ಮತ್ತೆ ಲಾಕ್ ಡೌನ್? ಬಿಜೆಪಿ ಸಂಸದರು, ಶಾಸಕರ ತುರ್ತುಸಭೆ ಕರೆದ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ಸಂಜೆ 4 ಗಂಟೆಗೆ ಬಿಜೆಪಿ ಶಾಸಕರು ಮತ್ತು ಸಂಸದರ ತುರ್ತುಸಭೆ ಕರೆದಿದ್ದಾರೆ. ಮಹಾಮಾರಿ ಕೋರೋನಾ ವಿರುದ್ಧ ಹೋರಾಟ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಜೂನ್ 26 ರಂದು ಕೂಡ ಸಿಎಂ ಸಭೆ ಕರೆದಿದ್ದರು
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ಸಂಜೆ 4 ಗಂಟೆಗೆ ಬಿಜೆಪಿ ಶಾಸಕರು ಮತ್ತು ಸಂಸದರ ತುರ್ತುಸಭೆ ಕರೆದಿದ್ದಾರೆ.

ಮಹಾಮಾರಿ ಕೋರೋನಾ ವಿರುದ್ಧ ಹೋರಾಟ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಜೂನ್ 26 ರಂದು ಕೂಡ ಸಿಎಂ ಸಭೆ ಕರೆದಿದ್ದರು, ಆದರೆ ಈ ಬಾರಿ ಕೇವಲ ಬಿಜೆಪಿ ಶಾಸಕರು ಮತತ್ತು ಸಂಸದರು ಭಾಗವಹಿಸಲಿದ್ದಾರೆ.ಮತ್ತೆ ಲಾಕ್ ಡೌನ್ ಅವಶ್ಯಕತೆಯಿದೆಯೇ ಅಥವಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಬೇಕೆ ಎಂಬ ಬಗ್ಗೆ ಸಮಾಲೋಚನೆ ನಡೆಯಲಿದೆ.

ಈ ಮೊದಲು ತಮ್ಮ ಕ್ಷೇತ್ರದಲ್ಲಿ ಒಂದೋ ಅಥವಾ ಎರಡು ಕೊರೋನಾ ಕೇಸ್ ಇತ್ತು ಆದರೆ ಈ ದಿನಕ್ಕೆ 12-15 ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಬೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡತ್ತಿರುವುದಾಗಿ ಶಾಸಕ ರವಿ ಸುಬ್ರಮಣ್ಯ ತಿಳಿಸಿದ್ದಾರೆ.

ಅಂತರ ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಕಟ್ಟು ನಿಟ್ಟಿನ ಕ್ರಮ ಜಾರಿ ಮಾಡುವ ಅವಶ್ಯಕತೆಯಿದೆ, ಬೆಂಗಳೂರಿನ ಎಲ್ಲಾ ಸ್ಥಳಗಳಲ್ಲೂ ಜನತೆ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿದ್ದಾರೆ. ಜೊತೆಗೆ ಎಲ್ಲಾ ಸ್ಥಳಗಳಿಂದಲೂ ಜನ ಬೆಂಗಳೂರಿಗೆ ಆಮಿಸುತ್ತಿದ್ದಾರೆ ಎಂದು ಸಂಸದ ಪಿಸಿ ಮೋಹನ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಬಾರಿಯ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ಧಿ ವಿಷಯಗಳ ಬಗ್ಗೆಯೂ ಚರ್ಚಿಸಲಿದ್ದು, ಸಿಎಂ ಅವರ ಗೃಹ ಕಚೇರಿಯಲ್ಲಿ ನಡೆಯಲಿದೆ. ಶಾಸಕರಾದ ಎಸ್‌ಆರ್ ವಿಶ್ವನಾಥ್, ಎಸ್ ರಘು, ರವಿ ಸುಬ್ರಮಣ್ಯ  ಅರವಿಂದ್ ಲಿಂಬಾವಳಿ ಜೊತೆಗೆ ಸಚಿವರಾದ ಸಿ.ಎನ್.ಅಶ್ವತ್ ನಾರಾಯಣ್, ಸುರೇಶ್ ಕುಮಾರ್, ಆರ್ ಅಶೋಕ್, ಬ್ರೈರತಿ ಬಸವರಾಜ್, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com