ಸಚಿವ ಸಂಪುಟ ವಿಸ್ತರಣೆ ಇನ್ನೂ ವಿಳಂಬವಾದರೂ ತೊಂದರೆಯಿಲ್ಲ: ರಮೇಶ್ ಜಾರಕಿಹೊಳಿ

ಸಂಪುಟ ವಿಸ್ತರಣೆ ಇನ್ನೂ ವಿಳಂಬವಾದರೂ ಪರವಾಗಿಲ್ಲ,  ನಮಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ನಂಬಿಕೆ ಇದೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಂಗಳೂರು: ಸಂಪುಟ ವಿಸ್ತರಣೆ ಇನ್ನೂ ವಿಳಂಬವಾದರೂ ಪರವಾಗಿಲ್ಲ,  ನಮಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ನಂಬಿಕೆ ಇದೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಉಪ ಮುಖ್ಯಮಂತ್ರಿ ಸ್ಥಾನವನ್ನು ಕೇಳಿಲ್ಲ, ಕೇಳುವುದೂ ಇಲ್ಲ. ಸಂಪುಟ ವಿಸ್ತರಣೆ ಇನ್ನೂ ಹದಿನೈದು ದಿನ ವಿಳಂಬವಾದರೂ ತೊಂದರೆಯಿಲ್ಲ. ಉಪಮುಖ್ಯಮಂತ್ರಿ ಸ್ಥಾನ ಎರಡಲ್ಲದಿದ್ದರೆ ಇನ್ನೂ ಮೂರು ಮಾಡಲಿ ನನ್ನದೇನೂ ಅಭ್ಯಂತರವಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

ಸೋತವರಿಗೆ ಸಚಿವ ಸ್ಥಾನ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು, ಗೆದ್ದ ಹನ್ನೊಂದು ಶಾಸಕರನ್ನು ಮಂತ್ರಿ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಸೋತವರನ್ನೂ ಮಂತ್ರಿ ಮಾಡಬೇಕು ಎನ್ನುವುದೂ ನಮ್ಮ ಬೇಡಿಕೆಯಾಗಿದೆ. ಸೋತವರ ಬಗ್ಗೆ ಹೈಕಮಾಂಡ್ ತೀರ್ಮಾನ ‌ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 
ಯಡಿಯೂರಪ್ಪನವರು ಹಿರಿಯ ನಾಯಕರು, ಅವರಿಗೆ ವರಿಷ್ಠರು ಸಮಯ ಕೊಡುತ್ತಾರೆ. ವರಿಷ್ಠರಿಗೆ ಸಿಎಎನಂತಹ ಸವಾಲು ಎದುರಿಗಿದೆ. ಇನ್ನೂ ಹದಿನೈದು ದಿನ ತಡವಾಗಲಿ ಪರವಾಗಿಲ್ಲ. ಆದರೆ ಕೆಲವರನ್ನು ಸಂಪುಟದಿಂದ ಕೈಬಿಡುವ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಬರೀ ಜಾರಕಿಹೊಳಿ ಒಬ್ಬನಿಂದ ಎಲ್ಲಾ ಆಗಿಲ್ಲ. ಎಲ್ಲಾ ಹದಿನೇಳು ಶಾಸಕರೂ‌ ನಾಯಕರೇ ಆಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಮಿತ್ ಶಾ ಅವರದ್ದು ಯಾವ ತಪ್ಪೂ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com