ಸಿದ್ದರಾಮಯ್ಯ- ಡಿಕೆಶಿ ಬಣಕ್ಕೆ ಬೇಕಿಲ್ಲ ಯಡಿಯೂರಪ್ಪ ಸರ್ಕಾರದ ಪತನ!

ಯಡಿಯೂರಪ್ಪ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರುಗಳೇ 'ಕತ್ತಿ' ಮಸೆಯುತ್ತಿದ್ದಾರೆ, ಇಂತಹ ಹೊತ್ತಲ್ಲೇ ತನ್ನ ರಾಜಕೀಯ ದ್ವೇಷ ಬದಿಗಿರಿಸಿರುವ ಕಾಂಗ್ರೆಸ್ ಕೂಡ ಬಿಜೆಪಿ ಸರ್ಕಾರ ಮುಂದುವರಿಯಲಿ ಎಂಬ ಆಶಯ ವ್ಯಕ್ತ ಪಡಿಸಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಯಡಿಯೂರಪ್ಪ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರುಗಳೇ 'ಕತ್ತಿ' ಮಸೆಯುತ್ತಿದ್ದಾರೆ, ಇಂತಹ ಹೊತ್ತಲ್ಲೇ ತನ್ನ ರಾಜಕೀಯ ದ್ವೇಷ ಬದಿಗಿರಿಸಿರುವ ಕಾಂಗ್ರೆಸ್ ಕೂಡ ಬಿಜೆಪಿ ಸರ್ಕಾರ ಮುಂದುವರಿಯಲಿ ಎಂಬ ಆಶಯ ವ್ಯಕ್ತ ಪಡಿಸಿದೆ.

ತಮ್ಮ ಭಿನ್ನಭಿಪ್ರಾಯ ಏನೇ ಇರಲಿ ಅದೆಲ್ಲವನ್ನು ಬದಿಗೊತ್ತಿರುವ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಯಡಿಯೂರಪ್ಪ ಸರ್ಕಾರ ಮುಂದಿನ ವಿಧಾನಸಭೆ ಚುನಾವಣೆ ವರೆಗೂ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಸಿದ್ದು ಬಣದ ಕಾಂಗ್ರೆಸ್ ನಾಯಕರಾಗಲಿ ಅಥವಾ ಡಿಕೆಶಿ ಬಣದ ಕಾಂಗ್ರೆಸ್ ನಾಕರಿಗಾಗಲಿ ಯಡಿಯೂರಪ್ಪ ಸರ್ಕಾರವನ್ನು ತೊಂದರೆಗೆ ತಳ್ಳುವುದು ಇಷ್ಟವಿಲ್ಲ.

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಶಿವಕುಮಾರ್ ಅವರಿಗೆ ಪಕ್ಷವನ್ನು ಸದೃಢಗೊಳಿಸಲು 2 ವರ್ಷಗಳ ಕಾಲಾವಕಾಶ ಬೇಕಿದೆ. ಒಂದು ವೇಳೆ ಶೀಘ್ರವೇ ಚುನಾವಣೆ ಬಂದರೆ ಅದು ಶಿವಕುಮಾರ್ ಅವರಿಗೆ ಸಮಸ್ಯೆ ಎನಿಸುತ್ತದೆ  ಎಂದು ಡಿಕೆಶಿ ಬಣದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಸಿದ್ದರಾಮಯ್ಯ ಬಣದ ಕಾಂಗ್ರೆಸ್ ನಾಯಕರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಹಲವು ಬಿಜೆಪಿ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ, ಬಿಜೆಪಿಯಲ್ಲಿ ಅಸಮಾಧಾನ  ಭುಗಿಲೆದ್ದಿದೆ,  ಒಂದು ವೇಳೆ ಸರ್ಕಾರ ಬಿದ್ದರೇ ಅದಕ್ಕೆ ನಾನು ಹೊಣೆಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಬುಧವಾರ ಹೇಳಿದ್ದರು.

ಬಿಜೆಪಿ ಬಂಡಾಯ ಶಾಸಕರ ಲಾಭವನ್ನು ಸದುಪಯೋಗ ಪಡಿಸಿಕೊಳ್ಳಲು ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ, ಏಕೆಂದರೆ ಸಿದ್ದರಾಮಯ್ಯ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಪರಿಸ್ಥಿತಿಯ ಲಾಭವನ್ನು ಶಿವಕುಮಾರ್ ಪಡೆಯುತ್ತಾರೆ ಎಂಬ ಆತಂಕ ಸಿದ್ದರಾಮಯ್ಯ ಬಣಕ್ಕಿದೆ,

ಯಡಿಯೂರಪ್ಪ ಸರ್ಕಾರಕ್ಕೆ ತೊಂದರೆ ಉಂಟು ಮಾಡುವುದರಿಂದ ಹೆಚ್ಚಿನ ಲಾಭ ಸಿಗದು ಎಂದು ಕಾಂಗ್ರೆಸ್ ನಾಯಕರಿಗೆ ತಿಳಿದಿದೆ, ಬಿಜೆಪಿ ನಾಯಕರು ಅದರ ಭಿನ್ನಮತೀಯ ಶಾಸಕರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಆಗಾಗ್ಗೆ ಸಭೆ ನಡೆಸುವ ಬಗ್ಗೆ ಎಚ್ಚರದಿಂದಿರುತ್ತಾರೆ. ಕೋವಿಡ್ -19 ನಿರ್ವಹಣೆ, ವಲಸೆ ನಿರ್ವಹಣೆ ಅಥವಾ ಆರ್ಥಿಕ ಚಟುವಟಿಕೆಗಳೆಲ್ಲಾ  ಸರಾಗವಾಗಿ ನಡೆಯುತ್ತಿದೆ, ಹೀಗಾಗಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರ ಅಸಮಾಧಾನದ ಬಗ್ಗೆ ಗಮನ ನೀಡುವ ಬದಲು, ತಮ್ಮ ಪಕ್ಷದ ಶಾಸಕರ ಕಡೆ ಲಕ್ಷ್ಯ ವಹಿಸಲಿ ಎಂದು ಬಿಜೆಪಿ ಎಂಎಲ್ ಸಿ ಲೆಹರ್ ಸಿಂಗ್ ಸಿರೋಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com