಯೇ ಸಮುದಾಯದ ಜನರು ಆಗ್ರಹ ಮುಂದಿಟ್ಟಿದ್ದಾರೆ. 


ರಮೇಶ್ ಜಾರಕಿಹೊಳಿಯವರನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆಂದು ನಿಮಗೆನಿಸುತ್ತದೆಯೇ? 
ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತನ್ನು ಕೇಳಿರಬಹುದು. ಪಕ್ಷಕ್ಕಾಗಿ ನೀವು ದುಡಿದರೆ. ಮುಂದೊಂದು ದಿನ ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಪಕ್ಷಕ್ಕಾಗಿ ನಾನು ಶ್ರಮ ಪಟ್ಟಿದ್ದೇನೆ. ಹೀಗಾಗಿ ಈ ಸ್ಥಾನದಲ್ಲಿದ್ದೇನೆಂಬುದನ್ನಷ್ಟೇ ನಾನು ಹೇಳಬಲ್ಲೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com