ಮುಜುಗರದ  ಹೇಳಿಕೆ  ನೀಡದಂತೆ, ಸಚಿವರು, ಶಾಸಕರಿಗೆ  ರಾಜ್ಯ ಬಿಜೆಪಿ ನಿರ್ಬಂಧ ಸಾಧ್ಯತೆ

ಪಕ್ಷದ ಕೆಲ ಶಾಸಕರು, ಸಚಿವರು ನೀಡಿರುವ   ವಿವಾದಾತ್ಮಕ  ಹೇಳಿಕೆಗಳಿಂದ  ತೀವ್ರ ಮುಜುಗರಕ್ಕೊಳಗಾಗಿರುವ  ರಾಜ್ಯ ಬಿಜೆಪಿ  ಅಧ್ಯಕ್ಷ  ನಳಿನ್ ಕುಮಾರ್  ಕಟೀಲ್,   ಶಾಸಕರು, ಸಚಿವರು ಇನ್ನು ಮುಂದೆ ಮುಜುಗರ ತರುವಂತಹ  ಯಾವುದೇ  ಹೇಳಿಕೆ  ನೀಡದಂತೆ  ನಿರ್ಬಂಧ  ವಿಧಿಸಲು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.
ಸೋಮಶೇಖರ ರೆಡ್ಡಿ ಮತ್ತು ರೇಣಕಾಚಾರ್ಯ
ಸೋಮಶೇಖರ ರೆಡ್ಡಿ ಮತ್ತು ರೇಣಕಾಚಾರ್ಯ

ಬೆಂಗಳೂರು:  ಪಕ್ಷದ ಕೆಲ ಶಾಸಕರು, ಸಚಿವರು ನೀಡಿರುವ   ವಿವಾದಾತ್ಮಕ  ಹೇಳಿಕೆಗಳಿಂದ  ತೀವ್ರ ಮುಜುಗರಕ್ಕೊಳಗಾಗಿರುವ   ರಾಜ್ಯ ಬಿಜೆಪಿ  ಅಧ್ಯಕ್ಷ  ನಳಿನ್ ಕುಮಾರ್  ಕಟೀಲ್,   ಶಾಸಕರು, ಸಚಿವರು ಇನ್ನು ಮುಂದೆ ಮುಜುಗರ ತರುವಂತಹ  ಯಾವುದೇ  ಹೇಳಿಕೆ  ನೀಡದಂತೆ  ನಿರ್ಬಂಧ  ವಿಧಿಸಲು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.

ವಿಶೇಷವಾಗಿ  ಮುಸ್ಲಿಮ್  ಸಮುದಾಯ  ಕುರಿತಂತೆ  ಉಪ ಮುಖ್ಯಮಂತ್ರಿ  ಗೋವಿಂದ ಕಾರಜೋಳ, ಶಾಸಕರಾದ   ಸೋಮಶೇಖರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ ಮುಸ್ಲಿಮರು ಹಾಗೂ ಮಸೀದಿ ಕುರಿತಂತೆ ನೀಡಿರುವ  ವಿವಾದಾತ್ಮಕ  ಹೇಳಿಕೆಗಳಿಂದ  ಪಕ್ಷಕ್ಕೆ  ತೀವ್ರ ಮುಜುಗರದ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಸಚಿವರು ಹಾಗೂ ಶಾಸಕರು ತಮ್ಮ ಕೆಲಸಗಳಿಗೆ  ಮಾತ್ರ ಸೀಮಿತಗೊಳ್ಳಬೇಕು,  ಪಕ್ಷದ ಪರವಾಗಿ,  ವಕ್ತಾರರು  ಮಾತ್ರ  ಹೇಳಿಕೆ ನೀಡಬೇಕು  ಎಂಬ ನಿರ್ಬಂಧ ವಿಧಿಸಲು ಮುಂದಾಗಿದ್ದಾರೆ  ಎಂದು ಮೂಲಗಳು ತಿಳಿಸಿವೆ. 

ಬಳ್ಳಾರಿ ನಗರ  ವಿಧಾನಸಭಾ ಕ್ಷೇತ್ರ  ಶಾಸಕ  ಗಾಲಿ ಸೋಮಶೇಖರ  ರೆಡ್ಡಿ,  ಹೊನ್ನಾಳ್ಳಿ ಶಾಸಕ ರೇಣುಕಾಚಾರ್ಯ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ   ಮಸೀದಿ ಹಾಗೂ ಮುಸ್ಲಿಂ ಸಮುದಾಯ ಕುರಿತು ನೀಡಿದ್ದ ಹೇಳಿಕೆಗಳು ಪಕ್ಷದ ವಲಯದಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆಯಂತೆ.

ಅದರಲ್ಲೂ  ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರ ವಿರುದ್ದ  ಭಾರತೀಯ ದಂಢ ಸಂಹಿತೆ  ಸೆಕ್ಷನ್  ೧೫೩ ಎ ಅಡಿ  ಎರಡು  ಸಮುದಾಯಗಳ ನಡುವೆ ವೈಷಮ್ಯ ಪ್ರಚೋಧಿಸಿದ್ದಾರೆ ಎಂದು ದೂರಿ ಬಳ್ಳಾರಿ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.

ರಾಷ್ಟ್ರೀಯ ಹಾಗೂ ರಾಜ್ಯದ ವಿಷಯಗಳಿಗೆ  ಸಂಬಂಧಿಸಿದ ಯಾವುದೇ ವಿಷಯ   ಸಂಬಂಧ  ರಾಜ್ಯದ ಸಚಿವರು, ಶಾಸಕರು ಪಕ್ಷದ ರಾಜ್ಯ ಘಟಕಕ್ಕೆ ಮುಜುಗರ ತರುವ ಹೇಳಿಕೆ ನೀಡಿದಂತೆ,   ಪಕ್ಷದ ಅಧ್ಯಕ್ಷರು  ಈಗಾಗಲೇ   ಆಂತರಿಕವಾಗಿ ಸೂಚನೆ ನೀಡಿ,  ಮಾತನಾಡುವ ಮುನ್ನ  ಪರಿಣಾಮಗಳನ್ನು ಯೋಚಿಸಿ ಮಾತನಾಡುವಂತೆ ತಿಳಿಹೇಳಿದ್ದಾರೆ  ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com