ನಿಖಿಲ್ ಎಲ್ಲಿದ್ದೀಯಪ್ಪಾ'ಆಯ್ತು ಈಗ ಮಿಣಿ ಮಿಣಿ ಟ್ರೋಲ್ : ಹೆಚ್. ಡಿ. ಕುಮಾರಸ್ವಾಮಿ ಕಿಡಿ

ನಿಖಿಲ್ ಎಲ್ಲಿದ್ದೀಯಪ್ಪಾ" ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಟ್ರೋಲ್ ವ್ಯಂಗ್ಯಕ್ಕೂ ಕಾರಣವಾದಂತೆ ಮಂಗಳೂರಿನಲ್ಲಿ ಆದಿತ್ಯರಾವ್ ಇಟ್ಟಿದ್ದು ಮಿಣಿ ಮಿಣಿ ಪೌಡರ್ ಎಂಬ ಹೇಳಿಕೆಯೂ ಅಷ್ಟೇ ಟ್ರೋಲ್ ಮತ್ತು ವ್ಯಂಗ್ಯಕ್ಕೆ ಕಾರಣವಾಗಿದೆ.ಯಾರದ್ದೇ ವಾಟ್ಸಪ್ ನೋಡಲೀ ಸಾಮಾಜಿಕ ಜಾಲತಾಣಗಳಲ್ಲಾಗಲೀ ಇತ್ತೀಚೆಗೆ ಮಿಣಿ ಮಿಣಿಯದ್ದೇ ಸದ್ದು.
ಎಚ್. ಡಿ ಕುಮಾರಸ್ವಾಮಿ
ಎಚ್. ಡಿ ಕುಮಾರಸ್ವಾಮಿ

ಬೆಂಗಳೂರು: ನಿಖಿಲ್ ಎಲ್ಲಿದ್ದೀಯಪ್ಪಾ" ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಟ್ರೋಲ್ ವ್ಯಂಗ್ಯಕ್ಕೂ ಕಾರಣವಾದಂತೆ ಮಂಗಳೂರಿನಲ್ಲಿ ಆದಿತ್ಯರಾವ್ ಇಟ್ಟಿದ್ದು ಮಿಣಿ ಮಿಣಿ ಪೌಡರ್ ಎಂಬ ಹೇಳಿಕೆಯೂ ಅಷ್ಟೇ ಟ್ರೋಲ್ ಮತ್ತು ವ್ಯಂಗ್ಯಕ್ಕೆ ಕಾರಣವಾಗಿದೆ.ಯಾರದ್ದೇ ವಾಟ್ಸಪ್ ನೋಡಲೀ ಸಾಮಾಜಿಕ ಜಾಲತಾಣಗಳಲ್ಲಾಗಲೀ ಇತ್ತೀಚೆಗೆ ಮಿಣಿ ಮಿಣಿಯದ್ದೇ ಸದ್ದು.

ತಮ್ಮ ಮಿಣಿ ಮಿಣಿ ಹೇಳಿಕೆಗೆ ವ್ಯಕ್ತವಾಗುತ್ತಿರುವ ವ್ಯಂಗ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿರುವುದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿಗರ ಅನುವಂಶವೇ ಪಾಕಿಸ್ತಾನದ್ದು. ಹೀಗಾಗಿ ಅವರಿಗೆ ಕನ್ನಡದ ಪದಗಳು ತಾತ್ಸಾರ.ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ‌ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ‌ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ‌ ಎಂದಿದ್ದಾರೆ

ಈ ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ.ಎದುರಲ್ಲಿ‌ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ನಿಂತಿದೆ.ತಾವು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ‌. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ 'ರಾವ್' ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ‌ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ ಎಂದು ಕುಟುಕಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com