ಕಾಂಗ್ರೆಸ್-ಜೆಡಿಎಸ್ ತೊರೆದವರು ದೇವದಾಸಿಯರಂತಾಗಿದ್ದಾರೆ: ಸಿಎಂ ಇಬ್ರಾಹಿಂ

ಕಾಂಗ್ರೆಸ್,ಜೆಡಿಎಸ್ ನಿಂದ ತೊರೆದು ಬಿಜೆಪಿ ಸೇರಿದ 17 ನಾಯಕರದ್ದು ದೇವದಾಸಿ ಅವರ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರು ಲೇವಡಿ ಮಾಡಿದ್ದಾರೆ.
ಇಬ್ರಾಹಿಂ
ಇಬ್ರಾಹಿಂ

ಹಾವೇರಿ: ಕಾಂಗ್ರೆಸ್,ಜೆಡಿಎಸ್ ನಿಂದ ತೊರೆದು ಬಿಜೆಪಿ ಸೇರಿದ 17 ನಾಯಕರದ್ದು ದೇವದಾಸಿ ಅವರ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರು ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದಾಸಿಯರದ್ದು ಯಾವ ಪರಿಸ್ಥಿತಿ ಇದೆ ಅದೇ ರೀತಿ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ತಂದವರದ್ದಾಗಿದೆ ಎಂದು ಎಂದು ಮೂದಲಿಸಿದ್ದಾರೆ.

ಅದೇ ರೀತಿ ಅನುಕಂಪವು ಅವರ ಮೇಲಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ, ಬೇಗ ಗಂಡನ ಹೆಸರು ಅವರಿಗೆ ಸಿಗಲಿ ಎಂದು ಮೂದಲಿಸಿದರು.

 ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮೂಲ ಬಿಜೆಪಿ ಜನ ಕಾಯುತ್ತಾ ಕುಳಿತಿದ್ದಾರೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸುಲಭವಾಗಿ ಬಿಡುತ್ತಿಲ್ಲ, ದೈರ್ಯ ನೀಡುತ್ತಿಲ್ಲ. ಸಚಿವ ಸಂಪುಟ ರಚನೆ ಆಗೋದು ಅನುಮಾನ ಇದೆ. 

ಈಗ ಇದ್ದವರೆಗೆ ಬಿಟ್ಟು ಕೊಡೊಕೆ ಮನಸ್ಸು ಇಲ್ಲ. ಸಂಪುಟ ವಿಸ್ತರಣೆಯಾದ ಮೇಲೆ ಈ ನಾಯಕರ ಸ್ಥಿರತೆ ಇರತ್ತದೇಯಾ ಎನ್ನೋದು ಕಷ್ಟ ಎಂದು ಸಿಎಂ ಇಬ್ರಾಹಿಂ ನುಡಿದರು.

ಇನ್ನು ಬಿಜೆಪಿಯಲ್ಲಿ 40 ಜನ ಓರಿಜನಲ್ ಜನ ಇದ್ದಾರೆ. ಇರೋರನ್ನು ತೆಗಿಬೇಕು ಇದು ಕಷ್ಟ. ಸರ್ಕಾರ ಇನ್ನೂ ಟೇಕಾಪ್ ಆಗಿಲ್ಲ. ಶಾಸಕರ ಅನುದಾನಕ್ಕೆ ಹಣ ಬರ್ತಿಲ್ಲ. ರೈತ ಪರ ಬಜೆಟ್ ಮಂಡನೆ ಮಾಡುತ್ತೇವೆ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ, ಜೇಬಿನಲ್ಲಿ ಬಿಡಿಗಾಸು ಇಲ್ಲ ಏನು ಬಜೆಟ್ ಮಂಡನೆ ಮಾಡ್ತಾರೆ. ಖಾಲಿ ಕಾಗದದಲ್ಲಿ ಖಜಾನೆಯಲ್ಲಿ ದುಡ್ಡು ಬೇಕಲ್ಲ. ರೈತರ ಸಾಲ ಮನ್ನಾ ಎಲ್ಲಿ ಹೋಯಿತು ದುಡ್ಡು ಯಾಕೆ ಕೊಡಲಿಲ್ಲ ಎಂದರು.

ಸಿಎಂ ಬಿಎಸ್​ವೈ ದಾವೂಸ್ ಗೆ ಹೋಗಿ ಬಂದು ಹುಚ್ಚರ ಕಲ್ಪನೆಯಲ್ಲಿದ್ದಾರೆ. ಪರಿಸ್ಥಿತಿ ದೆಹಲಿ ನಾಯಕರಿಗೆ ಹೇಳಿ ಹಣ ಬಿಡುಗಡೆಗೆ ಒತ್ತಾಯ ಹಾಕಬೇಕು. ಹೆಚ್​. ವಿಶ್ವನಾಥ ಅವರಿಗೆ ಒಳ್ಳೆಯದಾಗಲಿ.

ನೊಂದಂತವರಿಗೆ ನಾವು ಜಾಸ್ತಿ ನೋವು ಮಾಡೋದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಚಿಂತೆ ಇಲ್ಲ. ನಾನು ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಉಳಿಸೋಕೆ ಓಡಾಡುತ್ತಿದ್ದೇನೆ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com