ಬಿಜೆಪಿ ಬೇಗುದಿ: ರಾಜ್ಯಸಭೆ ಟಿಕೆಟ್ ಗಾಗಿ 'ಕತ್ತಿ' ಕೊತ ಕೊತ; 'ಕೋರೆ' ಶಾಂತ!

ರಾಜ್ಯಸಭೆ ಚುನಾವಣೆ ಟಿಕೆಟ್ ಗಾಗಿ  ಬಿಜೆಪಿಯಲ್ಲಿ ಲಾಬಿ ಮುಂದುವರಿದಿದೆ,  ಹಾಲಿ ಸಂಸದ ಪ್ರಭಾಕರ ಕೋರೆ ಯಾವುದೇ ಲಾಬಿ ಮಾಡದೇ ಹೈಕಮಾಂಡ್ ಮೇಲೆ ಭಾರ ಹಾಕಿ ಶಾಂತವಾಗಿ ಕುಳಿತಿದ್ದಾರೆ.
ಉಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ
ಉಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ

ಬೆಳಗಾವಿ: ರಾಜ್ಯಸಭೆ ಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಲಾಬಿ ಮುಂದುವರಿದಿದೆ, ಹಾಲಿ ಸಂಸದ ಪ್ರಭಾಕರ ಕೋರೆ ಯಾವುದೇ ಲಾಬಿ ಮಾಡದೇ ಹೈಕಮಾಂಡ್ ಮೇಲೆ ಭಾರ ಹಾಕಿ ಶಾಂತವಾಗಿ ಕುಳಿತಿದ್ದಾರೆ.

8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಉಮೇಶ್ ಕತ್ತಿ ಮತ್ತು ಅವರಸಹೋದರ ರಮೇಶ್ ಕತ್ತಿ ರಾಜ್ಯಸಭೆ ಟಿಕೆಟ್ ಗಾಗಿ ಲಾಬಿ ಮುಂದುವರಿಸಿದ್ದಾರೆ. ಪ್ರಭಾಕರ್ ಕೊರೆ ಅವಧಿ ಮುಗಿದಿರುವ ಕಾರಣ ತಮ್ಮ ಸಹೋದರನಿಗೆ ಟಿಕೆಟ್ ನೀಡುವಂತೆ ಲಾಬಿ ನಡೆಸಿದ್ದಾರೆ, ಈ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ  ಸಚಿವ ಸ್ಥಾನ ನೀಡುವಂತೆ ಒತ್ತ ಹೇರಿದ್ದರು ಉಮೇಶ್ ಕತ್ತಿ. 

ಉಮೇಶ್ ಕತ್ತಿಯೂ ಟಿಕೆಟ್ ಗಾಗಿ ಒತ್ತಡ ಹಾಕಲಿ ನಾನು ಕೂಡ ಬೇಡಿಕೆಯಿಟ್ಟಿದ್ದೇನೆ, ಪಕ್ಷದ ಹೈ ಕಮಾಂಡ್ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕೋರೆ ಹೇಳಿದ್ದಾರೆ.

ರಮೇಶ್ ಕತ್ತಿ ಅವರಿಗೆ ಚಿಕ್ಕೋಡಿಯಿಂದ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪಲು ನಾನು ಕಾರಣವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಲೋಕಸಭೆ ಚುನಾವಣೆ ಟಿಕೆಟ್ ಅನ್ನು ನನಗೂ ನೀಡಿಲ್ಲ, ರಮೇಶ್ ಕತ್ತಿಗೂ ನೀಡಿಲ್ಲ ಅಂತಿಮವಾಗಿ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ನೀಡಿತು ಎಂದು ಹೇಳಿದ್ದಾರೆ, ಸದ್ಯ  ರಾಜ್ಯ ರಾಜಕಾರಣದಲ್ಲಿ  ಯಾವುದೇ  ನಾಯಕತ್ವದ ಬದಲಾವಣೆಯಿಲ್ಲ, ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com