'ನಾನೊಬ್ಬ ರಾಜಕಾರಣಿ ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಆಪೇಕ್ಷೆಗಳಿವೆ'

ನಾನೊಬ್ಬ ರಾಜಕಾರಣಿ, ಸನ್ಯಾಸಿ ಅಲ್ಲ. ನನಗೂ ಸಹಜವಾಗಿ ರಾಜಕೀಯ ಆಪೇಕ್ಷೆಗಳಿವೆ. ಆದರೆ, ಇದರ ಬಗ್ಗೆ ನಿರ್ಧರಿಸಲು ಮುಖ್ಯಮಂತ್ರಿ ಇದ್ದಾರೆ ಎಂದು  ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಬೆಂಗಳೂರು:  ನಾನೊಬ್ಬ ರಾಜಕಾರಣಿ, ಸನ್ಯಾಸಿ ಅಲ್ಲ. ನನಗೂ ಸಹಜವಾಗಿ ರಾಜಕೀಯ ಆಪೇಕ್ಷೆಗಳಿವೆ. ಆದರೆ, ಇದರ ಬಗ್ಗೆ ನಿರ್ಧರಿಸಲು ಮುಖ್ಯಮಂತ್ರಿ ಇದ್ದಾರೆ ಎಂದು  ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿ
ದ್ದಾರೆ.

ವಿಧಾನ ಪರಿಷತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಗೊಂದಲ ಮನೆ ಮಾಡಿದೆ.  ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಒಂದು ವಿಧಾನಪರಿಷತ್ ಸ್ಥಾನಕ್ಕೆ ಉಪಚುನಾವಣೆಯ ದಿನ ನಿಗದಿಯಾಗಿದೆ. 

ಫೆ. 17ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಹೆಚ್ಚಿನ ಶಾಸಕ ಬಲ ಇರುವ ಬಿಜೆಪಿ ಈ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತ. ಆದರೆ, ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಪಕ್ಷದೊಳಗೆ ಇನ್ನೂ ನಿವಾರಣೆಯಾಗಿಲ್ಲ.

ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಗೆ ಟಿಕೆಟ್ ಕೊಡುವುದೋ ಅಥವಾ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ ಆರ್. ಶಂಕರ್ ಅವರಿಗೆ ಟಿಕೆಟ್ ಕೊಡುವುದೋ ಎಂಬ ಧರ್ಮಸಂಕಟದಲ್ಲಿ ಯಡಿಯೂರಪ್ಪ ಸಿಲುಕಿಕೊಂಡಿದ್ದಾರೆ.

ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಯ ಬೆನ್ನಿಗೆ ನಿಂತಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಸು ಆರ್. ಶಂಕರ್ ಮೇಲಿದೆ. ರಾಣೆಬೆನ್ನೂರು ಟಿಕೆಟ್ ತ್ಯಾಗ ಮಾಡಿದರೆ ಸಚಿವ ಸ್ಥಾನ ಮತ್ತು ಪರಿಷತ್ ಸ್ಥಾನ ಕೊಡಿಸುವುದಾಗಿ ಆರ್. ಶಂಕರ್​ಗೆ ವಾಗ್ದಾನ ನೀಡಿದ್ದ ಯಡಿಯೂರಪ್ಪಗೆ ಈಗ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ಧಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com