ನಾನು ಪ್ರಾಮಾಣಿಕ ಕಾರ್ಯಕರ್ತ, ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ: ಮುರುಗೇಶ್ ನಿರಾಣಿ

ನಾನು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಯಾವುದೇ ರಾಜಕೀಯ ಬೆಳವಣಿಗೆಗಳಾದರೂ ಪಕ್ಷವನ್ನು ತೊರೆಯುವುದಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಮುರುಗೇಶ್ ನಿರಾಣಿಯವರು ಹೇಳಿದ್ದಾರೆ. 
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಳಗಾವಿ: ನಾನು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಯಾವುದೇ ರಾಜಕೀಯ ಬೆಳವಣಿಗೆಗಳಾದರೂ ಪಕ್ಷವನ್ನು ತೊರೆಯುವುದಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಮುರುಗೇಶ್ ನಿರಾಣಿಯವರು ಹೇಳಿದ್ದಾರೆ. 

ಸಾಕಷ್ಟು ಹಿಂದಿನಿಂದಲೂ ನಾನು ಪಕ್ಷಕ್ಕೆ ಪ್ರಾಮಾಣಿಕ ಕಾರ್ಯಕರ್ತನಾಗಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಿಂದೆ ಪಕ್ಷ ತೊರೆದು ಕರ್ನಾಟಕ ಜನತಾ ಪಕ್ಷವನ್ನು ಕಟ್ಟಿದ್ದರು. ಆಗಲೂ ನಾನು ಪಕ್ಷ ತೊರೆದಿರಲಿಲ್ಲ. ಏನೇ ಆದರೂ ನನಗೆ ಪಕ್ಷ ಮೊದಲು. ಮುಂದಿನ ಚುನಾವಣೆಯಲ್ಲಿ ಪಕ್ಷ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದನ್ನು ನಾನು ನೋಡಬೇಕು ಎಂದು ಹೇಳಿದ್ದಾರೆ. 

ಈ ಹಿಂದೆ ಲಿಂಗಾಯತ ಸ್ವಾಮೀಜಿ ವಚನಾನಂದ ಅವರು ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ಕುರಿತು ಎಚ್ಚರಿಕೆ ನೀಡಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಅಧ್ಯಾಯ ಮುಗಿದಿದೆ. ಈ ಬಗ್ಗೆ ನಾನು ಯಾವುದೇ ಹೇಳಿಕೆಯನ್ನೂ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. 

ವಚನಾನಂದ ಸ್ವಾಮೀಜಿಗಳ ಬೆದರಿಕೆಗೆ ಯಡಿಯೂರಪ್ಪ ಅವರಿಗೆ ಕೋಪ ಬಂದಿರಬಹುದು. ಹೀಗಾಗಿಯೇ ಆ ರೀತಿ ನಡೆದುಕೊಂಡಿದ್ದಾರೆ ಎಂದಿದ್ದಾರೆ. 

ನಿರಾಣಿ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಉಪಚುನಾವಣೆ ಬಳಿಕ ಸಂಪುಟ ಪುನಾರಚನೆ ಯಡಿಯೂರಪ್ಪ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಹಲವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸಚಿವ ಸ್ಥಾನ ಕರಿತು ಇದೀಗ ನಿರಾಣಿಯವರು ಈ ಕುರಿತು ಯಡಿಯೂರಪ್ಪ ಅವರ ಮೇಲೆ ಬೇಸರಗೊಂಡಿದ್ದಾರೆಂದು ಹೇಳಲಾಗುತ್ತಿದ್ದು, ವೇದಿಕೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com