ರೈತರ ಬ್ಯಾಂಕ್ ಸಬ್ಸಿಡಿ ಸ್ಥಗಿತಗೊಳಿಸಿದ ಕೇಂದ್ರ: ಹರಿಹಾಯ್ದ ಎಚ್.ಡಿ.ಕುಮಾರಸ್ವಾಮಿ

ಕೃಷಿ ಭೂಮಿಯ ಪಹಣಿ ದಾಖಲೆ ಹಾಗೂ ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಇಟ್ಟು ಪಡೆಯುತ್ತಿದ್ದ ಸಾಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ್ದು, ಕೇಂದ್ರದ ನಡೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೃಷಿ ಭೂಮಿಯ ಪಹಣಿ ದಾಖಲೆ ಹಾಗೂ ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಇಟ್ಟು ಪಡೆಯುತ್ತಿದ್ದ ಸಾಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ್ದು, ಕೇಂದ್ರದ ನಡೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ರೈತರ ಬೆಳೆ ಮತ್ತು ಒಡವೆ ಸಾಲಗಳ ಬಡ್ಡಿಗೆ ನೀಡಬೇಕಾದ ಸಬ್ಸಿಡಿಯನ್ನು‌ ನಿಲ್ಲಿಸಿರುವ ಸರ್ಕಾರ ರೈತರನ್ನು ಲೇವಾದೇವಿದಾರರಿಗೆ ಶರಣಾಗುವಂತೆ ಮಾಡಿದೆ. ಇನ್ನೊಂದೆಡೆ ಬ್ಯಾಂಕ್‌ಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನ‌ ಮೂಲಕ‌ ಕೇಂದ್ರ ಸರ್ಕಾರ ಲಪಟಾಯಿಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ‌ಮನ್ನಾ ಬಗ್ಗೆ ಬಿಜೆಪಿ‌ ಅನುದಿನವೂ ಕಿತಾಪತಿ ಮಾಡಿತು‌‌. ಸಾಲಮನ್ನಾ ಆಗಿಲ್ಲ‌ ಎಂದು ಭಾಷಣ ವೀರ ಮೋದಿ‌ ಕೂಡ ಹೇಳಿದ್ದರು. ಆದರೆ ಇಂದು ಕೇಂದ್ರ ಬಿಜೆಪಿ ಸರ್ಕಾರ ರೈತರ ಬೆಳೆ-ಒಡವೆ ಸಾಲದ ಬಡ್ಡಿ‌ ಮೇಲಿನ ಸಬ್ಸಿಡಿಗೆ ಮಣ್ಣು ಹಾಕಿದೆ ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com