ಚೀನಾ ಮೇಲೆ ಕೇಂದ್ರ ಸರ್ಕಾರ ಡಿಜಿಟಲ್ ಸ್ಟ್ರೈಕ್ ನಡೆಸಿದೆ: ಎಸ್ಎಂ ಕೃಷ್ಣ

ಲಡಾಕ್ ಗಡಿಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಸೇನಾ ಯೋಧರ ನಡುವಿನ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿರುವುದಕ್ಕೆ ಪ್ರತಿಕಾರವಾಗಿ ಚೀನಾ ಮೂಲದ 59 ಅಪ್ಲಿಕೇಶನ್ ಗಳನ್ನು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ...
ಎಂಎಸ್ ಕೃಷ್ಣ
ಎಂಎಸ್ ಕೃಷ್ಣ

ಬೆಂಗಳೂರು: ಲಡಾಕ್ ಗಡಿಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಸೇನಾ ಯೋಧರ ನಡುವಿನ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿರುವುದಕ್ಕೆ ಪ್ರತಿಕಾರವಾಗಿ ಚೀನಾ ಮೂಲದ 59 ಅಪ್ಲಿಕೇಶನ್ ಗಳನ್ನು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ಡಿಜಿಟಲ್ ಸ್ಟ್ರೈಕ್ ನಡೆಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಅವರು, ಆ್ಯಪ್ ಗಳ ನಿಷೇಧವು ಅಂತ್ಯವಲ್ಲ. ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಗಮನಿಸಿದರೆ ಇನ್ನೂ ಹೆಚ್ಚಿನವು ಬರಲಿವೆ. 

ಚೀನಾ ತನ್ನ ನಿರ್ಲಜ್ಜ, ನಿರ್ದಯ ಮತ್ತು ರಕ್ತ-ದಾಹದ ನಡವಳಿಕೆಯಿಂದ ಇತರ ದೇಶಗಳ ವಿರೋಧ ಕಟ್ಟಿಕೊಳ್ಳಲಿದೆ ಎಂದಿದ್ದಾರೆ. ಭಾರತೀಯರ ಸಾಮೂಹಿಕ ಸ್ವಾಭಿಮಾನ, ಸಾಮೂಹಿಕ ಘನತೆ ಮತ್ತು ಸಾಮೂಹಿಕ ಗೌರವವು ಇಲ್ಲಿ ಮತ್ತು ಅಲ್ಲಿನ ಕೆಲವು ರೂಪಾಯಿಗಳಿಗಿಂತ ಹೆಚ್ಚು ಮಹತ್ವದ್ದಾಗಿದೆ. 

ಮೋದಿಯ ಲೇಹ್ ಭೇಟಿ, ಮತ್ತು ಸೈನಿಕರೊಂದಿಗಿನ ಮಾತುಕತೆ ಚೀನಾಗೆ ಭಯ ಹುಟ್ಟಿಸಿದೆ ಎಂದಿದ್ದಾರೆ. ರಾಜತಾಂತ್ರಿಕ ಮತ್ತು ಸೇನೆಯಲ್ಲಿ ವಿವಾದಗಳು ಮಾತುಕತೆ ಹಂತದಲ್ಲಿದ್ದಾಗ ಯಾರೊಬ್ಬರೂ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಾರದು ಎಂದು ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆ ಅದು ಭಾರತದ ಹೇಳಿಕೆಗೆ ಬೆದರಿದೆ ಎಂದರ್ಥ ಎಂದು ಎಸ್.ಎಂ.ಕೃಷ್ಣ  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com