ಜೆಪಿ ನಡ್ಡಾ ಪದಗ್ರಹಣ: ಸಿ.ಪಿ ಯೋಗೇಶ್ವರ್ ಗೆ ಆಹ್ವಾನ: ಸಿಗುತ್ತಾ ಪಕ್ಷದಲ್ಲಿ ಸೂಕ್ತ ಸ್ಥಾನಮಾನ!

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಮೂವರು ಡಿಸಿಎಂಗಳು ದೆಹಲಿಯಲ್ಲಿ ನಡೆದ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಮಾಣ ವಚನ ಸಮಾರಂಭಗಲ್ಲಿ ಭಾಗವಹಿಸಿದ್ದರು.

Published: 21st January 2020 10:11 AM  |   Last Updated: 21st January 2020 10:14 AM   |  A+A-


CP Yogeshwar on JP Nadda's guestlist

ಜೆಪಿ ನಡ್ಡಾ ಪದಗ್ರಹಣ ಸಮಾರಂಭ

Posted By : Shilpa D
Source : The New Indian Express

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಮೂವರು ಡಿಸಿಎಂಗಳು ದೆಹಲಿಯಲ್ಲಿ ನಡೆದ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಮಾಣ ವಚನ ಸಮಾರಂಭಗಲ್ಲಿ ಭಾಗವಹಿಸಿದ್ದರು.

ಜೆಪಿ ನಡ್ಡ ಪದಗ್ರಹಣ ಸಮಾರಂಭಕ್ಕೆ ಕರ್ನಾಟಕದಿಂದ ಕೇವಲ 10 ಮಂದಿಗೆ ಆಹ್ವಾನ ನೀಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ರಾಷ್ಟ್ರಾದ್ಯಕ್ಷ ಹುದ್ದೆ ಸ್ವೀಕರಿಸಿದರು.

ರಾಜ್ಯದ 10 ಮಂದಿ ಬಿಜೆಪಿ ನಾಯಕರಿಗೆ ನೀಡಿದ್ದ ಆಹ್ವಾನ ಪಟ್ಟಿಯಲ್ಲಿ ಮಾಜಿ ಸಚಿವರುಗಳಾದ ಅರವಿಂದ ಲಿಂಬಾವಳಿ ಮತ್ತು ಸಿಪಿ ಯೋಗೇಶ್ವರ್ ಅವರ ಹೆಸರಿದ್ದದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಡಿಸಿಎಂಗಳಾದ ಗೋವಿಂದ್ ಕಾರಜೋಳ, ಲಕ್ಷ್ಮಣ ಸವದಿಗೆ ಆಹ್ವಾನ ನೀಡಲಾಗಿತ್ತು.

ರಾಜ್ಯ ಘಟಕದ 14 ಉಪಧ್ಯಾಕ್ಷರ ಪೈಕಿ  ಕೇವಲ ನಿರ್ಮಲ್ ಕುಮಾರ್ ಸುರನಾ ಅವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪೈಕಿ ಅರುಣ್ ಕುಮಾರ ಮತ್ತು ಅರವಿಂದ ಲಿಂಬಾವಳಿ ಅವರನ್ನು ಮಾತ್ರ ಆಹ್ವಾನ ನೀಡಲಾಗಿತ್ತು. ಇದೆಲ್ಲದರ ಮಧ್ಯೆ ಅಚ್ಚರಿ ಎನ್ನುವಂತೆ ಬಿಜೆಪಿ ನಾಯಕ ಒಕ್ಕಲಿಗರ ಪ್ರಭಾವಿ ಸಿಪಿ ಯೋಗೇಶ್ವರ್ ಗೆ ಆಹ್ವಾನ ನೀಡಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು.

ರಾಜ್ಯದಿಂದ ತೆರಳಿದ್ದ 10 ಸದಸ್ಯರ ನಿಯೋಗ ಜೆಪಿ ನಡ್ಡಾ ಅವರ ಜತೆ ಫೋಟೋಗೆ ಪೋಸ್ ನೀಡಿದ್ದಾರೆ. ಇವರ ಜೊತೆಗೆ ಪ್ರವಾಸೋದ್ಯ ಸಚಿವ ಸಿ.ಟಿ ರವಿ ಕೂಡ ಭಾಗವಹಿಸಿದ್ದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp