ಟ್ವೀಟ್ ವಿರುದ್ಧ ಪ್ರಕರಣ: ಕೇರಳ ಸರ್ಕಾರಕ್ಕೆ ತಿರುಗೇಟು ನೀಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ

ತಾವು ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿದಂತೆ ಕೇರಳದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಇತ್ತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತೊಂದು ಟ್ವೀಟ್ ಮೂಲಕ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಾವು ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿದಂತೆ ಕೇರಳದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಇತ್ತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತೊಂದು ಟ್ವೀಟ್ ಮೂಲಕ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅನ್ಯಾಯ ಸರಿಪಡಿಸಿ ಎಂದರೆ ಧನಿ ಎತ್ತಿದವರ ವಿರುದ್ಧವೇ ಪ್ರಕರಣ ದಾಖಲಿಸುತ್ತಾರೆ. ಇದು ಕೈಲಾಗದ, ಪಕ್ಷಪಾತಿ ಎಡಪಕ್ಷಗಳ ಸರ್ಕಾರದ ಧೋರಣೆ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ. 'ಚೇರುಕ್ಕುನ್ನುನಲ್ಲಿ ದಲಿತರಿಗೆ ಆದ ಅನ್ಯಾಯ ಸರಿಪಡಿಸಿಲ್ಲ. ಅದರ ಬದಲಿಗೆ ನನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಪೂರ್ವಗ್ರಹ ಪೀಡಿತ ಕೇರಳ ಸರ್ಕಾರದ ಒತ್ತಡ ತಂತ್ರ ಇದು. ಇದರ ವಿರುದ್ಧ ಇಡೀ ಸಮಾಜ ಒಗ್ಗಟ್ಟಾಗಲು ಸಕಲವಾಗಿದೆ ಎಂದು ಶೋಭಾ ಕಿಡಿಕಾರಿದ್ದಾರೆ.

ಅಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದವರಿಗೆ ಉದ್ಯಮ, ಮೂಲ ಸೌಕರ್ಯ, ಉದ್ಯೋಗ ಎಲ್ಲವನ್ನೂ ಬಹಿಷ್ಕರಿಸಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಕೇರಳ ಸಿಪಿಎಂ ಸರ್ಕಾರ ಕುರುಡಾಗಿದೆ. ಆದರೆ ಸತ್ಯ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ಅವರು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com