ತಪ್ಪುಗಳನ್ನು ತಿದ್ದಿಕೊಳ್ಳದೆ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯ: ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ

ಜನತೆಯ ಕಷ್ಟ-ನಷ್ಟಕ್ಕೆ ಕಾರಣವಾದ ಪ್ರಭುತ್ವದ ಜನವಿರೋಧಿ ನಡವಳಿಕೆಗಳಿಗೆ ಸಹಕರಿಸುವುದು ಜನದ್ರೋಹವಾಗುತ್ತದೆ. ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಜನರ ಪರ, ಸರ್ಕಾರದ ಪರ ಅಲ್ಲ ಎಂದು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಸೂಚನೆಯನ್ನು ನೀಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಜನತೆಯ ಕಷ್ಟ-ನಷ್ಟಕ್ಕೆ ಕಾರಣವಾದ ಪ್ರಭುತ್ವದ ಜನವಿರೋಧಿ ನಡವಳಿಕೆಗಳಿಗೆ ಸಹಕರಿಸುವುದು ಜನದ್ರೋಹವಾಗುತ್ತದೆ.ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಜನರ ಪರ, ಸರ್ಕಾರದ ಪರ ಅಲ್ಲ ಎಂದು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಸೂಚನೆಯನ್ನು ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ರಾಜ್ಯ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಜನರ ಪರವಾಗಿದ್ದೇವೆ ಹೊರತು ಸರ್ಕಾರದ ಪರ ಅಲ್ಲ ಎಂದಿದ್ದಾರೆ. ಸಂಕಷ್ಟದ ಕಾಲದಲ್ಲಿ ಸಹಕಾರ ನೀಡಿದ್ದೇವೆ. ಆದರೆ ತಪ್ಪುಗಳನ್ನು ತಿದ್ದಿಕೊಳ್ಳದೆ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಕಷ್ಟದ ಕಾಲದಲ್ಲಿ ಸಹಕಾರ,ವಿರೋಧಪಕ್ಷದ ಜವಾಬ್ದಾರಿ ಎಂಬ ಕಾರಣಕ್ಕೆ ಹೆಚ್ಚುಕಡಿಮೆ 3ತಿಂಗಳು ಸರ್ಕಾರದ ಅಕ್ರಮ- ವೈಫಲ್ಯಗಳನ್ನು ಬಹಿರಂಗವಾಗಿ ಪ್ರಶ್ನಿಸದೆ ಪತ್ರಗಳನ್ನಷ್ಟೇ ಬರೆದಿದ್ದೆ. ಮುಖ್ಯಮಂತ್ರಿ ಬಿಎಸ್‌ವೈ ತಿದ್ದಿಕೊಳ್ಳದೆ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com