ಸಿದ್ದರಾಮಯ್ಯ ಭಯದಿಂದಾಗಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಆಯ್ಕೆ ಮಾಡುತ್ತಿಲ್ಲ: ಎಂಟಿಬಿ

ರಾಜ್ಯ ಕಾಂಗ್ರೆಸ್​ ಅಕ್ಷರಶಃ ಮನೆಯೊಂದು ಮೂರು ಬಾಗಿಲಿನಂತಾಗಿದೆ, ಸಿದ್ದರಾಮಯ್ಯ ಅವರ ಮೇಲಿನ ಭಯದಿಂದಾಗಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಸಚಿವ ಎಂಟಿ ಬಿ ನಾಗರಾಜ್ ಹೇಳಿದ್ದಾರೆ.
ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಅಕ್ಷರಶಃ ಮನೆಯೊಂದು ಮೂರು ಬಾಗಿಲಿನಂತಾಗಿದೆ, ಸಿದ್ದರಾಮಯ್ಯ ಅವರ ಮೇಲಿನ ಭಯದಿಂದಾಗಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಸಚಿವ ಎಂಟಿ ಬಿ ನಾಗರಾಜ್ ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿದೆ, ಕೆಪಿಸಿಸಿಗೆ ಈವರೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ ತಲುಪಲು ಇದೇ ಕಾರಣ. ಕಾಂಗ್ರೆಸ್ ​ ಮೂರು ಗುಂಪುಗಳಾಗಿದ್ದು ಈ ಗುಂಪುಗಾರಿಕೆಯೇ ಈ ಸ್ಥಿತಿಗೆ ಕಾರಣ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್​ನಲ್ಲಿ ಮೂರು ಗುಂಪುಗಳಿವೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ್​ ಹೆಸರಿನಲ್ಲಿ ಗುಂಪುಗಳಿವೆ. ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಎಂ.ಬಿ. ಪಾಟೀಲ್ ಪರ ಲಾಬಿ ನಡೆಸುತ್ತಿದ್ದಾರೆ.

ಡಿಕೆಶಿ ಸಹ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ.  ಹರಿಪ್ರಸಾದ್, ಕೆಎಚ್ ಮುನಿಯಪ್ಪ ಅವರದ್ದು ಮತ್ತೊಂದು ಬಣ ಆಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com