ಖಾದರ್
ಖಾದರ್

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ: ಶಾಸಕ ಖಾದರ್ ಆರೋಪ

ಕೊರೋನಾ ಚಿಕಿತ್ಸೆ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರು ಆರೋಪಿಸಿದ್ದಾರೆ.

ಮಂಗಳೂರು: ಕೊರೋನಾ ಚಿಕಿತ್ಸೆ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರು ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರೂ.500 ಇರುವ ಸ್ಯಾನಿಟೈಜರ್‌ಗಳನ್ನು ರೂ. 900ಗೆ ಮತ್ತು ರೂ.1,200 ಇರುವ ಥರ್ಮಲ್ ಮೀಟರ್ ಗಳಿಗೆ ರೂ.9,000 ಸರ್ಕಾರ ಪಾವತಿ ಮಾಡಿದೆ. 1000 ವೆಂಟಿಲೇಟರ್ ಗಳನ್ನು ರೂ.120 ಕೋಟಿಗೆ ಖರೀದಿ ಮಾಡಿದೆ. ಆದರೆ, ಮಾರುಕಟ್ಟೆ ದರ ಕೇವಲ ರೂ.40 ಕೋಟಿ ಹಾಗೂ 150 ಕೋಟಿ ವೆಚ್ಚದಲ್ಲಿ 4089 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದೆ. ಆದರೆ, ಅದರ ಮಾರುಕಟ್ಟೆ ದರ ಕೇವಲ ರೂ.50 ಕೋಟಿ, ರೂ.40 ಕೋಟಿ ನಲ್ಲಿ 10 ಲಕ್ಷ ಮಾಸ್ಕ್ ಖರೀದಿ ಮಾಡಿದೆ. ಹಾಗಾದರೆ ಒಂದು ಮಾಸ್ಕ್ ದರ ರೂ.400 ವೆಚ್ಚ ತಗುಲುತ್ತದೆ. ಇಷ್ಟೆಲ್ಲ ಖರೀದಿ ಮಾಡುವಾಗ ಕಡಿಮೆ ವೆಚ್ಚದಲ್ಲಿ ಬರಬೇಕೇ ಹೊರತು ಇಲ್ಲಿ ದುಪ್ಪಟ್ಟಾಗಿದೆ. ಇದರಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲಿಗೆ ಬಂದಿದೆ ಎಂದು ಆರೋಪಿಸಿದ್ದಾರೆ. 

ಕೊರೋನಾ ವೈರಸ್ ರಾಜ್ಯಕ್ಕೆ ಕಾಲಿಟ್ಟು 3 ತಿಂಗಳುಗಳು ಕಳೆದಿವೆ. ಆದರೂ ರಾಜ್ಯ ಸರ್ಕಾರ ಅಗತ್ಯ ರೋಗಿಗಳಿಗೆ ಆ್ಯಂಬುಲೆನ್ಸ್ ರವಾನಿಸಲು ಸಂಕಷ್ಟಪಡುತ್ತಿದೆ. ಅಗತ್ಯ ಇರುವ ರೋಗಿಗಳಿಗೆ ಆ್ಯಂಬುಲೆನ್ಸ್ ರವಾನಿಸುವ ಬದಲು ಸರ್ಕಾರ ಅಂತ್ಯ ಸಂಸ್ಕಾರಗಳಿಗೆ ರವಾನಿಸುತ್ತಿವೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com