ಬಿ.ಎಲ್. ಸಂತೋಷ್ ವಿಧಾನಸೌಧಕ್ಕೆ ಬಂದರೆ ನಾನೇ ವಿವರ ಕೊಡುತ್ತೇನೆ: ಸಿದ್ದರಾಮಯ್ಯ

ಸಂತೋಷ್ ಅವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಬಂದರೆ ತಾವು ನಡೆಸಿರುವ ಅಧಿಕಾರಿಗಳ ಸಭೆಗಳ ವಿವರದ ಜೊತೆ ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಬುದ್ಧಿ ಹೇಳಿ ತಿದ್ದಲು ತಾವು ಮಾಡಿರುವ ಪ್ರಯತ್ನಗಳ ವಿವರಗಳನ್ನೆಲ್ಲ ಕೊಡುವುದಾಗಿ ಮಾತಿನ ಚಾಟಿ ಬೀಸಿದ್ದಾರೆ.
ಬಿಎಲ್ ಸಂತೋಷ್
ಬಿಎಲ್ ಸಂತೋಷ್

ಬೆಂಗಳೂರು: ಪ್ರತಿಪಕ್ಷ ನಾಯಕನಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್.ಎಸ್.ಎಸ್ ಮುಖಂಡ ಬಿ.ಎಲ್.ಸಂತೋಷ್ ಆರೋಪಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂತೋಷ್ ಅವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಬಂದರೆ ತಾವು ನಡೆಸಿರುವ ಅಧಿಕಾರಿಗಳ ಸಭೆಗಳ ವಿವರದ ಜೊತೆ ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಬುದ್ಧಿ ಹೇಳಿ ತಿದ್ದಲು ತಾವು ಮಾಡಿರುವ ಪ್ರಯತ್ನಗಳ ವಿವರಗಳನ್ನೆಲ್ಲ ಕೊಡುವುದಾಗಿ ಮಾತಿನ ಚಾಟಿ ಬೀಸಿದ್ದಾರೆ.

ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ. ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ ಇಲ್ಲವೇ ಸೇನಾ ಮುಖ್ಯಸ್ಥರೇ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಈ ರೀತಿ ಹೇಳಿಕೆ ನೀಡಬೇಕಾಗಿದ್ದು ಪ್ರಧಾನಿ ಮೋದಿಯೇ ಹೊರತು ಬೇರಾರು ಅಲ್ಲ. ಆದರೆ ಮೋದಿ ಹೇಳಿಕೆ ನೀಡದೇ ಮೌನವಹಿಸಿದ್ದಾರೆ.

ಸಂತೋಷ್ ಚೀನಾ ಸೇನೆ ಸಂಬಂಧ, ಪ್ರಧಾನಿಯವರಿಂದ ಹೇಳಿಕೆ ಕೊಡಿಸಿ ಚೀನಾ ಒಳನುಸುಳಿಲ್ಲ ಎಂದಾದರೆ ಹಿಂದೆ
ಸರಿದಿದ್ದಾದರೂ ಎಲ್ಲಿಂದ ಎನ್ನುವುದನ್ನಾದರೂ ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ಬಿ.ಎಲ್.ಸಂತೋಷ್ ಕೇಳಿದ್ದಾರೆ. ಅವರಿಗೆ ಲೆಕ್ಕವನ್ನು ಕೊಡುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ನಾಗರೀಕರನ ಖಾತೆಗೆ ಜಮೆಮಾಡಿರುವ 15 ಲಕ್ಷ ರೂಪಾಯಿಗೆ ಲೆಕ್ಕ ಹಾಗೂ ಕೊರೊನಾಗಾಗಿ ಸಾರ್ವಜನಿಕರಿಂದ ಪಿಎಂ ಕೇರ್ಸ್ ಗೆ ಸಂಗ್ರಹಿಸಿರುವ ದೇಣಿಗೆಯ ಲೆಕ್ಕ ಕೊಡಲಿ ಎಂದು ಸಿದ್ದರಾಮಯ್ಯ ಮರು ಸವಾಲೆಸದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com